ಅಲ್ಲು ಅರ್ಜುನ್ ಮನೆಗೆ ದಿಢೀರ್ ಭೇಟಿ ಕೊಟ್ಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್: ಫೋಟೋ ವೈರಲ್

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದಾರೆ. 

Aamir Khan visits tollywood star Allu Arjun residence hyderabad sgk

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯ ಹೈದರಾಬಾದ್‌ನಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಬಳಿಕ  ನಟನೆಯಿಂದ ಬ್ರೇಕ್ ಪಡೆದಿರುವ ಆಮೀರ್ ಖಾನ್ ಇದೀಗ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಮೀರ್ ಖಾನ್ ಹೈದರಾಬಾದ್‌ಗೆ ಬಂದಿದ್ದು ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದಾರೆ. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ಅವರನ್ನು ಏರ್ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್ ಅವರ ಕಾರಿನಲ್ಲಿ ತೆರಳಿದರು. ಬಾರಿ ಭದ್ರತೆಯೊಂದಿಗೆ ಪಾರ್ಕಿಂಗ್ ಕಡೆ ತೆರಳಿದ ಆಮೀರ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಮೀರ್ ಕಪ್ಪು ಟೀ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್ ಜೀನ್ಸ್ ಧರಿಸಿದ್ದರು. ವರದಿಗಳ ಪ್ರಕಾರ, ಜುಬಿಲಿ ಹಿಲ್ಸ್  ನಲ್ಲಿರುವ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಅಮೀರ್ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆಮೀರ್ ಖಾನ್ ಮುಂಬೈನಿಂದ ನೇರವಾಗಿ ಅಲ್ಲು ಅರ್ಜುನ್ ಮನೆಗೆ ಬಂದ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಸೌತ್ ಮತ್ತು ಬಾಲಿವುಡ್ ಸ್ಟಾರ್‌ಗಳ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. 

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮತ್ತು ಸೌತ್ ಸ್ಟಾರ್‌ಗಳ ನಡುವಿನ ಬಾಂಧವ್ಯ ಉತ್ತಮವಾಗಿದೆ. ಆಗಾಗ ಸೌತ್ ಮತ್ತು ನಾರ್ತ್ ಸ್ಟಾರ್‌ಗಳು ಭೇಟಿಯಾಗುತ್ತಿರುತ್ತಾರೆ. ಸಮಾರಂಭಗಳಲ್ಲಿ ಒಟ್ಟಿಗೆ ಸೇರುತ್ತಿರುತ್ತಾರೆ. ಅಷ್ಟೆಯಲ್ಲದೇ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸೌತ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಬಾಲಿವುಡ್ ಸ್ಟಾರ್ಸ್ ನಟಿಸಲು ಮುಂದೆ ಬಂದಿದ್ದಾರೆ, ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. 

Netflix Networking Party: ನೆಟ್‌ಫ್ಲಿಕ್ಸ್‌ ನೆಟ್‌ವರ್ಕಿಂಗ್ ಪಾರ್ಟಿಯಲ್ಲಿ ಆಮೀರ್‌ ಖಾನ್‌, ಕಿರಣ್‌ ರಾವ್‌

ಆಮೀರ್ ಖಾನ್ ಇದುವರೆಗೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಲಾಲ್ ಸಿಂಗ್ ಚಡ್ಡಾ ಸೋಲಿನ ಬಳಿಕ ಆಮೀರ್ ಖಾನ್ ಬ್ರೇಕ್ ಪಡೆದಿದ್ದಾರೆ. ಹಾಗಾಗಿ ಆಮೀರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ದಿಢೀರ್ ಅಂತ ಟಾಲಿವುಡ್ ಕಡೆ ಬಂದಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸೌತ್ ಸ್ಟಾರ್ ಗಳ ಜೊತೆ ಸಿನಿಮಾ ಮಾಡುತ್ತಾರಾ ಅಥವಾ ಸೌತ್ ಸ್ಟಾರ್ರ್ಸ್ ಸಿನಿಮಾಗೆ ಬಂಡವಾಳ ಹೂಡುತ್ತಾರಾ ಎನ್ನುವುದು ಬಹಿರಂಗವಾಗಬೇಕಿದೆ. ಮೂಲಗಳ ಪ್ರಕಾರ ಸೌಹಾರ್ದಯುತ ಭೇಟಿ ಎನ್ನಲಾಗಿದೆ. 

ಶಾರುಖ್ ಖಾನ್ 'ಜವಾನ್'ನಲ್ಲಿ ಮತ್ತೋರ್ವ ಸೌತ್ ಸ್ಟಾರ್; 'ಪಠಾಣ್' ಸ್ಟಾರ್ ಜೊತೆ 'ಪುಷ್ಪ' ಸ್ಟಾರ್

ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ 2024ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಅಲ್ಲು ಅರ್ಜುನ್ ಮತ್ತು  ರಶ್ಮಿಕಾ ಮಂದಣ್ಣ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾ ಮುಗಿಯೋ ಮೊದಲೇ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಪುಷ್ಪ-2 ಮುಗಿಯುತ್ತಿದ್ದಂತೆ ಸಂದೀಪ್ ರೆಡ್ಡಿ ಜೊತೆ ಸಿನಿಮಾ ಮಾಡಲಿದ್ದಾರೆ. 

Latest Videos
Follow Us:
Download App:
  • android
  • ios