Asianet Suvarna News Asianet Suvarna News

ಒಂಟಿ ಲೈಫ್ ಬೇಜಾರೆಂದು, ಮತ್ತೊಂದು ಮದ್ವೆ ಸುಳಿವು ನೀಡಿದ್ರಾ ಆಮೀರ್ ಖಾನ್!

ಬಾಲಿವುಡ್ ಅಂಗಳದ ಮಿಸ್ಟರ್ ಪರ್ಫೆಕ್ಟ್ ಅಂತ ಕರೆಸಿಕೊಳ್ಳುವ ನಟ ಆಮೀರ್ ಖಾನ್, ಹೊಸ ಹೇಳಿಕೆ ಸಂಚಲ ಸೃಷ್ಟಿಸಿದೆ.  ಈ ಹೇಳಿಕೆ ಮೂಲಕ ಮೂರನೇ  ಮದುವೆಯ ಸುಳಿವು ನೀಡಿದ್ದಾರೆ.

Aamir khan says I don t like living alone need a partner mrq
Author
First Published Aug 27, 2024, 12:01 PM IST | Last Updated Aug 27, 2024, 12:16 PM IST

ಮುಂಬೈ: ಇಬ್ಬರು ಪತ್ನಿಯರಿಂದಲೂ ವಿಚ್ಚೇದನ ಪಡೆದುಕೊಂಡಿರುವ ಬಾಲಿವುಡ್ ನಟ ಆಮೀರ್ ಖಾನ್ ಹೃದಯ ಸಂಗಾತಿಗಾಗಿ ಮಿಡಿಯುತ್ತಿದೆ. ಪತ್ನಿಯರಿಂದ ದೂರವಾದ ಬಳಿಕ ಖಾಸಗಿ ಮತ್ತು ಸಿನಿಮಾ ಕಾರ್ಯಕ್ರಮದಲ್ಲಿ ಜೊತೆಯಾಗಿಯೇ ಆಮೀರ್‌ ಖಾನ್ ಕಾಣಿಸಿಕೊಳ್ಳುತ್ತಿರುತ್ತಾರೆ. ಪತ್ನಿಯರಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿರುವ ಆಮೀರ್ ಖಾನ್, ಮನದಾಸೆಯನ್ನು ಹೊರಗೆ ಹಾಕಿದ್ದಾರೆ. ನಟಿ ರಿಯಾ ಚಕ್ರವರ್ತಿ ನಡೆಸಿಕೊಡುವ ಸಂದರ್ಶನದಲ್ಲಿ ಮಾತನಾಡಿದ ಆಮೀರ್ ಖಾನ್ ತಮ್ಮ ಮದುವೆ ಹಾಗೂ ಪತ್ನಿಯರ ಬಗ್ಗೆ ಮುಕ್ತ ಮನಸ್ಸಿನಿಂದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನಗೀಗ 59 ವರ್ಷ. ನಾನು ಮತ್ತೆ ಮದುವೆ ಆಗುತ್ತೆನಾ ಎಂಬುವುದು ಗೊತ್ತಿಲ್ಲ. ಮದುವೆ ವಿಚಾರ ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವೆನಿಸುತ್ತಿದೆ ಎಂದು ಹೇಳಿದ್ದಾರೆ. 

ಸದ್ಯ ನಾನು ಹಲವು ಸಂಬಂಧಗಳ ಜೊತೆ ಜೀವಿಸುತ್ತಿದ್ದೇನೆ. ಕುಟುಂಬ ಹಾಗೂ ಮಕ್ಕಳ ಜೊತೆ ಬೆರೆತುಕೊಂಡಿದ್ದೇನೆ. ಎರಡು ಮದುವೆಯಾದರೂ, ಅದನ್ನು ಮುಂದುವರಿಸಿಕೊಂಡು ಅಥವಾ ಉಳಿಸಿಕೊಳ್ಳಲು ಸಂಪೂರ್ಣ ವಿಫಲವಾಗಿದ್ದೇನೆ. ಹಾಗಾಗಿ ಮದುವೆ ಕುರಿತ ಸಲಹೆಗಳನ್ನು ನನ್ನ ಬಳಿ ಕೇಳಬೇಡಿ ಎಂದು ಆಮೀರ್ ಖಾನ್ ಮನವಿ ಮಾಡಿಕೊಂಡರು. ಮುಂದುವರಿದು ಮಾತನಾಡಿದ ಆಮೀರ್ ಖಾನ್, ಒಂಟಿಯಾಗಿ ಜೀವನ ನಡೆಸಲು ನನ್ನಿಂದ ಆಗಲ್ಲ. ನಾನು ಏಕಾಂಗಿಯಲ್ಲ, ನನಗೆ ಒಡನಾಟ ಇಷ್ಟ. ನನ್ನ ಮಾಜಿ ಪತ್ನಿಯರಾದ ರೀನಾ ಮತ್ತು ಕಿರಣ್‌ಗೆ ಹತ್ತಿರವಾಗಿದ್ದು, ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ ಎಂಬ ವಿಷಯವನ್ನು ಹೇಳಿಕೊಂಡರು. 

21ನೇ ವಯಸ್ಸಿನಲ್ಲಿ ಆಮೀರ್ ಖಾನ್, 19 ವರ್ಷದ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು. ಈ ಮದುವೆ ತುಂಬಾ ರಹಸ್ಯವಾಗಿ ನಡೆದಿತ್ತು. ರೀನಾ ದತ್ತಾ ಅವರಿಂದ ದೂರವಾದ ಬಳಿಕ ಕಿರಣ್ ರಾವ್ ಅವರ ಜೊತೆ ಸಾಂಸರಿಕ ಜೀವನಕ್ಕೆ ಕಾಲಿಟಿದ್ದರು. ಅಮೀರ್ ಖಾನ್ ಮೂರು ಮಕ್ಕಳ ತಂದೆಯಾಗಿದ್ದು, ಮೊದಲ ಪತ್ನಿಗೆ ಇರಾ ಮತ್ತು ಜುನೈದ್ ಇಬ್ಬರು ಮಕ್ಕಳಿದ್ರೆ, ಎರಡನೇ ಮದುವೆಯಿಂದ ಅಜಾದ್ ಖಾನ್ ರಾವ್ ಎಂಬ ಮಗನಿದ್ದಾನೆ. ಇರಾ ಖಾನ್ ಮದುವೆಯಲ್ಲಿ ಇಬ್ಬರು ಪತ್ನಿಯರ ಜೊತೆಯಲ್ಲಿಯೇ ಆಮೀರ್ ಖಾನ್ ಭಾಗಿಯಾಗಿದ್ದಾರೆ. 

ತಮ್ಮ ಮೊದಲ ಮದುವೆಗೆ 10 ರೂ. ಕೂಡಾ ಖರ್ಚು ಮಾಡಿಲ್ಲ ಎಂದಿದ್ದ ಆಮೀರ್ ಖಾನ್! ಹೇಗಾಯ್ತು ಈ ವಿವಾಹ?

ಕಿರಣ್ ರಾವ್ ಜೊತೆ ಡಿವೋರ್ಸ್ ಪಡೆದುಕೊಂಡರೂ ಆಮೀರ್ ಖಾನ್ ಅವರ ಜೊತೆಯಲ್ಲಿಯೇ ಇದ್ದಾರೆ. ಡಿವೋರ್ಸ್ ಬಳಿಕ ಸಂದರ್ಶನದಲ್ಲಿ ಮಾತನಾಡಿದ್ದ, ಈಗಲೂ ನಾನು ಮತ್ತು ಆಮೀರ್ ಜೊತೆಯಲ್ಲಿಯೇ ಇದ್ದೇವೆ. ಜೊತೆಯಲ್ಲಿಯೇ ಕುಳಿತು ಊಟ ಮಾಡುತ್ತಾ ಹಲವು ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಮದುವೆಗೂ ಮುನ್ನ ನಾನು ಸ್ವತಂತ್ರವಾಗಿ ಬದುಕಿದ್ದವಳು. ಹಾಗಾಗಿ ಒಂಟಿಯಾಗಿ ಜೀವನ ನಡೆಸೋದಕ್ಕೆ ಯಾವುದೇ ಬೇಸರವಿಲ್ಲ. ಡಿವೋರ್ಸ್ ಬಳಿಕ ನಾನು ಸಂತೋಷವಾಗಿದ್ದೇನೆ ಎಂದು ಕಿರಣ್ ರಾವ್ ಹೇಳಿದ್ದರು. 

ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ನಟಿಯರಾದ ಫಾತಿಮಾ ಸನಾ ಶೇಖ್ ಮತ್ತು ಸಾನಿಯಾ ಮಲ್ಹೋತ್ರಾ ಜೊತೆ ಆಗಮಿಸಿದ್ದರು. ಈ ಸಂದರ್ಶನದಲ್ಲಿ ಕರಣ್‌ ಜೋಹರ್, ಒಳ್ಳೆಯ ಸೆಕ್ಸ್ ಥೆರಪಿಸ್ಟ್ ಗೆ ಯಾವ ನಟರ ಹೆಸರು ಸೂಚಿಸುತ್ತೀರಿ ಎಂದು ಕೇಳಿದಾಗ, ಆಮೀರ್ ಖಾನ್ ಸ್ವತಃ ತಮ್ಮ ಹೆಸರು ಹೇಳಿಕೊಂಡು, ಇದು ನನ್ನ ಹಿಡನ್ ಟ್ಯಾಲೆಂಟ್ ಎಂದಿದ್ದರು.  

ಸಲ್ಮಾನ್‌ ಖಾನ್‌ ಅಸಭ್ಯ, ಅವಿವೇಕ ನಟ, ಅವನನ್ನು ಸ್ವಲ್ಪವೂ ಇಷ್ಟಪಡಲ್ಲ ಎಂದಿದ್ದೇಕೆ ಆಮೀರ್‌?

Latest Videos
Follow Us:
Download App:
  • android
  • ios