Asianet Suvarna News Asianet Suvarna News

ತಮ್ಮ ಮೊದಲ ಮದುವೆಗೆ 10 ರೂ. ಕೂಡಾ ಖರ್ಚು ಮಾಡಿಲ್ಲ ಎಂದಿದ್ದ ಆಮೀರ್ ಖಾನ್! ಹೇಗಾಯ್ತು ಈ ವಿವಾಹ?

ಅಮೀರ್ ಖಾನ್ ಮೊದಲು ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಐರಾ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮದುವೆಗೆ 10 ರೂ. ಕೂಡಾ ಖರ್ಚಾಗಿಲ್ಲ ಎಂದು ಆಮೀರ್ ತಿಳಿಸಿದ್ದಾರೆ. 

Aamir Khan did not spend even 10 rupees on his first marriage this is how he married Reena Dutta skr
Author
First Published Jul 9, 2024, 2:49 PM IST

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾವಾಗಲೂ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಮುಖ್ಯಾಂಶಗಳಲ್ಲಿರುತ್ತಾರೆ. ಅಮೀರ್ ಖಾನ್ 21 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿವಾಹವಾದರು. ಅಮೀರ್ ಖಾನ್ ಅವರ ಮೊದಲ ಮದುವೆ ರೀನಾ ದತ್ತಾ ಅವರೊಂದಿಗೆ- ಇವರ ಪ್ರೇಮಕಥೆ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಅಮೀರ್ ಮತ್ತು ರೀನಾ ಮದುವೆಯಾದಾಗ, ನಟಿಗೆ ಕೇವಲ 19 ವರ್ಷ. ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದರು. 

ತನ್ನ ಮೊದಲ ಮದುವೆಗೆ 10 ರೂಪಾಯಿ ಕೂಡಾ ಖರ್ಚು ಮಾಡಿಲ್ಲ ಎಂದು ಅಮೀರ್ ಖಾನ್ ಒಮ್ಮೆ ಬಹಿರಂಗಪಡಿಸಿದರು. ಅಮೀರ್ ಮತ್ತು ರೀನಾ ಹೇಗೆ ಮದುವೆಯಾದರು ಎಂದು ತಿಳಿಯೋಣ.


 

ಅಮೀರ್ ಖಾನ್ ಮತ್ತು ರೀನಾ ದತ್ತಾ ಲವ್ ಸ್ಟೋರಿ ತುಂಬಾ ಆಸಕ್ತಿದಾಯಕವಾಗಿದೆ. ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ಮನೆಯ ಕಿಟಕಿಯಿಂದ. ಅದರ ನಂತರ, ರೀನಾ ಅಮೀರ್ ಅವರ ಚೊಚ್ಚಲ ಚಿತ್ರ ಖಯಾಮತ್ ಸೆ ಖಯಾಮತ್ ತಕ್ ನಲ್ಲಿ ಕೆಲಸ ಮಾಡಿದರು. 

Aamir Khan did not spend even 10 rupees on his first marriage this is how he married Reena Dutta skr

10 ರೂಪಾಯಿಗಿಂತ ಕಡಿಮೆ ಖರ್ಚಿನಲ್ಲಿ ಮದುವೆ
ಅಮೀರ್ ಖಾನ್ ಮತ್ತು ರೀನಾ ದತ್ತಾ ಅವರ ಮದುವೆಗೆ ಬಹಳ ಕಡಿಮೆ ಖರ್ಚು ಮಾಡಲಾಗಿದೆ. ಸಂದರ್ಶನವೊಂದರಲ್ಲಿ ಅಮೀರ್ ಖಾನ್ ತಮ್ಮ ಮದುವೆಗೆ 10 ರೂಪಾಯಿ ಖರ್ಚು ಮಾಡಿಲ್ಲ ಎಂದು ಹೇಳಿದ್ದರು. ತಾವು ರಹಸ್ಯವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದೇವೆ ಎಂದು ಅಮೀರ್ ಹೇಳಿದ್ದರು. ನಮ್ಮ ಮದುವೆಯಲ್ಲಿ ಮೂರು ಜನ ಮಾತ್ರ ಹಾಜರಿದ್ದರು. ನಾವು ಬಸ್ ನಂ.211ರಲ್ಲಿ ಮದುವೆಯಾಗುವ ತಾಣಕ್ಕೆ ಹೋಗಲು ಬಸ್ಸಿನ ಟಿಕೆಟ್ 50 ಪೈಸೆ ಇತ್ತು. ನಾವು ಬಾಂದ್ರಾ ಪಶ್ಚಿಮ ನಿಲ್ದಾಣದಲ್ಲಿ ಇಳಿದೆವು, ಸೇತುವೆಯನ್ನು ದಾಟಿದೆವು. ಆಮೇಲೆ ಸ್ವಲ್ಪ ಹೊತ್ತು ನಡೆದು ಗೃಹ ನಿರ್ಮಾಣ ಭವನ ತಲುಪಿ ಅಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು. ಇದರಿಂದ ಮದುವೆಗೆ 10 ರೂಪಾಯಿ ಕೂಡಾ ಖರ್ಚು ಮಾಡಿಲ್ಲ ಎಂದಿದ್ದಾರೆ.

ಈ 5 ತಪ್ಪುಗಳನ್ನು ಮಾಡ್ತಿಲ್ಲ ಅಂದ್ರೆ ನಿಮ್ಮ ಪೇರೆಂಟಿಂಗ್ ರೀತಿ ಸೂಪರ್ ಆಗಿದೆ ಎಂದರ್ಥ!
 

ಅಮೀರ್ ಮತ್ತು ರೀನಾ 1986ರಲ್ಲಿ ವಿವಾಹವಾದರು. ಅವರಿಗೆ ಐರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ದಂಪತಿ ಬೇರ್ಪಟ್ಟರು.

Aamir Khan did not spend even 10 rupees on his first marriage this is how he married Reena Dutta skr

ನಂತರ ಅಮೀರ್ ಕಿರಣ್ ರಾವ್ ಅವರನ್ನು ವಿವಾಹವಾದರು. ಈಗ ಅಮೀರ್ ಮತ್ತು ಕಿರಣ್ ಕೂಡ ಬೇರ್ಪಟ್ಟಿದ್ದಾರೆ. ಆದರೆ ಅಮೀರ್ ಯಾವಾಗಲೂ ತನ್ನ ಮೂರು ಮಕ್ಕಳಿಗಾಗಿ ಇಡೀ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಮೀರ್ ಮತ್ತು ರೀನಾ ಅವರ ಪುತ್ರಿ ಐರಾ ವಿವಾಹವಾದರು, ಇದರಲ್ಲಿ ಕಿರಣ್ ರಾವ್ ಕೂಡ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios