ಬಾಕ್ಸ್ ಆಫೀಸ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಹಿನಾಯ ಸೋಲು ಕಂಡಿದೆ. ಆಮೀರ್ ಖಾನ್ ಸಿನಿಮಾ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಆಮೀರ್ ಖಾನ್ ಈ ಹೀನಾಯ ಸೋಲಿನ ಹೊಣೆಹೊತ್ತುಕೊಂಡಿದ್ದಾರೆ. 

ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸುತ್ತಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಿಂದ ಆಮಿರ್ ಖಾನ್​ಗೆ ದೊಡ್ಡ ಹಿನ್ನಡೆ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಹಿನಾಯ ಸೋಲು ಕಂಡಿದೆ. ಆಮೀರ್ ಖಾನ್ ಸಿನಿಮಾ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಚಿತ್ರಮಂದಿರಗಳಲ್ಲಿ ಹೀನಾಯ ಸೋತ ಲಾಲ್ ಸಿಂಗ್ ಚಡ್ಡಾಗೆ ಒಟಿಟಿಯಲ್ಲೂ ಬೇಡಿಕೆ ಕಮ್ಮಿಯಾಗಿದೆ. ರಿಲೀಸ್‌ಗೂ ಮುನ್ನಾ ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದ ಒಟಿಟಿಗಳು ಸಿನಿಮಾ ಸೋಲು ಕಾಣುತ್ತಿದ್ದಂತೆ ಕಡಿಮೆ ಬೆಲೆ ಡೀಲ್ ಮಾಡಿಕೊಳ್ಳಲು ಕೇಳುತ್ತಿವೆ. ಇದೆಲ್ಲದರ ನಡುವೆ ಆಮೀರ್ ಖಾನ್ ಈ ಹೀನಾಯ ಸೋಲಿನ ಹೊಣೆಹೊತ್ತುಕೊಂಡಿದ್ದಾರೆ. ಕಥೆಯ ಆಯ್ಕೆ, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸ, ಸಿನಿಮಾ ಪ್ರಚಾರ ಸೇರಿ ಎಲ್ಲ ವಿಚಾರಗಳಲ್ಲೂ ಆಮಿರ್ ಖಾನ್ ಅವರೇ ಮುಂದಾಳತ್ವ ವಹಿಸಿದ್ದರಿಂದ ಈಗ ಸೋಲಿನ ಸಂಪೂರ್ಣ ಹೊಣೆಯನ್ನು ಅವರೇ ವಹಿಸಿಕೊಳ್ಳಬೇಕಿದೆ. 

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಿಂದ ಆಮೀರ್ ಖಾನ್‌ಗೆ ಬರೋಬ್ಬರಿ ಸುಮಾರು 100 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ವರದಿ ಆಗಿದೆ. ಇದರಿಂದ ನಾಲ್ಕು ವರ್ಷಗಳ ಕಾಲ ಆಮಿರ್ ಖಾನ್ ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದರೂ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಜೊತೆಗೆ ಬಾಯ್ಕಟ್ ಸಮಸ್ಯೆ ಕೂಡ ಆಮೀರ್ ಖಾನ್ ಸಿನಿಮಾದೆ ದೊಡ್ಡ ಸಮಸ್ಯೆಯಾಗಿತ್ತು. 

ಟಾಪ್ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿದ ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'; ಒಟ್ಟು ಗಳಿಕೆ ಎಷ್ಟು?

‘ಲಾಲ್ ಸಿಂಗ್ ಚಡ್ಡಾ’ಹಾಲಿವುಡ್​ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿದೆ. ಆಮಿರ್​ ಖಾನ್ ಈ ಚಿತ್ರದ ಬಗ್ಗೆ ಸಾಕಷ್ಟು ಒಲವು ತೋರಿಸಿದ್ದರು. ಸಿನಿಮಾಗಾಗಿ ಸಾಕಷ್ಟು ಸಮಯ ಹಾಗೂ ಶ್ರಮ ಹಾಕಿದ್ದರು. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 60 ಕೋಟಿ ರೂಪಾಯಿಗೂ ಕಡಿಮೆ ಬಿಸ್ನೆಸ್ ಮಾಡಿದೆ. ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಈ ಚಿತ್ರಕ್ಕೆ ಒಂದೇ ಒಂದು ರೂಪಾಯಿ ಸ್ವೀಕರಿಸಿಲ್ಲ. ಈ ಚಿತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯಲು ಆಮಿರ್ ನಿರ್ಧರಿಸಿದ್ದರು. ಇದನ್ನು ಹೂಡಿಕೆ ರೂಪದಲ್ಲಿ ಪರಿಗಣಿಸಲು ಅವರು ನಿರ್ಮಾಣ ಸಂಸ್ಥೆಗೆ ಸೂಚಿಸಿದ್ದರು. ಸಿನಿಮಾ ಗೆದ್ದು ಯಶಸ್ಸು ಪಡೆದ ನಂತರದಲ್ಲಿ ಅವರು ಲಾಭದ ಜತೆ ಹೂಡಿಕೆ ಮಾಡಿದ ಹಣವನ್ನೂ ಪಡೆಯುವ ಆಲೋಚನೆಯಲ್ಲಿದ್ದರು. ಆದರೀಗ ಆಮೀರ್ ಖಾನ್ ಲೆಕ್ಕಾ ಉಲ್ಟಪಲ್ಟವಾಗಿದೆ. 

ಆಮೀರ್‌ ಖಾನ್‌ಗೆ ಮತ್ತೊಂದು ಹೊಡೆತ: OTTಯಲ್ಲೂ ಲಾಲಾ ಸಿಂಗ್‌ ಚಡ್ದಾಗೆ ಏಟು!

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ 

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಿತ್ತು. ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ಮಿಂಚಿದ್ದರು. ಅದ್ವೈತ್ ಚಂದನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಲಾಲ್ ಸಿಂಗ್ ಚಡ್ಡಾ ರಿಲೀಸ್‌ಗೂ ಮೊದಲೇ ನೆಟ್ಟಿಗರು ಬಾಯ್ಕಟ್‌ ಟ್ರೆಂಡ್ ಜೋರಾಗಿತ್ತು. ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ ಲಾಲ್ ಸಿಂಗ್ ಚಡ್ಡಾ ಮೇಲೆ ಪರಿಣಾಮ ಬೀರಿತ್ತು. ಭಾರತದಲ್ಲಿ ಅಸಹಿಷ್ಣತೆ ಕಾಡುತ್ತಿದೆ, ದೇಶ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆ ಎಂದು ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ ಸಿನಿಮಾ ಮೇಲೆ ಪರಿಣಾಮ ಬೀರಿತ್ತು. ಆಮೀರ್ ಖಾನ್ ಕ್ಷಮೆ ಕೇಳಿ ಸಿನಿಮಾ ನೋಡುವಂತೆ ಕೇಳಿಕೊಂಡರು ಸಹ ಪ್ರಯೋಜನವಾಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಹೀನಾಯ ಸೋಲು ಕಂಡಿದೆ. ಟಾಪ್ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿದೆ.