ಆಮಿರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಪಡೆದಿದ್ದು, ಆಮಿರ್ ಮೂರನೇ ಮದುವೆಯ ಬಗ್ಗೆ ವರದಿಗಳಿವೆ. ಕಿರಣ್ ನಿರ್ದೇಶನದ 'ಲಾಪತಾ ಲೇಡೀಸ್' ಯಶಸ್ವಿಯಾಗಿದೆ. ಮದುವೆಯ ಪ್ರಸ್ತಾಪದ ಬಗ್ಗೆ ಮಾತನಾಡಿದ ಕಿರಣ್, ಆಮಿರ್ ಖಾನ್ ಅವರ ವ್ಯಕ್ತಿತ್ವದ ಮುಂದೆ ನಾನು ಕುಗ್ಗಿ ಹೋಗ್ತೀನಿ ಅಂತಾ ಪೋಷಕರು ಹೆದರಿದ್ದರು ಎಂದು ಹೇಳಿದ್ದಾರೆ. ಆಮಿರ್ ಮೊದಲ ಪತ್ನಿ ರೀನಾ ದತ್ತಾ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ.
aamir khan kiran rao relation : ಆಮೀರ್ ಖಾನ್ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅವರು ಈಗ ಮೂರನೇ ಮದುವೆ ಆಗ್ತಿದ್ದಾರೆ ಅಂತಾ ಹಲವು ವರದಿಗಳು ಹೇಳ್ತಿವೆ. 2024ರಿಂದಲೂ ಈ ಸುದ್ದಿ ಇದೆ. ಆದ್ರೆ ಅವರ ಮೊದಲ ಹೆಂಡತಿಯ ಜೊತೆಗಿನ ಸಂಬಂಧವು ಈಗಲೂ ಚೆನ್ನಾಗಿದೆ. ಮೊದಲ ಪತ್ನಿಯಿಂದ ಪಡೆದ ಮಗಳ ಮದುವೆಯನ್ನು ಕೂಡ ಇಬ್ಬರೂ ತುಂಬಾ ಚೆನ್ನಾಗಿ ಮಾಡಿದ್ದರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಅವರ ಎರಡನೇ ಹೆಂಡತಿ ಕಿರಣ್ ರಾವ್ ಈಗ ಡೈರೆಕ್ಷನ್ ಲೈನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಬಂದ 'ಲಾಪತಾ ಲೇಡೀಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆಮೀರ್ ಖಾನ್ ಜೊತೆ ಮದುವೆ ವಿಚಾರ ಬಂದಾಗ ತಮ್ಮ ಪೋಷಕರ ಚಿಂತೆ ಬಗ್ಗೆ ಕಿರಣ್ ರಾವ್ ಹೇಳಿಕೊಂಡಿದ್ದಾರೆ.
ಆಮೀರ್ ಖಾನ್ ಚಿತ್ರಗಳ 10 ಅದ್ಭುತ ಡೈಲಾಗ್‌ಗಳು! ಹಲವರು ಪಾಲಿಗೆ ದಾರಿದೀಪ ಆಗಿವೆ!
ಅಮಿರ್ ಜತೆ ಮದುವೆ ಪ್ರಸ್ತಾಪಕ್ಕೆ ಶಾಕ್ ಆದ ಕಿರಣ್ ರಾವ್ ಪೋಷರು:ಕಿರಣ್ ರಾವ್ ತಮ್ಮ ಮದುವೆ ಟೈಮ್‌ನಲ್ಲಿ ಪೋಷಕರ ರಿಯಾಕ್ಷನ್ ಬಗ್ಗೆ ಹೇಳಿದ್ದಾರೆ. "ಇದು ಅವರಿಗೆ ದೊಡ್ಡ ಶಾಕ್ ಆಗಿತ್ತು. ಆಮಿರ್ ಅವರಂತಹ ದೊಡ್ಡ ಪರ್ಸನಾಲಿಟಿ ಮುಂದೆ ನನ್ನ ಮಗಳು ಸೈಲೆಂಟ್ ಆಗ್ತಾಳೆ ಅಂತಾ ಹೆದರಿದ್ರು ಎಂದು ಕಿರಣ್ ಹೇಳಿದ್ದಾರೆ.
ರಾವ್ ಫ್ಯಾಮಿಲಿಗೆ ಭಯ ಏನಿತ್ತು:ಆಮೀರ್ ಖಾನ್ ಜೊತೆ ಮದುವೆ ಆಗುವ ಬಗ್ಗೆ ಪೋಷಕರ ಜೊತೆ ಡಿಸ್ಕಸ್ ಮಾಡಿದಾಗ ಅವರು ತುಂಬಾನೇ ಸರ್ಪ್ರೈಸ್ ಆದ್ರು. ಆಮೇಲೆ ಅವರ ಅಭಿಪ್ರಾಯವನ್ನು ನನ್ನ ಮುಂದೆ ಹೇಳಿಕೊಂಡ್ರು. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಿರಣ್ ರಾವ್, ಇದು ಅವರಿಗೆ ಶಾಕ್ ಕೊಟ್ಟಿತ್ತು. ಅವರಿಗೆ ನನ್ನ ಬಗ್ಗೆ ನಂಬಿಕೆ ಇತ್ತು. ನಾನು ಏನೋ ಸಾಧನೆ ಮಾಡ್ತೀನಿ ಅಂದ್ಕೊಂಡಿದ್ರು. ಆದ್ರೆ ಆಮೀರ್ ಖಾನ್ ವ್ಯಕ್ತಿತ್ವದ ಮುಂದೆ ನಾನು ಕುಗ್ಗಿ ಹೋಗ್ತೀನಿ ಅಂತಾ ಹೆದರಿದ್ರು ಎಂದಿದ್ದಾರೆ.
ಭಾರತದಲ್ಲಿ 20 ವರ್ಷದಿಂದ ಸಂಭಾವನೆ ಪಡೆಯದೇ ನಟಿಸುತ್ತಿರುವ ಸೂಪರ್‌ಸ್ಟಾರ್ ನಟ ಯಾರು?
ಕಿರಣ್ ರಾವ್ಗೆ ಆಮೀರ್ ಖಾನ್ ಸಪೋರ್ಟ್:ಆಮೀರ್ ಖಾನ್ ಅವರ ಪಾಪುಲಾರಿಟಿ ನನ್ನ ಮೇಲೆ ಪರಿಣಾಮ ಬೀರಬಹುದು ಅಂತಾ ಅಂದ್ಕೊಂಡಿದ್ರು. ಮದುವೆ ಆದ್ಮೇಲೆ ನನಗೂ ಆ ಪ್ರೆಷರ್ ಗೊತ್ತಾಯ್ತು. ಆದ್ರೆ ಆಮಿರ್ ಸಪೋರ್ಟ್‌ನಿಂದ ನನಗೆ ಸಮಾಧಾನ ಸಿಕ್ತು. "ಆಮಿರ್ ನನ್ನಿಂದ ಯಾವತ್ತೂ ಫಿಕ್ಸ್ಡ್ ಆಗಿರಬೇಕು ಅಂತಾ ಬಯಸಿಲ್ಲ. ನಾನು ಹೇಗಿದ್ದೀನೋ ಹಾಗೇ ಇರಲು ಬಿಟ್ಟಿದ್ದಾರೆ. ಅವರಲ್ಲಿ ಇದು ನನಗೆ ತುಂಬಾನೇ ಇಷ್ಟ" ಅಂತಾ ಕಿರಣ್ ಹೇಳಿದ್ದಾರೆ.
ಮಗನ ಸಿನಿಮಾ ಹಿಟ್ ಆದ್ರೆ ಸಿಗರೇಟ್ ಬಿಡ್ತೀನಿ ಎಂದ ಆಮೀರ್ ಖಾನ್: ಚಾಲೆಂಜ್‌ನಲ್ಲಿ ಗೆಲ್ತಾರಾ ಮಿಸ್ಟರ್ ಪರ್ಫೆಕ್ಟ್?
ಮೊದಲ ಪತ್ನಿ ರೀನಾ ದತ್ತಾ ಅವರನ್ನು 1986ರಲ್ಲಿ ಮದುವೆಯಾದ ಅಮಿರ್ ಖಾನ್ 2002ರಲ್ಲಿ ವಿಚ್ಚೇದನ ಪಡೆದರು. ಮೊದಲ ಪತ್ನಿಯಿಂದ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಅವರನ್ನು 2005ರಲ್ಲಿ ಮದುವೆಯಾಗಿ 2021ರಲ್ಲಿ ವಿಚ್ಚೇದನ ಪಡೆದರು. 2011ರಲ್ಲಿ ಸರೋಗಸಿ ಮೂಲಕ ಅಜಾದ್ ಖಾನ್ ರಾವ್ ಎಂಬ ಮಗನನ್ನು ಪಡೆದರು. ವಿಚ್ಚೇದನ ಪಡೆದ ನಂತರವೂ ಇಬ್ಬರು ಪತ್ನಿಯರ ಜೊತೆಗೆ ಅಮಿರ್ ಚೆನ್ನಾಗಿದ್ದಾರೆ.
