ಮಗನ ಸಿನಿಮಾ ಹಿಟ್ ಆದ್ರೆ ಸಿಗರೇಟ್ ಬಿಡ್ತೀನಿ ಎಂದ ಆಮೀರ್ ಖಾನ್: ಚಾಲೆಂಜ್‌ನಲ್ಲಿ ಗೆಲ್ತಾರಾ ಮಿಸ್ಟರ್ ಪರ್ಫೆಕ್ಟ್?
ಮಗ ಜುನೈದ್ ಚಿತ್ರ ಗೆದ್ದರೆ ಸಿಗರೇಟ್ ಬಿಡ್ತೀನಿ ಅಂತ ಆಮೀರ್ ಖಾನ್ ಮಾತು ಕೊಟ್ಟಿದ್ದಾರೆ. ಈ ಚಾಲೆಂಜ್‌ನಲ್ಲಿ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಗೆಲ್ತಾರಾ?
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ಗೆ ಈ ಮಧ್ಯೆ ಸಾಲು ಸಾಲು ಕಷ್ಟಗಳೇ ಎದುರಾಗ್ತಿವೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗ್ತಿಲ್ಲ. ಈ ಹೊತ್ತಲ್ಲಿ ಆಮೀರ್ ಖಾನ್ ಮಗ ಜುನೈದ್ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಹೆಸರು 'ಲವ್‌ಯಾಪ'. ಶ್ರೀದೇವಿ ಪುತ್ರಿ ಖುಷಿ ಕಪೂರ್ ನಾಯಕಿ. ಮಗನ ಚಿತ್ರ ಗೆಲ್ಲಲಿ ಅಂತ ಆಮೀರ್ ಖಾನ್ ಒಂದು ಮಾತು ಕೊಟ್ಟಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಮಗನ ಚಿತ್ರ ಗೆದ್ದರೆ ಸಿಗರೇಟ್ ಬಿಡ್ತೀನಿ ಅಂತ ಆಮಿರ್ ಹೇಳಿದ್ದಾರಂತೆ. 'ಲವ್‌ಯಾಪ' ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದ್ರೆ, ಸ್ಮೋಕಿಂಗ್ ಬಿಡ್ತಾರೆ. ಈ ವಿಷ್ಯವನ್ನು ಆಮೀರ್ ಆಪ್ತರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ನಾನಾ ಪಾಟೇಕರ್ ಜೊತೆ ಮಾತನಾಡುವಾಗ ಆಮೀರ್ ತಮ್ಮ ಚಟಗಳ ಬಗ್ಗೆ ಹೇಳಿಕೊಂಡಿದ್ರು. 'ನಾನು ಹುಕ್ಕಾ ಸೇದುತ್ತೇನೆ. ಈಗ ಮದ್ಯಪಾನ ಬಿಟ್ಟಿದ್ದೀನಿ, ಆದರೆ ಒಂದು ಕಾಲದಲ್ಲಿ ನಾನು ರಾತ್ರಿಯೆಲ್ಲಾ ಕುಡಿಯುತ್ತಿದ್ದೆ. ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ' ಅಂತ ಹೇಳಿದ್ದರು. ಈಗ ಮಗ ಜುನೈದ್ ಖಾನ್‌ಗಾಗಿ ಆಮೀರ್ ಈ ಚಟ ಬಿಡಲು ಸಿದ್ಧರಾಗಿದ್ದಾರೆ.
'ಲವ್‌ಯಾಪ' ಚಿತ್ರ 2025ರ ಫೆಬ್ರವರಿ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಜುನೈದ್ ಮತ್ತು ಖುಷಿ ಜೋಡಿಯನ್ನು ಜನ ಇಷ್ಟಪಡುತ್ತಿದ್ದಾರೆ. ಈ ಚಿತ್ರದ ಕಥೆ ಆಧುನಿಕ ಪ್ರೇಮಕಥೆಯಾಧಾರಿತವಾಗಿದೆ. ಜುನೈದ್, ಖುಷಿ ಜೊತೆಗೆ ಗೃಷಾ ಕಪೂರ್, ಆಶುತೋಷ್ ರಾಣಾ, ತನ್ವಿಕಾ ಪಾರ್ಲಿಕರ್, ಹಾಸ್ಯನಟ ಕಿಕ್ ಷಾರದಾ ಕೂಡ ನಟಿಸಿದ್ದಾರೆ. ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಚಿತ್ರ ನಿರ್ದೇಶಿಸಿದ್ದ ಅದ್ವೈತ್ ಚಂದನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.