ಇರಾ ತಾನು ಆಂಕ್ಸೈಟಿ(Anxiety) ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಒದ್ದಾಡುತ್ತಿರುವುದಾಗಿ ಹೇಳಿದ್ದಾರೆ. ಮಿರರ್ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಇರಾ ಖಾನ್ ಆಂಕ್ಸೈಟಿ ಸಮಸ್ಯೆ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್(Aamir Khan) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಆಮೀರ್ ಬೇರೆ ಬೇರೆ ವಿಚಾರಗಳಿಗೆ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸಿನಿಮಾರಂಗ ಬಿಡುವ ನಿರ್ಧಾರ ಮಾಡಿದ್ದೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದರು ಆಮೀರ್ ಖಾನ್. ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡುವ ಮೂಲಕ ಗಂಡ-ಹೆಂಡತಿ ಸಂಬಂಧ ಕಡಿದುಕೊಂಡಿರುವ ಆಮೀರ್ ಖಾನ್ ಎರಡನೆೇ ಪತ್ನಿಯಿಂದನೂ ದೂರ ಆಗಿದ್ದಾರೆ. ಆದರು ಇಬ್ಬರು ಸ್ನೇಹಿತರಾಗಿ ಇದ್ದಾರೆ. ಆಮೀರ್ ಖಾನ್ ಮೊದಲ ಪತ್ನಿಯ ಮಗಳು ಇರಾ(Ira Khan) ಕೂಡ ಸದಾ ಸುದ್ದಿಯಲ್ಲಿರುತ್ತಾರೆ.

ಇರಾ ಖಾನ್ ಇನ್ನು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಆದರೂ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಇರಾ ತಾನು ಆಂಕ್ಸೈಟಿ(Anxiety) ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಅನೇಕರು ಆಂಕ್ಸೈಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಅನೇಕ ಕಲಾವಿದರು ಬಹಿರಂಗ ಪಡಿಸಿದ್ದಾರೆ. ಇನ್ನು ಅನೇಕರು ಬಹಿರಂಗವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಇರಾ ಖಾನ್ ಆಂಕ್ಸೈಟಿ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಒದ್ದಾಡುತ್ತಿರುವುದಾಗಿ ಹೇಳಿದ್ದಾರೆ.

ಮಿರರ್ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಇರಾ ಖಾನ್ ಆಂಕ್ಸೈಟಿ ಸಮಸ್ಯೆ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ. 'ನಾನು ಆಂಕ್ಸೈಟಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸುಮ್ಮನೆ ಅಳುತ್ತೇನೆ. ಆದರೆ ಈ ಮೊದಲು ಯಾವತ್ತು ನನಗೆ ಆಂಕ್ಸೈಟಿ ಅಟ್ಯಾಕ್ ಆಗಿರಲಿಲ್ಲ. ಆಂಕ್ಸೈಟಿ ಮತ್ತು ಆಂಕ್ಸೈಟಿ ಅಟ್ಯಾಕ್ ಬಗ್ಗೆ ವ್ಯತ್ಯಾಸವಿದೆ. ಆಂಕ್ಸೈಟಿ ಆಟ್ಯಾಕ್ ಎಂದರೆ ನನ್ನ ಪ್ರಕಾರ, ಉಸಿರಾಟದ ಸಮಸ್ಯೆ, ಅಳುವುದು, ವಿನಾಶದತ್ತ ಹೋಗುತ್ತಿದ್ದೇವೆ ಎಂದು ಭಾಸವಾಗುವುದು. ಇದು ನಿಜಕ್ಕೂ ಕೆಟ್ಟ ಭಾವನೆಯಾಗಿದೆ. ಮೊದಲು 2 ಅಥವಾ 3 ತಿಂಗಳಿಗೆ ಒಮ್ಮೆ ಹೀಗೆ ಆಗುತ್ತಿತ್ತು. ಇದೀಗ ಪ್ರತಿದಿನ ಹೀಗೆ ಆಗುತ್ತಿದೆ. ನಾನು ವೈದ್ಯರ ಬಳಿ ಹೇಳಬೇಕು' ಎಂದಿದ್ದಾರೆ.

ಈ ಬೇಸಿಗೆಯಲ್ಲಿ Aamir Khan ಮಗನ ಜೊತೆ ಏನು ಮಾಡುತ್ತಿದ್ದಾರೆ ನೋಡಿ

'ಅಸಹಾಯಕ ಭಾವನೆ ಕಾಡುತ್ತಿದೆ. ನಾನು ನಿದ್ದೆ ಮಾಡಲು ಬಯಸುತ್ತೇನೆ (ರಾತ್ರಿ ಸಮಯದಲ್ಲಿ) ಆದರೆ ನನಗೆ ಆಗುತ್ತಿಲ್ಲ, ಯಾಕೆಂದರೆ ನನಗೆ ನಿದ್ದೆ ಬರುತ್ತಿಲ್ಲ. ನಾನು ನನ್ನ ಭಯವನ್ನು ಪತ್ತೆ ಹಚ್ಚುತ್ತಿದ್ದೇನೆ. ನಾನು ನನ್ನ ಜೊತೆಯೇ ಮಾತನಾಡುತ್ತಿದ್ದೇನೆ. ಒಮ್ಮೆ ಅಟ್ಯಾಕ್ ಆದರೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಬಳಿಕ ನಾನು ಸ್ನಾನ ಮಾಡುತ್ತೇನೆ' ಎಂದು ಹೇಳಿದ್ದಾರೆ.

View post on Instagram


ಆಮೀರ್ ಖಾನ್ 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದ 'ಕೆಜಿಎಫ್-2'

ಈ ಹಿಂದೆ ಕೂಡ ಅಮೀರ್ ಖಾನ್ ಪುತ್ರಿ ಇರಾ ಖಾನ್ ಖಿನ್ನತೆ ವಿಚಾರವಾಗಿ ಸುದ್ದಿಯಾಗಿದ್ದರು. 2020ರಲ್ಲಿ ಇರಾ ಖಾನ್ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದೀಗ ಆಂಕ್ಸೈಟಿ ಬಗ್ಗೆ ಬಹಿರಂಗ ಪಡಿಸಿರುವ ಇರಾಗೆ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.