ಈ ಬೇಸಿಗೆಯಲ್ಲಿ Aamir Khan ಮಗನ ಜೊತೆ ಏನು ಮಾಡುತ್ತಿದ್ದಾರೆ ನೋಡಿ
ಬಾಲಿವುಡ್‌ನ ಮಿಸ್ಟರ್ ಪರ್ಫೇಕ್ಷನಿಸ್ಟ್ ಆಮೀರ್ ಖಾನ್ ( Aamir Khan) ಏನು ಮಾಡಿದ್ದರು ಸುದ್ದಿಯಾಗುತ್ತದೆ. ಅವರ ಸಿನಿಮಾಗಳಷ್ಟೇ ಅಲ್ಲ ಪರ್ಸನಲ್ ಲೈಫ್ ಕೂಡ ಸಖತ್ ಫೇಮಸ್. ಕಳೆದ ವರ್ಷ ನಟ ತಮ್ಮ ಎರಡನೇಯ ಹೆಂಡತಿಗೆ ಡಿವೋರ್ಸ್ ನೀಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಈಗ ಅವರ ಮತ್ತೆ ಸುದ್ದಿಯಲ್ಲಿದ್ದಾರೆ ಅವರ ಮತ್ತು ಮಗನ ಫೋಟೋಗಳುಯ ಸಖತ್ ವೈರಲ್ ಆಗಿವೆ. ಅಷ್ಟಕೂ ಆಮೀರ್ ಖಾನ್ ಮಗನ ಜೊತೆ ಏನು ಮಾಡ್ತಾ ಇದ್ದಾರೆ ನೋಡಿ.

ತನ್ನ ಮಗ ಆಜಾದ್‌ನೊಂದಿಗೆ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಮಾವಿನ ಹಣ್ಣನ್ನು ಸವಿಯುತ್ತಿರುವುದನ್ನು ಕಾಣಬಹುದು. ನಟ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ,
ಆಮೀರ್ ಖಾನ್, ಅವರ ಕಾಲದ ಭಾರತದ ಅತ್ಯಂತ ಟ್ಯಾಲೆಂಟಡ್ ನಟರಲ್ಲಿ ಒಬ್ಬರು. ಸದ್ಯಕ್ಕೆ ಅವರು ಮತ್ತು ಅವರ ಮಗ ಆಜಾದ್ ಮಾವಿನ ಹಣ್ಣನ್ನು ತಿನ್ನುತ್ತಿರುವ ಕ್ಯೂಟ್ ಫೋಟೋಗಳ ಮೂಲಕ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ
ತಂದೆ-ಮಗನ ಜೋಡಿಯು ಮಾವಿನ ಹಣ್ಣನ್ನು ಸವಿಯುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಪ್ಲೇಟ್‌ಫುಲ್ ಮಾಮಿನ ಹಣ್ಣನ್ನು ಆಮೀರ್ ಮಗ ಆಜಾದ್ ಜೊತೆ ಎರಡೂ ಕೈಗಳಿಂದ ತಿನ್ನುವುದು ಕಾಣಬಹುದು
ಆಮೀರ್ ಖಾನ್ ಅಭಿಮಾನಿಗಳು ನಟ ಮತ್ತು ಅವರ ಮಗನ ಈ ಕ್ಲೋಸ್ ಕ್ಷಣದ ಫೋಟೋಗಳಿಗೆ ಫುಲ್ ಫಿದಾ ಆಗಿದ್ದಾರೆ. ಫ್ಯಾನ್ಸ್ ತಂದೆ-ಮಗ ಜೋಡಿಗೆ ಪ್ರೀತಿಯ ಮಳೆ ಸುರಿಸಿದ್ದಾರೆ.
ಆಮೀರ್ ಖಾನ್ ಪ್ರೊಡಕ್ಷನ್ಸ್ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಮಗ ಆಜಾದ್ ಜೊತೆ ಮಾಮಿನ ಹಣ್ಣುಗಳನ್ನು ಆನಂದಿಸುತ್ತಿರುವ ಫೋಟೋಗಳನ್ನು ಸೂಪರ್‌ಸ್ಟಾರ್ ಆಮೀರ್ ಹಂಚಿಕೊಂಡಿದ್ದಾರೆ.
ಆಮೀರ್ ಇತ್ತೀಚೆಗೆ ಇನ್‌ಫ್ಲುಯೆನ್ಸರ್ ರೂಹೀ ದೋಸಾನಿ ಮತ್ತು ಅವರ ಕುಟುಂಬದೊಂದಿಗೆ ಬೈಸಾಖಿಯನ್ನು ಆಚರಿಸಿದರು. ಧೋಲ್ ಜಾಗೀರೋ ಡಾಗೆ ಡ್ಯಾನ್ಸ್ ಮಾಡುವಾಗ ಅಮೀರ್ ಲಸ್ಸಿ ಮತ್ತು ಹಲ್ವಾ ತಿನ್ನುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದೆ.
ಆಮೀರ್ ಈ ಹಿಂದೆ ನ್ಯೂಸ್ 18 ನೀಡಿದ ಇಂಡರ್‌ವ್ಯೂವ್‌ನಲ್ಲಿ ತನ್ನ ಕೆಲಸಗಳ ನಡುವೆ ತನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿಲ್ಲ ಎಂದು ವಿಷಾದಿಸಿದ್ದಾರೆ.
<p>ಕೆಲಸವ ನಿರ್ವಹಿಸಲು ಫೋನ್ ನಿರಂತರವಾಗಿ ತೊಂದರೆ ನೀಡುತ್ತಿದೆ ಎಂದು ಭಾವಿಸಿ ಫೋನ್ ಅನ್ನು ತ್ಯಜಿಸುವ ನಿರ್ಧಾರ ಮಾಡಿದ್ದಾರೆ. </p>
ಆಮೀರ್ ಕರೀನಾ ಕಪೂರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್ ನ ರಿಮೇಕ್ ಆಗಿದೆ. ಈ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಲಿದ್ದು, ಆಗಸ್ಟ್ 12, 2022 ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.