ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಸದಾ ಬಾಯ್ ಫ್ರೆಂಡ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇರಾ ತನ್ನ ಬಾಯ್ ಫ್ರೆಂಡ್ ನುಪೂರ್ ಶಿಖಾರೆ ಜೊತೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಈ ಜೋಡಿ ಎಂಗೇಜ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ.
ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಸದಾ ಬಾಯ್ ಫ್ರೆಂಡ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇರಾ ತನ್ನ ಬಾಯ್ ಫ್ರೆಂಡ್ ನುಪೂರ್ ಶಿಖಾರೆ ಜೊತೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಈ ಜೋಡಿ ಎಂಗೇಜ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ. ಹೌದು, ಇರಾ ಖಾನ್ ಮತ್ತು ನುಪೂರ್ ಶಿಖಾರೆ ಇಬ್ಬರು ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ರಿಂಗ್ ಹಾಕಿ ಪ್ರಪೋಸ್ ಮಾಡಿರುವ ರೊಮ್ಯಾಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ನೂಪುರ್ ಶಿಖಾರೆ ಮತ್ತು ಆಮೀರ್ ಖಾನ್ ಪುತ್ರಿ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ತನ್ನ ಪ್ರೀತಿ ವಿಚಾರವನ್ನು ಬಚ್ಚಿಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದರು. ಇದೀಗ ಎರಡು ವರ್ಷಗಳ ಬಳಿಕ ಇಬ್ಬರು ಎಂಗೇಜ್ ಆಗಿದ್ದಾರೆ.
ಫಿಟ್ನೆಸ್ ಫ್ರೀಕ್ ನುಪೂರ್ ಶಿಖಾರೆ ಇತ್ತೀಚಿಗಷ್ಟೆ ಸೈಕ್ಲಿಂಗ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಪ್ರೇಯಸಿ ಇರಾ ಖಾನ್ ಕೂಡ ಭಾಗಿಯಾಗಿದ್ದರು. ಆಗ ನುಪೂರ್ ಪ್ರೇಯಸಿ ಇರಾಗೆ ಪ್ರಪೋಸ್ ಮಾಡಿದ್ದಾರೆ. ಎಲ್ಲರ ಮುಂದೆಯೇ ಮಂಡಿಯೂರಿ ಪ್ರಪೋಸ್ ಮಾಡಿ, ರಿಂಗ್ ಹಾಕಿ ಲವ್ ಯು ಹೇಳಿ, ಲಿಪ್ ಕಿಸ್ ಮಾಡಿದ್ದಾರೆ. ನುಪೂರ್, ಮಂಡಿಯೂರಿ ನೀವು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದರು. ಆಗ ಇರಾ ಮೈಕ್ ತೆಗೆದುಕೊಂಡು ಹೌದು ಎಂದು ಹೇಳಿದರು. ಬಳಿಕ ಇಬ್ಬರು ಹಗ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ನವ ಜೋಡಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ವಿಶ್ ಮಾಡಿದರು.
Aamir Khan ಪುತ್ರಿ ಬಾಯ್‌ಫ್ರೆಂಡ್ ಜೊತೆ ಹಾಟ್ ಮತ್ತು ಬೋಲ್ಡ್ ಫೋಟೋಗಳು
ಈ ವಿಡಿಯೋವನ್ನು ಇರಾ ಖಾನ್ ಮತ್ತು ನುಪೂರ್ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 'ಅವಳು ಎಸ್ ಅಂತ ಹೇಳಿದಳು, ನಾನು ಕೂಡ ಎಸ್ ಎಂದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇರಾ ಮತ್ತು ನುಪೂರ್ ಜೋಡಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಬಹುತೇಕರು ಇಬ್ಬರಿಗೂ ಶುಭಹಾರೈಸುತ್ತಿದ್ದಾರೆ. ಅದ್ಭುತವಾದ ಕ್ಷಣ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಆಮೀರ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣದಿಂದ ದೂರ ಇರುವ ಆಮೀರ್ ಖಾನ್ ಪ್ರತಿಕ್ರಿಯೆ ಏನಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಅಂದಹಾಗೆ ನುಪೂರ್ ಶಿಖಾರೆ ಆಮೀರ್ ಖಾನ್ ಅವರಿಗೂ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಅಪ್ಪನ ಟ್ರೇನರ್ ಜೊತೆಯೇ ಪುತ್ರಿ ಪ್ರೀತಿಯಲ್ಲಿ ಬಿದ್ದರು. ಇದೀಗ ಎಂಗೇಜ್ ಕೂಡ ಆದರು. ಇರಾ ಖಾನ್ ಮತ್ತು ನುಪೂರ್ ಶಿಖಾರೆ ಇಬ್ಬರು 2020ರಿಂದ ಪ್ರೀತಿಯಲ್ಲಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದರು.
ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಆಮೀರ್ ಪುತ್ರಿ ಬಹಿರಂಗ; ಹೊರಬರಲು ಒದ್ದಾಡುತ್ತಿದ್ದೀನಿ ಎಂದ ಇರಾ
ಇರಾ ಖಾನ್, ಆಮೀರ್ ಖಾನ್ ಮತ್ತು ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ. ಆಮೀರ್- ರೀನಾ ದಾಂಪತ್ಯಕ್ಕೆ ಜುನೈದ್ ಖಾನ್ ಎನ್ನುವ ಮತ್ತೋರ್ವ ಮಗನಿದ್ದಾನೆ. ಆಮೀರ್ ಖಾನ್ ಬಳಿಕ ಕಿರಣ್ ರಾವ್ ಅವರನ್ನು ಮದುವೆಯಾದರು ಆದರೆ ಕಿರಣ್ ಜೊತೆಯೂ ದಾಂಪತ್ಯ ಜೀವನ ಕಡಿದುಕೊಂಡು ಒಂಟಿಯಾಗಿದ್ದಾರೆ. ಆದರೆ ಮೊದಲ ಪತ್ನಿ ಹಾಗೂ ಎರಡನೇ ಪತ್ನಿ ಇಬ್ಬರ ಜೊತೆಯೂ ಸ್ನೇಹದಿಂದ ಇದ್ದಾರೆ. ಇದೀಗ ಪುತ್ರಿ ಎಂಗೇಜ್ ಆಗಿರುವ ಬಗ್ಗೆ ಏನು ಹೇಳುತ್ತಾರೆ ಎಂದು ಕಾದುನೋಡಬೇಕಿದೆ.
