ಸ್ವಂತ ಆಫೀಸ್‌ನಿಂದ ಅಮಿರ್ ಖಾನ್ ಹೊರದಬ್ಬಿದ ಡೂಪ್ಲಿಕೇಟ್, ಜನ ಇದೀಗ ಅಮಿರ್ ಖಾನ್ ಎದುರಿಗೆ ನಿಂತರೂ ಇದು ಸುನಿಲ್ ಗ್ರೋವರ್ ಎನ್ನುತ್ತಿದ್ದಾರೆ. ಇತ್ತ ಡೂಪ್ಲಿಕೇಟ್ ಅಮಿರ್ ಖಾನ್‌ ಆಗಿರುವ ಸುನಿಲ್ ಗ್ರೋವರ್ ಅಭಿಮಾನಿಗಳಿಗೆ ಅಸಲಿ ಅಮಿರ್ ಆಗಿ್ದ್ದಾರೆ. 

ಮುಂಬೈ (ಜ.12) ಕಾಮಿಡಿ ನಟ ಸುನಿಲ್ ಗ್ರೋವರ್ ಇತ್ತೀಚೆಗೆ ಕಪಿಲ್ ಶರ್ಮಾ ಕಾಮಿಡಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿರ್ ಖಾನ್ ಮಿಮಿಕ್ರಿ ಮಾಡಿ ಭಾರಿ ಸಂಚಲನ ಸೃಷ್ಟಿಸಿದ್ದರು. ಸುನಿಲ್ ಗ್ರೋವರ್ ನಿಖರೆತೆ ಎಐ ತಂತ್ರಜ್ಞಾನವನ್ನೂ ಮೀರಿಸಿದೆ. ಅಷ್ಟರಮಟ್ಟಿಗೆ ಸುನಿಲ್ ಗ್ರೋವರ್ ಸಂಪೂರ್ಣವಾಗಿ ಅಮಿರ್ ಖಾನ್ ಆಗಿ ಬದಲಾಗಿದ್ದರು. ಇದೀಗ ಜನರು ಅಸಲಿ ಅಮಿರ್ ಖಾನ್ ಎದುರಿ ನಿಂತರೂ ಇದು ಡೂಪ್ಲಿಕೇಟ್ ಎನ್ನುತ್ತಿದ್ದಾರೆ. ಇತ್ತ ಸುನಿಲ್ ಗ್ರೋವರ್ ಅಸಲಿ ಅಮಿರ್ ಖಾನ್ ಎಂದು ಜನ ಕನ್ಫ್ಯೂಸ್ ಆಗುವಷ್ಟರ ಮಟ್ಟಿಗೆ ಸುನಿಲ್ ಗ್ರೋವರ್ ಸಂಚಲನ ಸೃಷ್ಟಿಸಿದ್ದಾರೆ. ಇದರ ಪರಿಣಾಮ ಸ್ವಂತ ಆಫೀಸ್‌ನಿಂದಲೇ ಅಮಿರ್ ಖಾನ್ ಹೊರಬಿದ್ದಿದ್ದಾರೆ. ಕಾರಣು ಡೂಪ್ಲಿಕೇಟ್ ಅಮಿರ್ ಖಾನ್. ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಏನಿದು ಅಸಲಿ ನಕಲಿ ಅಮಿರ್ ಖಾನ್ ವಿಡಿಯೋ?

ಅಸಲಿಗೆ ಈ ವಿಡಿಯೋ ಬಾಲಿವುಡ್‌ನ ಸಿನಿಮಾ ಹ್ಯಾಪಿ ಪಟೇಲ್ ಖತರ್ನಾಕ್ ಜಾಸೂಸ್ ಸಿನಿಮಾದ ಪ್ರಮೋಶನ್ ಭಾಗವಾಗಿ ರಚಿಸಲಾಗಿದೆ. ಆದರೆ ಈ ವಿಡಿಯೋ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಜನರು ಅಸಲಿ-ನಕಲಿ ಅಮಿರ್ ಖಾನ್ ನೋಡಿ ವ್ಯತ್ಯಾಸವೇ ಇಲ್ಲ ಎಂದಿದ್ದಾರೆ. ನಕಲಿ ಅಮಿರ್ ಖಾನ್, ಅಸಲಿ ಅಮಿರ್ ಖಾನ್ ಮನೆಗೆ ಎಂಟ್ರಿಕೊಟ್ಟು, ಅಸಲಿ ಅಮಿರ್ ಖಾನ್‌ನ್ನು ಅವರ ಅಫೀಸ್‌ನಿಂದಲೇ ಹೊರದಬ್ಬಿದ ರೋಚಕ ವಿಡಿಯೋ ಇದು.

ಈ ವಿಡಿಯೋದಲ್ಲಿ ಏನಿದೆ?

ಈ ವಿಡಿಯೋ ಆರಂಭಗೊಳ್ಳುವುದೇ ಅಸಲಿ ಅಮಿರ್ ಖಾನ್‌ನನ್ನೂ ಸೆಕ್ಯೂರಿಟಿ ಗಾರ್ಡ್‌ಗಳು ಮನೆಯಿಂದ ಹೊರಗೆ ಹಾಕುವ ದೃಶ್ಯವಿದೆ. ನಾನು ಅಸಲಿ ಅಮಿರ್ ಖಾನ್ ಎಂದು ಎಷ್ಟೇ ಸಾರಿ ಹೇಳಿದರೂ ಸೆಕ್ಯೂರಿಟಿ ಗಾರ್ಡ್, ಸಿನಿಮಾ ನಿರ್ದೇಶಕ ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಕೊನೆಗೂ ಅಸಲಿ ಅಮಿರ್ ಖಾನ್ ಆಫೀಸ್‌ನಿಂದಲೇ ಹೊರಬಿದ್ದ ದೃಶ್ಯವಿದು. ಎರಡನೇ ದೃಶ್ಯದಲ್ಲಿ ಅಮಿರ್ ಖಾನ್ ಆಫೀಸ್‌ನಿಂದ ಹೊರಬೀಳಲು ಕಾರಣವೇನು ಅನ್ನೋ ಫ್ಲಾಶ್‌ಬ್ಯಾಕ್ ನೀಡಲಾಗಿದೆ.

ಹ್ಯಾಪಿ ಪಟೇಲ್ ಸಿನಿಮಾದ ಮೂಲಕ ವೀರ್ ದಾಸ್ ನಿರ್ದೇಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅಮಿರ್ ಖಾನ್ ಆಫೀಸ್ ಸೇರಿಕೊಂಡ ಡೂಪ್ಲಿಕೇಟ್ ಅಮಿರ್ ಖಾನ್(ಸುನಿಲ್ ಗ್ರೋವರ್ ) ಅದೇ ರೀತಿಯ ಡ್ರೆಸ್, ಶೈಲಿಯಲ್ಲಿ ಕುಳಿತಿದ್ದಾರೆ. ಈ ವೇಳೆ ಸಿನಿಮಾ ನಿರ್ದೇಶಕ ವೀರ್ ದಾಸ್, ಅಮಿರ್ ಸರ್ ನಾನು ಒಳಗೆ ಬರಲೇ ಎಂದು ಕೇಳುತ್ತಾನೆ. ಹಿಂದಿರುಗಿದ ಡೂಪ್ಲಿಕೇಟ್ ಅಮಿರ್ ಕಪೂರ್, ಅರೆ ವೀರ್, ಬನ್ನಿ ಬನ್ನಿ ಎಂದು ಸ್ವಾಗತಿಸುತ್ತಾರೆ. ಒಂದು ಕ್ಷಣ ಕಕ್ಕಾಬಿಕ್ಕಿಯಾದ ವೀರ್, ಅಮೀರ್ ಸರ್ ನೀವು ಸ್ವಲ್ಪ ಭಿನ್ನವಾಗಿ ಕಾಣುತ್ತಿದ್ದೀರಿ ಎನ್ನುತ್ತಾರೆ. ಅದು ನಾನು ವರ್ಕೌಟ್ ಮಾಡುತ್ತಿದ್ದೇನೆ , ಕುಳಿತುಕೋ ಎಂದು ಡೂಪ್ಲಿಕೇಟ್ ಅಮಿರ್ ಖಾನ್ ಪ್ರತಿಕ್ರಿಯೆ ನೀಡುತ್ತಾರೆ.

ನಿಮ್ಮ ಬಗ್ಗೆ ಹೆಮ್ಮೆ ಇದೆ. ಉತ್ತಮ ಸಿನಿಮಾ ಮಾಡಿದ್ದೀರಿ. ಹ್ಯಾಪಿ ಪಾಟೀಲ್ ಸಿನಿಮಾ ಚೆನ್ನಾಗಿದೆ ಎಂದಾಗ, ಸರ್ ಅದು ಹ್ಯಾಪಿ ಪಟೇಲ್ ಎಂದು ವೀರ್ ದಾಸ್ ಪ್ರತಿಕ್ರಿಯಿಸಿದ್ದಾರೆ. ಇವರ ನಡುವೆ ಇದೇ ರೀತ ಹಲವು ಸಂಭಾಷಣೆಗಳು ನಡೆಯುತ್ತದೆ. ಬಳಿಕ ಬೋನಸ್ ಚೆಕ್ ನೀಡಿದ ಡೂಪ್ಲಿಕೇಟ್ ಅಮಿರ್, ಇದು ಸಿನಿಮಾ ಸೂಪರ್ ಹಿಟ್‌ಗಾಗಿ ನೀಡುತ್ತಿರುವ ಬೋನಸ್ ಚೆಕ್ ಎಂದಿದ್ದಾರೆ. ಸಿನಿಮಾ ಜನವರಿ 16ಕ್ಕೆ ರಿಲೀಸ್ ಆಗಲಿದೆ ಎಂದಾಗ, ನನಗೆ ಗೊತ್ತು, ಅದರೆ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ ಎಂದು ಚೆಕ್ ನೀಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿಲ್ಲ ಅಂದರೆ ನನ್ನ ಹೆಸರು ಅಮಿರ್ ಖಾನ್ ಅಲ್ಲ ಎಂದು ಡೂಪ್ಲಿಕೇಟ್ ಹೇಳಿದ್ದಾರೆ. ಬಳಿಕ ಮತ್ತೊಂದು ಚೆಕ್ ನೀಡಿ ಇದು ಈ ಸಿನಿಮಾದ ಸೀಕ್ವೆಲ್ ಮಾಡಲು ಎಂದಿದ್ದಾರೆ. ಚೆಕ್ ನೋಡಿ ವೀರ್ ದಾಸ್ ಭಾವುಕರಾಗಿದ್ದಾರೆ.

ಇದೇ ವೇಳೆ ಅಸಲಿ ಅಮಿರ್ ಖಾನ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ವೀರ್ ದಾಸ್ ಏನು ನಡೆಯುತ್ತಿದೆ ಇಲ್ಲಿ, ಡೂಪ್ಲಿಕೇಟ್ ಅಮಿರ್ ಖಾನ್ ನೋಡಿ ಯಾರು ಈತ ಎಂದು ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ ವೀರ್ ದಾಸ್, ಅದು ಅಸಲಿ ಅಮಿರ್ ಖಾನ್, ನೀವು ಮಿಮಿಕ್ರಿ ಮಾಡುವ ಸುನಿಲ್ ಗ್ರೋವರ್ ಎಂದು ವೀರ್ ದಾಸ್ ಹೇಳುತ್ತಾರೆ. ಇಲ್ಲಾ ನಾನು ಅಸಲಿ ಅಮಿರ್ ಖಾನ್ ಎಂದು ಹೇಳಿದರೂ ವೀರ್ ದಾಸ್ ನಂಬಲೇ ಇಲ್ಲ. ಇತ್ತ ಅಸಲಿ ಅಮಿರ್ ಖಾನ್ ಸೆಕ್ಯೂರಿಟಿಯನ್ನು ಕರೆದಾಗ, ತಕ್ಷಣವೇ ಡೂಪ್ಲಿಕೇಟ್ ಅಮಿರ್ ಎರಡು ಚೆಕ್‌ನ್ನು ಸೆಕ್ಯೂರಿಟಿಗೆ ನೀಡುತ್ತಾರೆ. ಪರಿಣಾಮ ಅಸಲಿ ಅಮಿರ್ ಖಾನ್ ಆಫೀಸ್‌ನಿಂದ ಹೊರಬಿದ್ದಿದ್ದಾರೆ. ಈ ವಿಡಿಯೋ ಸಂಪೂರ್ಣವಾಗಿ ಅಮಿರ್ ಖಾನ್ ಪೊಡಕ್ಷನ್ ಹೌಸ್ ನಿರ್ಮಾಣ ಮಾಡಿರುವ ಸಿನಿಮಾದ ಪ್ರಮೋಶನ್‌ಗೆ ಮಾಡಿರುವ ವಿಡಿಯೋ. ಅಸಲಿ ಹಾಗೂ ಮಿಮಿಕ್ರಿ ವಿಡಿಯೋ ಜನರು ಪಿಧಾ ಆಗಿದ್ದಾರೆ. ಒಂದೇ ಫ್ರೇಮ್‌ನಲ್ಲಿ ಇಬ್ಬರನ್ನು ಜನರು ನೋಡಿ ಜನರು ಸಂಭ್ರಮಿಸಿದ್ದಾರೆ.

View post on Instagram