ಕಾರಲ್ಲಿ ಸೆಕ್ಸ್ ಮಾಡಿದ್ದಾರಾ ವಿಜಯ್ ದೇವರಕೊಂಡ? ಕರಣ್ ಮುಂದೆ ಸೆಕ್ಸ್ ಲೈಫ್ ತೆರೆದಿಟ್ಟ ಅರ್ಜುನ್ ರೆಡ್ಡಿ ಸ್ಟಾರ್

ಕರಣ್ ಜೋಹರ್, ವಿಜಯ್ ಬಳಿ ಕೊನೆಯ ಬಾರಿ ಸೆಕ್ಸ್ ಮಾಡಿದ್ದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ನಗುತ್ತಾ 'ಸಾಕು ಸಾಕು ನಿಲ್ಲಿಸಿ..' ಎಂದು ಹೇಳಿ ಕರಣ್ ಬಾಯಿ ಮುಚ್ಚಿಸಿದರು. ಬಳಿಕ ಕರಣ್ ಜೋಹರ್ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ ಬಗ್ಗೆ ಕೇಳಿದರು. ಇದರ ಬಗ್ಗೆ ಬಹಿರಂಗ ಪಡಿಸಿದ ವಿಜಯ್ ದೇವರಕೊಂಡ 'ಇದನ್ನು ಕಾರಿನಲ್ಲಿ ಮಾಡಿದ್ದೇನೆ' ಎಂದು ಧೈರ್ಯವಾಗಿ ಹೇಳಿದರು.

Did Vijay Deverakonda have sex in a car? here is Arjun reddy star reaction sgk

ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಜನಪ್ರಿಯ ಕಾಫಿ ವಿತ್ ಕರಣ್ ಶೋ ಈ ಬಾರಿಯೂ ಸಕಷ್ಟು ಕುತೂಹಲದಿಂದ ಕೂಡಿದೆ. ವಿಶೇಷ ಎಂದರೆ ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಇದು 7ನೇ ಸೀಸನ್ ಆಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ಪ್ರಸಾರವಾಗಿದೆ. ಈ ಬಾರಿಯ ಮತ್ತೊಂದು ವಿಶೇಷ ಎಂದರೆ ಸೌತ್ ಸೆಲೆಬ್ರಿಟಿಗಳು ಸಹ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಬಳಿಕ ಇದೀಗ ಮತ್ತೋರ್ವ ಸೌತ್ ಸ್ಟಾರ್ ಕರಣ್ ಜೋಹರ್ ಮುಂದೆ ಹಾಜರಾಗಿದ್ದಾರೆ. ತೆಲುಗಿನ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿ ಕಾಫಿ ವಿತ್ ಕರಣ್ ಶೋಗೆ ಹಾಜರಾಗಿದ್ದರು. ಸದ್ಯ ವಿಜಯ್ ಮತ್ತು ಅನನ್ಯಾ ಕಾಣಿಸಿಕೊಂಡಿರುವ ಎಪಿಸೋಡ್‌ನ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ. ಈ ಶೋನಲ್ಲಿ ವಿಜಯ್ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತನ್ನ ಸೆಕ್ಸ್ ಲೈಫ್ ಬಗ್ಗೆಯೂ ಮಾತನಾಡಿದ್ದಾರೆ. 

ಕರಣ್ ಜೋಹರ್, ವಿಜಯ್ ಬಳಿ ಕೊನೆಯ ಬಾರಿ ಸೆಕ್ಸ್ ಮಾಡಿದ್ದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ನಗುತ್ತಾ 'ಸಾಕು ಸಾಕು ನಿಲ್ಲಿಸಿ..' ಎಂದು ಹೇಳಿ ಕರಣ್ ಬಾಯಿ ಮುಚ್ಚಿಸಿದರು. ಬಳಿಕ ಕರಣ್ ಜೋಹರ್ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ ಬಗ್ಗೆ ಕೇಳಿದರು. ಇದರ ಬಗ್ಗೆ ಬಹಿರಂಗ ಪಡಿಸಿದ ವಿಜಯ್ ದೇವರಕೊಂಡ 'ಇದನ್ನು ಕಾರಿನಲ್ಲಿ ಮಾಡಿದ್ದೇನೆ' ಎಂದು ಧೈರ್ಯವಾಗಿ ಹೇಳಿದರು. ಅಲ್ಲೇ ಕುಳಿತಿದ್ದ ಅನನ್ಯ ಮತ್ತು ಕರಣ್ ಇಬ್ಬರು ಕಣ್ಣು ಮಿಟುಕಿಸಿ ಅನೇಕ ಬಾರಿ ಮಾಡಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿದರು.   

ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು


ಬಳಿಕ ಕರಣ್ ಜೋಹರ್ ಮತ್ತಷ್ಟು ಪ್ರಶ್ನೆ ಮಾಡಿದ್ದಾರೆ. ಒಮ್ಮೆಗೆ ಇಬ್ಬರ ಜೊತೆ ಸೆಕ್ಸ್ ಮಾಡಿದ್ದೀರಾ (Threesome)ಎಂದು ಕೇಳಿದ್ದರು. ಇದಕ್ಕೆ ವಿಜಯ್ ದೋವರಕೊಂಡ 'ಇಲ್ಲ' ಎಂದು ಹೇಳಿದರು. ಇದರಲ್ಲಿ ಒಂದು ಟ್ವಿಸ್ಟ್ ಇದೆ ಎಂದ ಕರಣ್, ಮೂವರು ಒಟ್ಟಿಗೆ ಸೆಕ್ಸ್ ಮಾಡಲು ಬಯಸಿದರೆ, ಏನು ಗೆಸ್ ಮಾಡಿ ಎಂದರು. ಇದಕ್ಕೆ ಅರ್ಜುನ್ ರೆಡ್ಡ ಸ್ಟಾರ್ ತ್ರಿಸಮ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.

ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ? ಕರಣ್ ಜೋಹರ್ ಪ್ರಶ್ನೆಗೆ ಜಾನ್ವಿ ಕಪೂರ್ ಉತ್ತರ ಹೀಗಿತ್ತು

ವಿಜಯ್ ದೇವರಕೊಂಡ ಅವರ ಈ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಜಯ್ ಬೋಲ್ಡ್ ಮಾತಿಗೆ ಅಭಿಮಾನಿಗಳು ತಹೇವಾರಿ ಕಾಮೆಂಟ್ ಮಾಡಿದ್ದಾರೆ. ವಿಜಯ್ ತುಂಬಾ ಕೂಲ್.., ಈ ಎಪಿಸೋಡ್ ಬೆಂಕಿ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಅನನ್ಯಾ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.  


    

Latest Videos
Follow Us:
Download App:
  • android
  • ios