ಆಮೀರ್​ ಖಾನ್​@ 59: ಆರು ರೂ. ಶಾಲಾ ಫೀಸ್​ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..

ಒಂದೊಮ್ಮೆ ಶಾಲೆಯ ಶುಲ್ಕ ಕಟ್ಟಲು ಪರದಾಡಿದ ನಟ ಆಮೀರ್​ ಖಾನ್​ ಇಂದು 1800 ಕೋಟಿ ರೂ. ಒಡೆಯ. ಹುಟ್ಟುಹಬ್ಬದ ನಿಮಿತ್ತ ಅವರ ರೋಚಕ ಸ್ಟೋರಿ ಇಲ್ಲಿದೆ...
 

Aamir Khan 59th birthday once had no money to pay school fees now thousand crore property suc

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬ ತಾರೆಗೂ ತನ್ನದೇ ಆದ ಕಥೆ ಇರುತ್ತದೆ. ಕೆಲವರ ವೃತ್ತಿ ಪಯಣ ತುಂಬಾ ಸುಲಭವಾಗಿದ್ದರೆ ಇನ್ನು ಕೆಲವರು ಕಷ್ಟಪಟ್ಟು ಅರ್ಹ ಸ್ಥಾನವನ್ನು ಗಳಿಸಿಕೊಳ್ಳುವವರು.  ಕೆಲವರು ತಮ್ಮ ಬಾಲ್ಯವನ್ನು ಬಡತನದಲ್ಲಿ ಕಳೆದರೆ, ಇನ್ನು ಕೆಲವರು ಅನ್ನ-ಪಾನೀಯಕ್ಕೂ ಪರದಾಡುವಂತಾದವರು. ಶಾಲಾ ಶುಲ್ಕ ಕಟ್ಟಲೂ ಹಣವಿಲ್ಲದ ಎಷ್ಟೋ ಮಂದಿ ಇಂದು ಕೋಟ್ಯಧಿಪತಿಗಳಾಗಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇಂದು ಮೆರೆಯುತ್ತಿರುವ ಎಷ್ಟೋ ಮಂದಿಯ ಹಿಂದಿನ ಕಥೆ ನೋಡಿದರೆ ಅವರ ಪೈಕಿ ಹಲವರು ಹಿಂದೊಮ್ಮೆ ತುತ್ತು ಅನ್ನಕ್ಕೂ ಕಷ್ಟಪಟ್ಟವರು ಎನ್ನುವ ಸತ್ಯ ತಿಳಿಯುತ್ತದೆ. ಇಂದು ಎಷ್ಟೋ ಸಂದರ್ಭದಲ್ಲಿ ಶ್ರೀಮಂತರಿಗೆ ಬಡವರ ಮೇಲೆ ಕನಿಕರವಿಲ್ಲ. ತಮ್ಮ ಆದಾಯವನ್ನು ಬಡವರಿಗೆ ಹಂಚಿದರೆ ಏನಾಗುತ್ತದೆ ಎನ್ನುವ ಮಾತೆಲ್ಲಾ ಕೇಳಿಬರುತ್ತದೆ. ಆದರೆ ಅಂಥ ಸಿರಿವಂತರ ಹಿನ್ನೆಲೆ ನೋಡಿದಾಗ, ಪೈಸೆ ಪೈಸೆಗೂ ಲೆಕ್ಕಾಚಾರ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಬೆಳೆದು ಈ ಸ್ಥಾನಕ್ಕೆ ಏರಿದವರೇ ಕಂಡುಬರುವುದು ಹೆಚ್ಚು. 


ಅಂಥ ಬಡನತದಲ್ಲಿ ಬಂದವರಲ್ಲಿ ಒಬ್ಬರು ನಟ ಆಮೀರ್​ ಖಾನ್​. ಇಂದು 1 ಸಾವಿರದ 800 ಕೋಟಿ ರೂಪಾಯಿಗಳ ಒಡೆಯನಾಗಿರುವ ಆಮೀರ್​ ಖಾನ್​ ಅವರಿಗೆ ಈ ದಿನ ಅಂದ್ರೆ ಮಾರ್ಚ್​ 14  59ನೇ ಹುಟ್ಟುಹಬ್ಬದ ಸಂಭ್ರಮ. ಸಾವಿರಾರು ಕೋಟಿ ರೂಪಾಯಿ ಒಡೆಯನಾಗಿರುವ ಆಮೀರ್​ ಖಾನ್​ ಹಿಂದೊಮ್ಮೆ ತುತ್ತು ಅನ್ನಕ್ಕೂ ಪರಿಪಾಟಲು ಪಟ್ಟವರು ಎನ್ನುವುದು ಅತಿ ಕಡಿಮೆ ಜನಕ್ಕೆ ಗೊತ್ತಿದೆ. 1965ರ ಮಾರ್ಚ್​ 14ರಂದು ಹುಟ್ಟಿದ ನಟ ಆಮೀರ್​ ಖಾನ್​ ಅವರು ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರ ಫೀಸ್​ ಆರು ರೂಪಾಯಿಗಳು. ಆಗಿನ ಆರು ರೂಪಾಯಿ ಎಂದರೆ ಈಗಿನ ಸಹಸ್ರಾರು ರೂಪಾಯಿಗೂ ಅಧಿಕ ಎನ್ನುವುದು ಸತ್ಯವೇ. ಆದರೆ ಅಂದು ಆರು ರೂಪಾಯಿ ಕಟ್ಟಲು ಆಮೀರ್​ ಪಾಲಕರಿಗೆ ಸಾಧ್ಯವಾಗಿರಲಿಲ್ಲ. ಕುಟುಂಬವು ಸಾಲದ ಹೊರೆಯಲ್ಲಿ ಸಿಲುಕಿತ್ತು. 

6 ನೇ ತರಗತಿಯಲ್ಲಿ 6 ರೂ, 7 ನೇ ತರಗತಿಯಲ್ಲಿ 7 ರೂ ಮತ್ತು 8 ನೇ ತರಗತಿಯಲ್ಲಿ 8 ರೂಪಾಯಿ ಕಟ್ಟುವ ಅನಿವಾರ್ಯತೆ ಉಂಟಾದಾಗ ತಮ್ಮ ಕುಟುಂಬ ಪಟ್ಟ ಪರಿಪಾಟಲಿನ ಬಗ್ಗೆ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ, ಆಮೀರ್​ ಖಾನ್​ ತಿಳಿಸಿದ್ದಾರೆ. ಸುಮಾರು ಎಂಟು ವರ್ಷ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿತ್ತು. ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು. ಇನ್ನು ಶಾಲೆಯ ಶುಲ್ಕ ಕಟ್ಟುವುದು ದೂರದ ಮಾತೇ ಆಗಿತ್ತು ಎಂದಿದ್ದಾರೆ. ತಾವು ಮತ್ತು ಅಣ್ಣ ತಮ್ಮಂದಿರು ಶಾಲೆಯ ಶುಲ್ಕವನ್ನು ಯಾವಾಗಲೂ ತಡವಾಗಿ ಜಮಾ ಮಾಡುತ್ತಿದ್ದೆವು.  ಅಂತಹ ಪರಿಸ್ಥಿತಿಯಲ್ಲಿ ಪ್ರಾಂಶುಪಾಲರು ಎಲ್ಲಾ ಶಾಲಾ ಮಕ್ಕಳ ಮುಂದೆ ಅಸೆಂಬ್ಲಿಯಲ್ಲಿ ನಮ್ಮ ಹೆಸರನ್ನು ಘೋಷಿಸುತ್ತಿದ್ದರು. ತುಂಬಾ ನಾಚಿಕೆ ಹಾಗೂ ಸಂಕಟವಾಗುತ್ತಿತ್ತು ಎಂದಿದ್ದಾರೆ.

ಡಿವೋರ್ಸ್​ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ​: ಆಮೀರ್​ ಖಾನ್​ 2ನೇ ಮಾಜಿ ಪತ್ನಿ ಕಿರಣ್​ ಓಪನ್​ ಮಾತು!
 
ಆದರೆ ಇಂದು, ಹಂತ ಹಂತವಾಗಿ ಮೇಲೇರುತ್ತಾ ಬಂದಿದ್ದಾರೆ  ಆಮೀರ್​. ಹಲವಾರು ಸಂಕಷ್ಟಗಳನ್ನುಎದುರಿಸಿ, ಹಲವು ಕ್ಷೇತ್ರಗಳಲ್ಲಿ ದುಡಿದು ಮೇಲೆ ಬಂದಿರೋ ನಟ ಈಗ 1,800 ಕೋಟಿ ರೂಪಾಯಿಗಳ ಒಡೆಯ. ಬಾಲಿವುಡ್​ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾಗಿರುವ ನಟ ಬಾಂದ್ರಾದಲ್ಲಿ 5 ಸಾವಿರ ಚದರ ಅಡಿಯ ಸಮುದ್ರಾಭಿಮುಖ ಬಂಗಲೆ ಹೊಂದಿದ್ದು,ಅದರ ಬೆಲೆ 60 ಕೋಟಿ ರೂಪಾಯಿ. ಅವರ ಬಳಿ 6.95 ರಿಂದ 7.95 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಇವೆ. ಆಮೀರ್ 10.50 ಕೋಟಿ ಮೌಲ್ಯದ Mercedes Benz S600 ಅನ್ನು ಸಹ ಹೊಂದಿದ್ದಾರೆ. ಇದಲ್ಲದೇ ಪಂಚಗಣಿಯಲ್ಲಿ 7 ಕೋಟಿ ರೂಪಾಯಿ ಮೌಲ್ಯದ ಫಾರ್ಮ್ ಹೌಸ್ ಕೂಡ ಹೊಂದಿದ್ದಾರೆ.

ಅಂದಹಅಗೆ ಆಮೀರ್​,  ಮುಂಬೈನಲ್ಲಿ ತಾಹಿರ್ ಹುಸೇನ್ ಮತ್ತು ಜೀನತ್ ಹುಸೇನ್ ದಂಪತಿಗೆ ಜನಿಸಿದರು. ಅವರ ತಂದೆ ಚಲನಚಿತ್ರ ನಿರ್ಮಾಪಕ ಮತ್ತು ಅವರ ಚಿಕ್ಕಪ್ಪ ನಾಸಿರ್ ಹುಸೇನ್ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದರಿಂದ ಸಿನಿಮಾ  ಅವರ ರಕ್ತದಲ್ಲಿದೆ. ಆಮೀರ್ ಖಾನ್ ಅವರ ನಿಜವಾದ ಹೆಸರು ಮೊಹಮ್ಮದ್ ಆಮೀರ್ ಹುಸೇನ್ ಖಾನ್. ಆದರೆ ಚಿತ್ರರಂಗಕ್ಕೆ ಬಂದ ನಂತರ ಅದನ್ನು ಅಮೀರ್ ಖಾನ್ ಎಂದು ಮೊಟಕುಗೊಳಿಸಲಾಯಿತು. 

ಪತಿಯಾಗಿ ನನ್ನಲ್ಲಿದ್ದ ಕೊರತೆಯೇನು? ಡಿವೋರ್ಸ್​ ಬಳಿಕ ಆಮೀರ್​ ಕೇಳಿದ ಪ್ರಶ್ನೆಗೆ ಕಿರಣ್​ ಹೇಳಿದ್ದಿಷ್ಟು...

Latest Videos
Follow Us:
Download App:
  • android
  • ios