Asianet Suvarna News Asianet Suvarna News

ಮೆಟ್ರೋದಲ್ಲಿ ಲೇಡಿ ಜವಾನ್‌ ಸಕತ್‌ ಡ್ಯಾನ್ಸ್‌: ರೈಲನ್ನು ಹೈಜಾಕ್‌ ಮಾಡ್ಬೇಡಿ ಎಂದ ಪ್ರಯಾಣಿಕರು!

ಜವಾನ್‌ ಚಿತ್ರದಲ್ಲಿ ಶಾರುಖ್‌ ಖಾನ್‌ ಅವರ ಪಾತ್ರವನ್ನು ಕಾಪಿ ಮಾಡಿಕೊಂಡಿರುವ ಯುವತಿಯೊಬ್ಬಳು ಮೆಟ್ರೋ ರೈಲಿನಲ್ಲಿ ರೀಲ್ಸ್‌ ಮಾಡಿದ್ದು, ಅದೀಗ ಸಕತ್‌ ವೈರಲ್‌ ಆಗುತ್ತಿದೆ. 
 

A young lady who copied Shah Rukh Khans role in the film Jawaan suc
Author
First Published Sep 29, 2023, 2:46 PM IST

ಯಾವುದೇ ಚಿತ್ರ ಹಿಟ್‌ ಆದಾಗ ಅದರ ಹಾಡಿನ ರೀಲ್ಸ್‌ ಮಾಡುವುದು ಮಾಮೂಲು. ಇಂದು ಹೆಚ್ಚಿನ ಚಿತ್ರಗಳು ಬಿಡುಗಡೆಗೂ ಮುನ್ನವೇ ಹಾಡುಗಳಿಂದ ಸೌಂಡ್‌ ಮಾಡುತ್ತವೆ. ಚಿತ್ರಗಳಿಗಿಂತಲೂ ಹೆಚ್ಚಾಗಿ ಹಾಡುಗಳು ಕ್ರೇಜ್‌ ಹುಟ್ಟಿಸುತ್ತವೆ. ಚಿತ್ರ ಬಿಡುಗಡೆಗೂ ಮುನ್ನವೇ ಹಾಡುಗಳಿಗೆ ರೀಲ್ಸ್‌ ಮಾಡಲಾಗುತ್ತದೆ. ಆದರೆ ಜವಾನ್‌ ವಿಷಯದಲ್ಲಿ ಹಾಗಾಗಲಿಲ್ಲ. 1000 ಕೋಟಿ ಬಾಚಿದ ಜವಾನ್‌ನಲ್ಲಿ ಹಾಡುಗಳು ಅಷ್ಟೊಂದು ಹಿಟ್‌ ಆಗಲೂ ಇಲ್ಲ, ಮಾತ್ರವಲ್ಲದೇ ಹಾಡುಗಳನ್ನೇ ಮುಂದಿಟ್ಟುಕೊಂಡು ಚಿತ್ರದ ಪ್ರಮೋಷನ್‌ ಕೂಡ ಮಾಡಲಾಗಿಲ್ಲ. ಅಷ್ಟಕ್ಕೂ ಈ ಚಿತ್ರವು action triller ಆಗಿರೋ ಹಿನ್ನೆಲೆಯಲ್ಲಿ ಹಾಡುಗಳಿಗೆ ಅಷ್ಟು ಪ್ರಾಧಾನ್ಯತೆ ಇಲ್ಲ. 

ಇದರಲ್ಲಿ ಹೈಲೈಟ್‌ ಆಗಿರುವ ಹಾಡು ಎಂದರೆ, ಟ್ರೈನ್ ಹೈಜಾಕ್ ಟೈಮ್‌ನಲ್ಲಿ ಬರುವ ಒಂದು ಗೀತೆ. ಅಷ್ಟಕ್ಕೂ ಈ ಚಿತ್ರದಲ್ಲಿ  ಎರಡು ಹಳೆ ಹಾಡುಗಳನ್ನ ಬಳಸಿಕೊಳ್ಳಲಾಗಿದೆ. ಶ್ರೀ 420 ಚಿತ್ರದ ರಾಮಯ್ಯ ವಸ್ತಾವಯ್ಯ  ಎಂಬ ಸೂಪರ್‌ಹಿಟ್‌ ಗೀತೆಯನ್ನ ಇದೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.  ಜವಾನ್ ಸಿನಿಮಾದ  ಹಾಡುಗಳಲ್ಲಿ Bees Saal Baad ಸಿನಿಮಾದ Beqarar Karke ಹಾಡನ್ನ ಇಲ್ಲಿ ಸ್ಪೆಷಲ್ ಆಗಿ ಉಪಯೋಗಿಸಲಾಗಿದೆ. ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಈ ಹಾಡಿಗೆ ವಿಭಿನ್ನ ರೀತಿಯಲ್ಲಿ ಟಚ್‌ ಕೊಟ್ಟಿದ್ದಾರೆ.

ಸಾವಿರ ಕೋಟಿ ಕ್ಲಬ್​ ಸೇರಿದ ಜವಾನ್​: ಅಮುಲ್​ ಬೇಬಿ ಅವತಾರವೆತ್ತಿದ ಶಾರುಖ್​ ಖಾನ್!

ಆದರೆ ಚಿತ್ರದ ಹಾಡುಗಳಿಗೆ ರೀಲ್ಸ್‌ ಯಾರೂ ಮಾಡಿದಂತಿಲ್ಲ. ಇದೀಗ ಟ್ರೈನ್ ಹೈಜಾಕ್ ಹಾಡಿಗೆ ಟ್ರೇನಿನಲ್ಲಿಯೇ ಯುವತಿಯೊಬ್ಬಳು ರೀಲ್ಸ್‌ ಮಾಡಿದ್ದು ಅದೀಗ ಸಕತ್‌ ವೈರಲ್‌ ಆಗಿದೆ. ಅಷ್ಟಕ್ಕೂ ಈಕೆ ದೆಹಲಿಯ ಮೆಟ್ರೊ ರೈಲಿನಲ್ಲಿ ರೀಲ್ಸ್  ಮಾಡಿದ್ದಾಳೆ. ಈ ಸಮಯದಲ್ಲಿ ಶಾರುಖ್‌ ಖಾನ್‌ ಮುಖಕ್ಕೆ ಬಟ್ಟೆ ಸುತ್ತಿಕೊಂಡಿರುವ ರೀತಿಯಲ್ಲಿ ತಾನೂ ಬಟ್ಟೆ ಸುತ್ತಿಕೊಂಡಿರುವ ಯುವತಿ, ತಾನೇ ಲೇಡಿ ಜವಾನ್ (Lady Jawan) ಎಂದು ಕ್ಯಾಪ್ಷನ್‌ ಕೊಟ್ಟು ವಿಡಿಯೋ ಶೇರ್‌ ಮಾಡಿಕೊಂಡಿದ್ದಾಳೆ. ಇದೀಗ ಸಕತ್‌ ವೈರಲ್‌ ಆಗಿದೆ. ಬೇಖರಾರ್‌ ಕರ್ಕೆ ಹಾಡಿಗೆ ಯುವತಿ ಸಕತ್‌ ಸ್ಟೆಪ್‌ ಹಾಕಿದ್ದಾಳೆ. ಈಕೆಯ ಇನ್‌ಸ್ಟಾಗ್ರಾಮ್‌ ಖಾತೆಯಿಂದ  ಯುವತಿ ಹೆಸರು ಸಹೇಲಿ ರುದ್ರ ಎಂದು ತಿಳಿಯಲಾಗಿದೆ. ತಾವೊಬ್ಬರು  ಇನ್ಫ್ಯೂಲೆನ್ಸರ್‌ ಎಂದು ಯುವತಿ ಹೇಳಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ರೈಲನ್ನು ಹೈಜಾಕ್‌ ಮಾಡ್ಬೇಡಿ ಎಂದು ಕಮೆಂಟಿಗರು ತಮಾಷೆ ಮಾಡ್ತಿದ್ದಾರೆ.

 ಇನ್ನು ಜವಾನ್‌ ಚಿತ್ರದ ಬಗ್ಗೆ ಹೇಳುವುದಾದರೆ, ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ  439 ಕೋಟಿ ಗಳಿಸಿದ್ದರೆ,  ಜಾಗತಿಕವಾಗಿ  1000 ಕೋಟಿ ರೂಪಾಯಿ ಗಳಿಸಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ.  ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ.  ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್​ಗಳಲ್ಲಿ ನಾಯಕ ನಟ ಶಾರುಖ್​ ಕಾಣಿಸಿಕೊಂಡಿದ್ದರೆ,  ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ.   ಚಿತ್ರದ ನಿರ್ಮಾಪಕರಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಜವಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ನಿನ್ನೆಯವರೆಗೆ 1004.92 ಕೋಟಿ ಗಳಿಸಿದೆ. 18 ದಿನಗಳಲ್ಲಿ ಚಿತ್ರ ಈ ಸಾಧನೆ ಮಾಡಿದೆ.

 

Follow Us:
Download App:
  • android
  • ios