ಮೂರನೇ ಪತ್ನಿ ಜೊತೆ ಪೂಜೆಯಲ್ಲಿ ಪಾಲ್ಗೊಂಡ ಪವನ್ ಕಲ್ಯಾಣ್: ಡಿವೋರ್ಸ್ ಗಾಳಿಸುದ್ದಿಗೆ ತೆರೆ

ನಟ ಪವನ್​ ಕುಮಾರ್​ ಅವರು 3ನೇ ಪತ್ನಿಗೂ ಡಿವೋರ್ಸ್​ ಕೊಟ್ಟಿದ್ದಾರೆ ಎನ್ನುವ ಸುದ್ದಿಗೆ ಜನಸೇವಾ ಪಕ್ಷ ಫೋಟೋ ಶೇರ್​ ಮಾಡಿ ಸ್ಪಷ್ಟನೆ ನೀಡಿದೆ. 
 

A slap in the face to those asking for Pawan Kalyans divorce suc

ನಟನೆ ಜೊತೆಗೆ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯವಾಗಿಯೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸದ್ದು ಮಾಡುತ್ತಿರುವ ಸೂಪರ್​ಸ್ಟಾರ್​ ಎಂದರೆ ಕೋನಿಡೇಲಾ ಕಲ್ಯಾಣ್ ಬಾಬು ಅರ್ಥಾತ್​ 'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan). ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರೋ  ಪವನ್ ಕಲ್ಯಾಣ್​   ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ  ನಟ. ಇಷ್ಟೆಲ್ಲಾ ಫೇಮಸ್​  ಆಗಿದ್ರೂ ಮದುವೆಯ ವಿಷಯಕ್ಕೆ ಬಂದಾಗ ಮಾತ್ರ ಸದಾ ಟ್ರೋಲ್​ ಆಗುತ್ತಲೇ ಇರುತ್ತಾರೆ.  ಮದುವೆಯ ವಿಷಯದಲ್ಲಿ ಕಾಂಟ್ರವರ್ಸಿಯಲ್ಲಿಯೇ (Contraversy) ಇರೋ ಪವನ್​ ಕುಮಾರ್​ ಇದಾಗಲೇ ಎರಡು ಮಂದಿಗೆ ಡಿವೋರ್ಸ್​ ಕೊಟ್ಟಿದ್ದು, ಮೂರನೆಯ ಮದುವೆಯಾಗಿದ್ದಾರೆ. ಆದರೆ ಇದೀಗ ಮೂರನೆಯ ಪತ್ನಿಯೂ ಡಿವೋರ್ಸ್​ ಕೊಟ್ಟುಬಿಟ್ರಾ ಎಂದು ಸಕತ್​ ಗಾಳಿ ಸುದ್ದಿ ಓಡಾಡುತ್ತಿತ್ತು.  ಆದರೆ ಈಗ ಈ ಸುದ್ದಿಗೆ ತೆರೆ ಬಿದ್ದಿದೆ.

ಅಷ್ಟಕ್ಕೂ,  ಪವನ್ ಕಲ್ಯಾಣ್ ಅವರ ಮದುವೆಯ ವಿಷಯದ ಕುರಿತು ಹೇಳುವುದಾದರೆ ಇವರು, 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು.  2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು,  2008ರಲ್ಲಿ ರೇಣು ಎಂಬುವವರನ್ನು  ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು.  ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್​ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್​ ನೀಡಿದ ಬಳಿಕ ಪವನ್​ ಕಲ್ಯಾಣ್​ ಅವರು  ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು  ಮದುವೆಯಾಗಿದ್ದಾರೆ.  ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.

3ನೇ ಪತ್ನಿಯಿಂದಲೂ ದೂರವಾದ್ರಾ ಸೂಪರ್​ಸ್ಟಾರ್​ ಪವನ್​ ಕಲ್ಯಾಣ್​? ಏನಿದು ಚರ್ಚೆ?

ಆದರೆ ಇತ್ತೀಚೆಗೆ ದಂಪತಿ ಒಟ್ಟಿಗೆ ಕಾಣಿಸಿಕೊಳ್ಳದೇ ಇರುವುದು ವಿಚ್ಛೇದನ ರೂಮರ್ಸ್​ಗೆ ಕಾರಣವಾಗಿತ್ತು.  ಪವನ್​ ಕಲ್ಯಾಣ್​ ಅವರು ಈಚೆಗೆ ಜನಸೇನಾನಿ ಯಾಗ ನಡೆಸಿದ್ದರು. ಈ  ಯಾಗದಲ್ಲಿ ಸಾಮಾನ್ಯವಾಗಿ ದಂಪತಿ  ಭಾಗವಹಿಸುತ್ತಾರೆ. ಆದರೆ ಇಲ್ಲಿಯೂ ಪವನ್​ ಒಂಟಿಯಾಗಿ ಕಾಣಿಸಿಕೊಂಡಿದ್ದರು.  ರಾಮ್‌ಚರಣ್- ಉಪಾಸನಾ ಮಗಳ ತೊಟ್ಟಿಲು ಶಾಸ್ತ್ರಕ್ಕೂ ಅನ್ನಾ (Anna Lezhnova) ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೊನೆಯ ಪಕ್ಷ ಸಾಮಾಜಿಕವಾಗಿಯಾದರೂ ಬೇರ್ಪಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ. ಪವನ್​ ಅವರ ಕುಟುಂಬದ  ಕಾರ್ಯಕ್ರಮಗಳಲ್ಲೂ ಅನ್ನಾ ಲೆಜಿನೇವಾ ಹಾಜರು ಆಗಿರಲಿಲ್ಲ. ಅಷ್ಟೇ ಅಲ್ಲದೇ, ಈಚೆಗೆ ನಡೆದ ವರುಣ್- ಲಾವಣ್ಯ ನಿಶ್ಚಿತಾರ್ಥಕ್ಕೂ ಪವನ್ ಒಬ್ಬರೇ  ಬಂದಿದ್ದರು. ಇದರಿಂದ ಇಬ್ಬರ ನಡುವೆ ಏನೋ ಸರಿಯಿಲ್ಲ ಎನ್ನುವ ಗುಸುಗುಸು ಚರ್ಚೆ ಟಾಲಿವುಡ್​ನಲ್ಲಿ ಶುರುವಾಗಿತ್ತು. 

ಈ ಚರ್ಚೆ ದೊಡ್ಡ ರೂಪ ಪಡೆಯುತ್ತಲೇ ಜನಸೇವಾ ಪಕ್ಷವು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಫೋಟೋ ಒಂದನ್ನು ಶೇರ್​ ಮಾಡಿದ್ದು, ಜನರ ಬಾಯಿ ಮುಚ್ಚಿಸಿದೆ. ಅದರಲ್ಲಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಅವರನ್ನು ಕಾಣಬಹುದು. ಈ ಫೋಟೋಗೆ ಶೀರ್ಷಿಕೆ ನೀಡಿರುವ ಪಕ್ಷವು, 'ಜನಸೇನಾ ಪಕ್ಷದ ಅಧ್ಯಕ್ಷರಾದ ಶ್ರೀ ಪವನ್ ಕಲ್ಯಾಣ್ ಮತ್ತು ಶ್ರೀಮತಿ ಅನಾ ಕೊನಿಡೇಲ ಅವರು ವರಾಹಿ ವಿಜಯ ಯಾತ್ರೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಡೆದ ಪೂಜಾದಿಗಳಲ್ಲಿ ಭಾಗವಹಿಸಿದರು. ಶ್ರೀ ಪವನ್ ಕಲ್ಯಾಣ್ ಮತ್ತು ಶ್ರೀಮತಿ ಅನಾ ಕೊನಿಡೆಲಾ ಅವರು ಈ ದತ್ತಿ ಕರ್ತವ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಾರಾಹಿ ವಿಜಯ ಯಾತ್ರೆಯ ಮುಂದಿನ ಹಂತ ಆರಂಭವಾಗಲಿದೆ. ಇದಕ್ಕಾಗಿ ಸಿದ್ಧತಾ ಸಭೆಗಳಲ್ಲಿ ಭಾಗವಹಿಸಲು ಶ್ರೀ ಪವನ್ ಕಲ್ಯಾಣ್ ಅವರು ಶೀಘ್ರದಲ್ಲೇ ಮಂಗಳಗಿರಿ ತಲುಪಲಿದ್ದಾರೆ' ಎಂದು ಹೇಳಿದೆ. ಇದರಿಂದ ಸುಳ್ಳು ಸುದ್ದಿ ಹರಡುತ್ತಿರುವವರ ಬಾಯಿಯನ್ನು ಪಕ್ಷ ಮುಚ್ಚಿಸಿದೆ. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

 

Latest Videos
Follow Us:
Download App:
  • android
  • ios