3ನೇ ಪತ್ನಿಗೂ ಪವನ್ ಕಲ್ಯಾಣ್ ವಿಚ್ಚೇದನ: ಈ ಗಾಳಿ ಸುದ್ದಿ ಹಬ್ಬುತ್ತಿರುವುದ್ಯಾಕೆ?

ಇಬ್ಬರಿಗೆ ಡಿವೋರ್ಸ್​ ಕೊಟ್ಟು ಮೂರನೆಯ ಮದ್ವೆಯಾಗಿದ್ದ ನಟ, ರಾಜಕಾರಣಿ ಪವನ್​ ಕಲ್ಯಾಣ್​, ಈಗ ಅವರಿಂದಲೂ ದೂರವಾದ್ರಾ? ಏನಿದು ಚರ್ಚೆ?
 

Pawan Kalyan and his third wife Anna Lezhnova separated suc

ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ ಕೋನಿಡೇಲಾ ಕಲ್ಯಾಣ್ ಬಾಬು ಅರ್ಥಾತ್​ 'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan) ಯಾರಿಗೆ ತಾನೇ ಗೊತ್ತಿಲ್ಲ? ನಟನೆ ಜೊತೆಗೆ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯವಾಗಿಯೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ.

ಇಂಥ ಪವನ್ ಕಲ್ಯಾಣ್​, ತಮ್ಮ ಮದುವೆಯ ಕುರಿತು ಸದಾ  ಕಾಂಟ್ರವರ್ಸಿಯಲ್ಲಿಯೇ (Contraversy) ಇದ್ದಾರೆ.  ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು.  2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು,  2008ರಲ್ಲಿ ರೇಣು ಎಂಬುವವರನ್ನು  ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು.  ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್​ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್​ ನೀಡಿದ ಬಳಿಕ ಪವನ್​ ಕಲ್ಯಾಣ್​ ಅವರು  ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು  ಮದುವೆಯಾಗಿದ್ದಾರೆ.  ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

ಇನ್ನು ಮೂರು ಮೂರು ಮದುವೆಯಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿರುವ ಪವನ್​ ಅವರು ಅದರ ಬಗ್ಗೆ ಅಸಮಾಧಾನ ಹೊರಹಾಕಿ, ತಾವ್ಯಾಕೆ ಇಷ್ಟು ಮದುವೆಯಾಗಿರುವುದು ಎಂಬುದನ್ನು ತಿಳಿಸಿದ್ದಾರೆ. ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದಿದ್ದಾರೆ. ನಾನು  ಮದುವೆಯನ್ನೇ ಆಗಬಾರದು ಎಂದುಕೊಂಡವ, ಒಂಟಿತನ ಇಷ್ಟವಾಗಿತ್ತು.  ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ  ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ (Marriage)ಅಂತ್ಯ ಹಾಡಿದೆ. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ,  ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ (Political) ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಮತ್ತಷ್ಟು ಕುತೂಹಲ ಎನ್ನುವ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಪವನ್​ ಸ್ಟಾರ್​ ಅವರ ಮೂರನೆಯ ಮದ್ವೆಗೂ ಬ್ರೇಕ್​ ಬಿತ್ತಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪವನ್​ ಅವರು ಮೂರನೆಯ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ಡಿವೋರ್ಸ್​ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.  ರಷ್ಯಾ ಪೌರತ್ವ ಹೊಂದಿರುವ ಅನ್ನಾ ಲೆಜ್ನೆವಾ (Anna Lezhnova) ಹೈದರಾಬಾದ್‌ಗೆ ಶಿಫ್ಟ್ ಆಗಿದ್ದಾರೆ.  ಆದರೆ ಇತ್ತೀಚೆಗೆ ಪವನ್- ಅನ್ನಾ  ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಪವನ್​ ಅವರ ಕುಟುಂಬದ  ಕಾರ್ಯಕ್ರಮಗಳಲ್ಲೂ ಅವರು ಹಾಜರು ಆಗುತ್ತಿಲ್ಲ. ಅಷ್ಟೇ ಅಲ್ಲದೇ, ಈಚೆಗೆ ನಡೆದ ವರುಣ್- ಲಾವಣ್ಯ ನಿಶ್ಚಿತಾರ್ಥಕ್ಕೂ ಪವನ್ ಒಬ್ಬರೇ  ಬಂದಿದ್ದರು. ಇದರಿಂದ ಇಬ್ಬರ ನಡುವೆ ಏನೋ ಸರಿಯಿಲ್ಲ ಎನ್ನುವ ಗುಸುಗುಸು ಚರ್ಚೆ ಟಾಲಿವುಡ್​ನಲ್ಲಿ ಶುರುವಾಗಿದೆ. 

Pawan Kalyan: ಪವನ್​ ಕಲ್ಯಾಣ್​ ನಕ್ಸಲ್​ ಆಗ್ತಾನಂತ ಭಯವಿತ್ತು ಎಂದ ಅಣ್ಣ ಚಿರಂಜೀವಿ!

ಇದಕ್ಕಿಂತ ಮಿಗಿಲಾಗಿ ಪವನ್​ ಅವರು  ಜನಸೇನಾನಿ ಯಾಗ ನಡೆಸಿದ್ದರು. ಈ  ಯಾಗದಲ್ಲಿ ಸಾಮಾನ್ಯವಾಗಿ ದಂಪತಿ  ಭಾಗವಹಿಸುತ್ತಾರೆ. ಆದರೆ ಇಲ್ಲಿಯೂ ಪವನ್​ ಒಂಟಿಯಾಗಿ ಕಾಣಿಸಿಕೊಂಡಿದ್ದರು.  ರಾಮ್‌ಚರಣ್- ಉಪಾಸನಾ ಮಗಳ ತೊಟ್ಟಿಲು ಶಾಸ್ತ್ರಕ್ಕೂ ಅನ್ನಾ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೊನೆಯ ಪಕ್ಷ ಸಾಮಾಜಿಕವಾಗಿಯಾದರೂ ಬೇರ್ಪಟ್ಟಿದ್ದಾರೆ ಎನ್ನುವ ಚರ್ಚೆ   ಶುರುವಾಗಿದೆ. ಅಂದಹಾಗೆ ಕೆಲ ತಿಂಗಳ ಹಿಂದೆಯೂ ಇಂಥದ್ದೇ ಸುದ್ದಿ ಹರಡಿತ್ತು. ಈಗ ಮತ್ತೊಮ್ಮೆ ಇದರ ಚರ್ಚೆ ಶುರುವಾಗಿದೆ. ಅನ್ನಾ ಲೆಜ್ನೆವಾ ಮಕ್ಕಳನ್ನು ಕರೆದುಕೊಂಡು  ರಷ್ಯಾಗೆ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದೆ.  
 

Latest Videos
Follow Us:
Download App:
  • android
  • ios