ಚಿಕ್ಕವಳಿದ್ದಾಗ ತಂದೆಯ ಆರ್ಮಿ ಡ್ರೆಸ್‌ನಲ್ಲಿ ತೆಗೆದ ಫೋಟೋ ಶೇರ್ ಮಾಡಿದ್ದಾರೆ ಬಾಲಿವುಡ್ ನಟಿ. ಮಾಜಿ ವಿಶ್ವಸುಂದರಿಯೂ ಆಗಿರೋ ಈಕೆ ಯಾರೆಂದು ಗೊತ್ತಾಯ್ತಾ..? ಇಲ್ಲಿ ನೋಡಿ

ನಟಿ ಪ್ರಿಯಾಂಕ ಚೋಪ್ರಾ ಈ ಫೋಟೋದಲ್ಲಿರೋ ವ್ಯಕ್ತಿ. ತನ್ನ ಬಾಲ್ಯದ ಫೋಟೋ ಶೇರ್ ಮಾಡಿದ್ದಾರೆ ಪಿಗ್ಗಿ. ಪೆಂಗ್ವಿನ್ ರಾಂಡಂ ಹೌಸ್ ಪಬ್ಲಿಷ್ ಮಾಡಲಿರುವ ನಟಿಯ ಮೆಮೊಯಿರ್ ಅನ್‌ಫಿನಿಷ್ಡ್‌ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ಪತಿ ನಿಕ್ ಪಕ್ಕದಲ್ಲಿದ್ರೂ ಈ ವ್ಯಕ್ತಿಯನ್ನ ನೆನಸಿ ಪದೇ ಪದೇ ಕಣ್ಣೀರಿಡ್ತಾರೆ ನಟಿ ಪ್ರಿಯಾಂಕ

ಈ ಪುಸ್ತಕದ ಒಂದು ಫೋಟೋ ನಟಿ ಶೇರ್ ಮಾಡಿದ್ದಾರೆ. ಅದರಲ್ಲಿ ತನ್ನ ತಂದೆಯನ್ನು ಫಾಲೋ ಮಾಡ್ತಿದ್ದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಂದೆಯ ಆರ್ಮಿ ಡ್ರೆಸ್ ಧರಿಸಿ ಮನೆ ಸುತ್ತಾ ಓಡಾಡ್ತಿದ್ದರಂತೆ ಪ್ರಿಯಾಂಕ. ಪ್ರಿಯಾಂಕ ಅವರ ತಂದೆ ಡಾ. ಅಶೋಕ್ ಚೋಪ್ರಾ ತಾಯಿ ಮಧು ಚೋಪ್ರಾ ಇಬ್ಬರೂ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಚಿಕ್ಕವಳಿದ್ದಾಗ ಅಡ್ವೆಂಚರ್ ಮಾಡ್ತಿದ್ರಂತೆ ಪ್ರಿಯಾಂಕ. ಇದು ಅವರ ತಂದೆಗೆ ಇಷ್ಟವಾಗುತ್ತಿದ್ದ ವಿಷಯ. ಇಲ್ಲಿ ತನಕ ಯಾರೂ ಮಾಡಿರದ್ದನ್ನು ನಾನು ಮಾಡಬೇಕು ಎಂಬುದಾಗಿತ್ತು ಆಕೆಯ ಬಾಲ್ಯದ ಕನಸು.

ಪ್ರಿಯಾಂಕಾ ಮದುವೆಯ ಬಗ್ಗೆ ಅಜ್ಜಿಗಿತ್ತು ಡೌಟ್, ನಟಿ ತಂದೆ ರಿಯಾಕ್ಷನ್‌ ಹೀಗಿತ್ತು!

ನಟಿ ಆಗಾಗ ತಮ್ಮ ಪೋಸ್ಟ್‌ಗಳ ಮೂಲಕ ತಂದೆಯನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ. ಪ್ರೀತಿಯ ಪತಿ ನಿಕ್ ಜೊತೆಗಿದ್ದರೂ, ತಂದೆಯನ್ನು ತುಂಬಾ ಮಿಸ್ ಮಾಡ್ಕೊಳ್ತಾರಂತೆ ನಟಿ