ಬಾಲಿವುಡ್​ ಸೃಷ್ಟಿಸಲಿದೆ ಹೊಸ ದಾಖಲೆ: 85 ಸಾವಿರ ಮಂದಿಗಾಗಿ 'ಜವಾನ್​ ಫ್ಯಾನ್​ ಷೋ'!

ಬಾಲಿವುಡ್​   ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಜವಾನ್​ ಚಿತ್ರಕ್ಕಾಗಿ  85 ಸಾವಿರ ಮಂದಿಗಾಗಿ 'ಜವಾನ್​ ಫ್ಯಾನ್​ ಷೋ' ಆಯೋಜನೆ ಮಾಡಲಾಗುತ್ತಿದೆ. ಇನ್ನೂ ಕೆಲವು ಕುತೂಹಲದ ಮಾಹಿತಿಗಳು ಇವೆ.

85 thousand Shah Rukh Khan fans come together to celebrate the film suc

ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್ ಜವಾನ್ (Jawan) ಚಿತ್ರದ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ದುಬೈನ ಬುರ್ಜ್ ಖಲೀಫಾದಲ್ಲಿ   ಜವಾನ್ ಚಿತ್ರದ ಗ್ರ್ಯಾಂಡ್ ಟ್ರೈಲರ್ ಬಿಡುಗಡೆ ಸಮಾರಂಭ ನಡೆದು ಒಂದು ದಾಖಲೆಯಾಗಿತ್ತು. ಇದೇ ಮೊದಲ ಬಾರಿಗೆ ಮುಂಬೈನ ಐತಿಹಾಸಿಕ ಚಿತ್ರಮಂದಿರವಾದ ಗೈಟಿ ಗ್ಯಾಲಕ್ಸಿಯಲ್ಲಿ ಜವಾನ್ ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ. ಹಿಂದಿ ಚಿತ್ರರಂಗದಲ್ಲಿ ಇದು ದಾಖಲೆಯಾಗಲಿದ್ದು, ಶಾರುಖ್ ಖಾನ್ ಅಭಿಮಾನಿಗಳು ಥಿಯೇಟರ್ ಬಳಿ ಟೌಟ್‌ಗಳನ್ನು ನಿಲ್ಲಿಸಲಿದ್ದಾರೆ. ಸಿನಿಮಾ ಬಿಡುಗಡೆ ವೇಳೆ ಡೋಲು ಬಾರಿಸಿ ಹಬ್ಬ ಆಚರಿಸಲಿದ್ದಾರೆ. 

ಜವಾನ್​ ಬಿಡುಗಡೆಗೆ ಸಂಬಂಧಿಸಿದಂತೆ ಇನ್ನೊಂದು ಕುತೂಹಲದ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ,  ಜವಾನ್ ಚಿತ್ರದ ಬಿಡುಗಡೆಯನ್ನು ಆಚರಿಸಲು 85 ಸಾವಿರ ಮಂದಿ  ಶಾರುಖ್ ಖಾನ್ ಅಭಿಮಾನಿಗಳು ಒಟ್ಟಿಗೆ ಸೇರುತ್ತಿದ್ದು, ಶಾರುಖ್​ ಫ್ಯಾನ್​ ಷೋ ನಡೆಸಲಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ಅವರ ಫ್ಯಾನ್ ಕ್ಲಬ್ ಆಗಿರುವ, ಎಸ್‌ಆರ್‌ಕೆ ಯೂನಿವರ್ಸ್ ಈ ಆಕ್ಷನ್ ಎಂಟರ್‌ಟೈನರ್‌ಗಾಗಿ ಭಾರತದ 300 ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಿರುವುದಾಗಿ ಪಿಂಕ್​ವಿಲ್ಲಾ ವರದಿ ಮಾಡಿದೆ. ಈ ಮೂಲಕ  ಹಿಂದಿ ಚಲನಚಿತ್ರರಂಗದಲ್ಲಿ ಹೊಸ ದಾಖಲೆಯಾಗಲಿದೆ ಎನ್ನಲಾಗಿದೆ.

ಜರ್ಮನಿಯಲ್ಲಿ ಶಾರುಖ್ ಖಾನ್​ ದಾಖಲೆ​; ಇತಿಹಾಸ ಸೃಷ್ಟಿಸಲಿದೆ ಜವಾನ್!

ಇದರ ಬಗ್ಗೆ ಮಾಹಿತಿ ನೀಡಿರುವ  ಎಸ್‌ಆರ್‌ಕೆ ಯೂನಿವರ್ಸ್‌ನ ಸಹ ಸಂಸ್ಥಾಪಕರಾದ ಯಶ್ ಪರ್ಯಾನಿ (Yash Paryani) ಅವರು,  300 ಕ್ಕೂ ಹೆಚ್ಚು ನಗರಗಳಲ್ಲಿ ಜವಾನ್‌ನ ಹಲವು ಪ್ರದರ್ಶನಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದರಲ್ಲಿ  85 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದಿದ್ದಾರೆ. ಈ ಹಿಂದೆ ಕೂಡ ಪಠಾಣ್​ ಚಿತ್ರಕ್ಕೂ ಇದೇ ರೀತಿ ಮಾಡಲಾಗಿತ್ತು.  ಪಠಾಣ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ 200 ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಲಾಗಿತ್ತು. ಈ ವೇಳೆ 50 ಸಾವಿರ  ಅಭಿಮಾನಿಗಳು ಭಾಗವಹಿಸಿದ್ದರು. ಆದರೆ ಈ ಬಾರಿ ಇತಿಹಾಸ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದರ ಹೊರತಾಗಿಯೂ  ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಫ್ಯಾನ್ ಷೋ ಆಯೋಜಿಸಲು ಚಿಂತನೆ ನಡೆದಿದೆ.  60 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ನಡೆಯಲಿವೆ ಎನ್ನಲಾಗಿದೆ.  ಮುಂಗಡ ಬುಕಿಂಗ್‌ನಲ್ಲಿಯೂ  ಕೆಲವು ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ.   

ಇದಾಗಲೇ ಒಂದು ದಾಖಲೆ ಜವಾನ್​ ಹೆಸರಿನಲ್ಲಿ ಇದೆ. ಅದೇನೆಂದರೆ ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿ ದೈತ್ಯಾಕಾರದ ಶಾಶ್ವತ IMAX ಪರದೆಯ ಮೇಲೆ ಜವಾನ್ ಅನ್ನು ತೋರಿಸಲಾಗುವುದು. ಈ ಪರದೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದು 125 ಅಡಿ ಅಗಲ ಮತ್ತು 72 ಅಡಿ ಎತ್ತರವಿದೆ. ಇದು ಸಾಮಾನ್ಯ ಪರದೆಗಿಂತ ದೊಡ್ಡದಾಗಿದೆ! ಇದುವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟು ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಂಡಿಲ್ಲ.  'ಟ್ರಂಪಲಾಸ್ಟ್' ಎಂದು ಕರೆಯಲ್ಪಡುವ ಈ ಅತಿದೊಡ್ಡ ಶಾಶ್ವತ ಸಿನೆಮಾ ಪರದೆಯನ್ನು ಡಿಸೆಂಬರ್ 6, 2022 ರಂದು ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿ ಸ್ಥಾಪಿಸಲಾಯಿತು ಮತ್ತು ಅತಿದೊಡ್ಡ IMAX ಪರದೆಯ ಎಲ್ಲಾ ದಾಖಲೆಗಳನ್ನು ಮುರಿಯಿತು. ಇದರ ನಿರ್ಮಾಣವು 2020ರಲ್ಲಿ ಪ್ರಾರಂಭವಾಗಿ ಡಿಸೆಂಬರ್​ಗೆ ಮುಗಿದಿದೆ.  ಪರದೆಯು  ಗಿನ್ನೆಸ್ ವಿಶ್ವ ದಾಖಲೆ ಪುಟವನ್ನೂ ಸೇರಿದೆ. 814.8 ಚದರ ಮೀಟರ್ ವಿಸ್ತೀರ್ಣದೊಂದಿಗೆ ಅತಿದೊಡ್ಡ ಶಾಶ್ವತ ಸಿನೆಮಾ ಹಾಲ್ ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ.  ಪರದೆಯು ಬೋಯಿಂಗ್ 737 ಏರ್‌ಲೈನರ್‌ಗಿಂತ ಅಗಲವಾಗಿದೆ ಮತ್ತು ಹೈಟೆಕ್ ಲೇಸರ್ ತಂತ್ರಜ್ಞಾನ ಹೊಂದಿದೆ.  ಪೂರ್ಣ ಎಚ್‌ಡಿಯಿಂದ ವೀಕ್ಷಿಸಲು ವಿಶೇಷ ಸಾಫ್ಟ್‌ವೇರ್ ಅಳವಡಿಸಲಾಗಿದೆ.

JAWAN: ಶಾರುಖ್‌ ಶರ್ಟ್‌ ಬೆಲೆ ಒಂದು ಲಕ್ಷ! ಅತಿ ಹೆಚ್ಚು ಬಜೆಟ್‌ನ ಈ ಚಿತ್ರಕ್ಕೆ ಇಷ್ಟೊಂದು ಖರ್ಚಾ?
 

Latest Videos
Follow Us:
Download App:
  • android
  • ios