11 ಫೀಟ್ ಹೆಬ್ಬಾವಿನ ಜೊತೆ ನೀರಾಟ | 8 ವರ್ಷದ ಹುಡುಗಿಯ ಸ್ವಿಮ್ಮಿಂಗ್ ಸ್ಟೈಲ್
11 ಫೀಟ್‌ನ ಹಳದಿ ಹೆಬ್ಬಾವಿನ ಜೊತೆ ಆಡ್ತಾಳೆ, ಸ್ವಿಮ್ ಮಾಡ್ತಾಳೆ ಈ ಹುಡುಗಿ. ಒಂಚೂರು ಭಯವಿಲ್ಲದೆ ಹಾವಿನ ಜೊತೆಗಿನ ಹುಡುಗಿಯ ಒಡನಾಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಸ್ರೇಲ್‌ನ 8 ವರ್ಷದ ಹುಡುಗಿಯ ಸ್ವಮ್ಮಿಂಗ್ ಜೊತೆಗಾರ ಯಾರು ಗೊತ್ತಾ..? 11 ಫೀಟ್ ಉದ್ದದ ಹಳದಿ ಹೆಬ್ಬಾವು. ನಂಬೋಕೆ ಕಷ್ಟ ಆಗ್ತಿದೆ ಅಲ್ವಾ..? ಆದ್ರೂ ಇದು ನಿಜ
ಈ ಹುಡುಗಿಗೆ ಹೆಬ್ಬಾವಿನ ಜೊತೆ ನೀರಲ್ಲಿ ಈಜೋದಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ಹಾವಿನ ಹೆಸರು ಬೆಲ್ಲೆ. ಈ ಹಸರನ್ನು ಕೊಡೋಕೆ ಕಾರಣ ವಾಲ್ಟ್ ಡಿಸ್ನಿಯ ಫೇಮಸ್ ಸಿರೀಸ್ ಬ್ಯೂಟಿ & ಬೀಸ್ಟ್ ಅಂತೆ. ಇದರಲ್ಲಿ ಬೆಲ್ಲೆ ಪಾತ್ರ ಚಂದದ ಹಳದಿ ಗೌನ್ ಹಾಕಿರುತ್ತಾಳೆ. ಹಾವು ಕೂಡಾ ಹಳದಿ ಬಣ್ಣದ್ದಾಗಿರುವುದರಿಂದ ಈ ಹೆಸರು ಇಡಲಾಗಿದೆಯಂತೆ.
ನಿಮ್ಮ ಮನೆ ಮಂಚದ ಕೆಳಗೆ 8 ಅಡಿ ಕಾಳಿಂಗ ಬಚ್ಚಿಟ್ಟುಕೊಂಡರೆ! ವಿಡಿಯೋ
ದಕ್ಷಿಣ ಇಸ್ರೇಲ್‌ನ ಕೃಷಿಕ ಸಮುದಾಯದಲ್ಲಿ ಪೋಷಕರೊಂದಿಗೆ ಬದುಕುತ್ತಿರುವ ಈಕೆ ಹುಟ್ಟಿದಾಗಿನಿಂದಲೂ ಸುತ್ತಲೂ ಪಕ್ಷಿ ಪ್ರಾಣಿಗಳು ಜೊತೆಗೇ ಇವೆ. ಈ ಹಳದಿ ಹಬ್ಬಾವು ಆಕೆಯ ಸುತ್ತಲಿರುವ ಪ್ರಾಣಿ ಪಕ್ಷಿಗಳಲ್ಲಿ ಒಂದು ಅಷ್ಟೇ.
ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು: 7 ಗಂಟೆ ಕಂಬ ಹಿಡಿದು ನಿಂತು ಪ್ರಾಣ ಉಳಿಯಿತು!
ಮಗಳು ಮತ್ತು ಹಾವು ಒಟ್ಟಿಗೇ ಬೆಳೆದರು. ಅವರಿಬ್ಬರು ತುಂಬಾ ಚಿಕ್ಕದಿರುವಾಗಲೇ ಒಟ್ಟಿಗೇ ಈಜುತ್ತಿದ್ದಾರೆ ಎನ್ನುತ್ತಾರೆ ಇಂಬಾರ್‌ನ ತಾಯಿ ಸರಿತ್ ರೆಗೆವ್. ಕೊರೋನಾ ವೈರಸ್‌ನಿಂದಾ ಶಾಲೆಗಳು ಮುಚ್ಚಿದ್ದು ಇಬ್ಬರೂ ಜೊತೆಯಾಗಿ ಬಹಳಷ್ಟು ಸಮಯ ಒಟ್ಟಿಗೇ ಕಳೆಯುತ್ತಿದ್ದಾರಂತೆ.
