Asianet Suvarna News Asianet Suvarna News

ಜನವರಿಗೂ, ಬಾಲಿವುಡ್​ ಬಾಕ್ಸ್​ ಆಫೀಸ್​ಗೂ ಇದೆಯಂತೆ ನಂಟು: ಅದೇನು?

ಪಠಾಣ್​ ಚಿತ್ರ ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದ ಬೆನ್ನಲ್ಲೇ ಜನವರಿಗೂ ಬಾಲಿವುಡ್​ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವುದಕ್ಕೂ ನಂಟು ಇದೆ ಎನ್ನುತ್ತಿದ್ದಾರೆ ವಿಮರ್ಶಕರು. ಹಾಗಿದ್ದರೆ ಅದೇನು?
 

7 Bollywood films that broke the January Jinx at the box office
Author
First Published Jan 27, 2023, 6:23 PM IST

ಬೈಕಾಟ್​ ಬಿಸಿಯ ನಡುವೆಯೂ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ (Pathaan) ಚಿತ್ರ  ಬಾಕ್ಸ್​ಆಫೀಸ್​ನಲ್ಲಿ ಚಿಂದಿ ಉಡಾಯಿಸಿದೆ. ಇದೇ ಜನವರಿ 25ರಂದು ಬಿಡುಗಡೆಯಾದ ಪಠಾಣ್​ ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದೆ.  ನಾಲ್ಕು ವರ್ಷಗಳ ಬಳಿಕ ಕಮ್​ಬ್ಯಾಕ್​  ಮಾಡಿದ ಶಾರುಖ್​ ಖಾನ್​   ಈಗ 100 ಕೋಟಿ ಕ್ಲಬ್ ಸೇರಿರೋ ಬಾಲಿವುಡ್ ಸೂಪರ್ ಸ್ಟಾರ್ (Super star) ಆಗಿ ಮಿಂಚಿದ್ದಾರೆ.  ನಾಲ್ಕು ವರ್ಷಗಳ ಹಿಂದೆ ಝೀರೋ ಸಿನಿಮಾ ಮಾಡಿ ಫ್ಲಾಪ್ ಶೋ ಪ್ರದರ್ಶನ ಮಾಡಿದ್ದ ಶಾರುಖ್ (Shah Rukh Khna) ಮತ್ತೆ ಬಾಕ್ಸ್​ ಆಫೀಸ್​ನಲ್ಲಿ ಎದ್ದು ಬಂದಿದ್ದಾರೆ.  ಪಠಾಣ್ ಸಿನಿಮಾದಿಂದ ಗಲ್ಲಾಪೆಟ್ಟಿಗೆಯಲ್ಲಿ ಮತ್ತೆ ಕಮಾಲ್ ಮಾಡಿದ್ದಾರೆ. ಶಾರುಖ್ ಖಾನ್ ಪಠಾಣ್ ಸಿನಿಮಾ ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದೆ. 

ಈ ಭಾರಿ ಯಶಸ್ಸಿನ ಬಳಿಕ ಈಗ ಜನವರಿ ತಿಂಗಳು ಸದ್ದು ಮಾಡುತ್ತಿದೆ. ಬಾಲಿವುಡ್​ನ ಹಿಂದಿನ ಕೆಲವು ಜನವರಿ ಬಿಡುಗಡೆ ಚಿತ್ರಗಳತ್ತ ಅವಲೋಕಿಸಿರುವ ಸಿನಿ ಕ್ಷೇತ್ರದ ದಿಗ್ಗಜರು, ಬಾಲಿವುಡ್​ಗೂ ಜನವರಿಗೂ ನಂಟಿದೆಯೇ ಎಂದು ವಿಶ್ಲೇಷಿಸುತ್ತಿದ್ದಾರೆ. ಜನವರಿಯಲ್ಲಿ ಬಿಡುಗಡೆಯಾಗಿರುವ ಹಿಂದಿನ ಕೆಲವು ಚಿತ್ರಗಳು ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿರುವುದೇ ಇದಕ್ಕೆ ಕಾರಣ. ಇದರ ಅರ್ಥ ಹಿಂದೆ ಕೂಡ ಜನವರಿಯಲ್ಲಿ ತೆರೆ ಕಂಡಿದ್ದ ಕೆಲವು ಚಿತ್ರಗಳು ಸೂಪರ್​ ಹಿಟ್​ ಆಗಿದ್ದವು ಎಂದು ಹೇಳುತ್ತಿದ್ದಾರೆ ದಿಗ್ಗಜರು. ಹಾಗಿದ್ದರೆ ಆ ಕೆಲವು ಚಿತ್ರಗಳತ್ತ ಒಂದು ನೋಟ ಇಲ್ಲಿದೆ:

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಮತ್ತು ಪದ್ಮಾವತ್​: (Uri- The surgical Strike, Padmavath): ವಿಕ್ಕಿ ಕೌಶಲ್ ಅಭಿನಯದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ 2019ರ ಜನವರಿ 11 ರಂದು ಬಿಡುಗಡೆಯಾಯಿತು. ಚಿತ್ರವು ಭಾರಿ ಯಶಸ್ಸನ್ನು ಪಡೆಯಿತು ಮತ್ತು ಇದು ಬಾಕ್ಸ್ ಆಫೀಸ್​ ಅನ್ನು ಕೊಳ್ಳೆ ಹೊಡೆದು  3650 ಕೋಟಿ ರೂಪಾಯಿಗಳನ್ನು ದಾಟಿತು. ಇನ್ನು, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಸಂಜಯ್ ಲೀಲಾ ಬನ್ಸಾಲಿಯವರ  ಪದ್ಮಾವತ್ 2018ರ ಜನವರಿ 25ರಂದು ಬಿಡುಗಡೆಯಾಗಿತ್ತು. ಇದು ಕೂಡ ಭರ್ಜರಿ ಯಶಸ್ಸನ್ನು ಕಂಡಿತು. ವರದಿಯ ಪ್ರಕಾರ, ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಅದು ಜನವರಿಯಲ್ಲಿ ಬಿಡುಗಡೆಯಾಗಿತ್ತು.

ರಯೀಸ್ ಮತ್ತು ಕಾಬಿಲ್ (Rayees, Kabil): 2017ರ ಜನವರಿ 25ರಂದು ಬಿಡುಗಡೆಯಾದ ಚಿತ್ರ ರಯೀಸ್​. ಇದು ಕೂಡ ಶಾರುಖ್ ಖಾನ್ ಅವರ ಅಭಿನಯದ ಚಿತ್ರ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು ಮತ್ತು 300 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವರದಿಯಾಗಿದೆ. ಇದೇ ದಿನ ಬಿಡುಗಡೆಯಾದ ಮತ್ತೊಂದು ಚಿತ್ರ ಕಾಬಿಲ್​. ಒಂದೇ ದಿನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಭಿನಯದ ಕಾಬಿಲ್ ಶಾರುಖ್ ಖಾನ್ ರಯೀಸ್ ಜೊತೆ ಘರ್ಷಣೆಗೆ ಒಳಗಾಯಿತು. ಆದರೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಿತು. ಇದರ ಬಾಕ್ಸ್ ಆಫೀಸ್ ಕಲೆಕ್ಷನ್ 200 ಕೋಟಿ ಕ್ಲಬ್ ದಾಟಿದೆ ಎಂದು ವರದಿಯಾಗಿದೆ.

Shraddha Arya: 35 ವರ್ಷಗಳಲ್ಲಿ 10 ಮದ್ವೆಯಾದೆ: ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಟಿ!

ಏರ್​ಲಿಫ್ಟ್​ ಮತ್ತು ಅಗ್ನಿಪಥ್ (Airlift, Agnipath): ಅಕ್ಷಯ್ ಕುಮಾರ್ ಅವರ ಏರ್‌ಲಿಫ್ಟ್ ಜನವರಿ 22, 2016 ರಂದು ಬಿಡುಗಡೆಯಾಯಿತು. ಚಿತ್ರವು ಉತ್ತಮ ಯಶಸ್ಸನ್ನು ಕಂಡಿತು. ಚಿತ್ರವು 231 ಕೋಟಿ ರೂಪಾಯಿಗಳನ್ನು ಗಳಿಸಿದ ಕಾರಣ ವಿಮರ್ಶಾತ್ಮಕವಾಗಿ ಮಾತ್ರವಲ್ಲದೆ ವಾಣಿಜ್ಯಿಕ ಯಶಸ್ಸನ್ನೂ ಪಡೆಯಿತು. ಇನ್ನು ಹೃತಿಕ್ ರೋಷನ್, ಪ್ರಿಯಾಂಕಾ ಚೋಪ್ರಾ ಮತ್ತು ಸಂಜಯ್ ದತ್ ಅಭಿನಯದ ಅಗ್ನಿಪಥ್ 26 ಜನವರಿ 2012 ರಂದು ಬಿಡುಗಡೆಯಾಯಿತು. ಇದು ರಜೆ ದಿನದಂದು  ಬಿಡುಗಡೆಯಾದ ಕಾರಣ ಹೆಚ್ಚಿನ ಪ್ರಯೋಜನವನ್ನು ಪಡೆಯಿತು. ಇದು ಬಾಕ್ಸ್ ಆಫೀಸ್‌ನಲ್ಲಿ 192.6 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

Follow Us:
Download App:
  • android
  • ios