Asianet Suvarna News Asianet Suvarna News

Shraddha Arya: 35 ವರ್ಷಗಳಲ್ಲಿ 10 ಮದ್ವೆಯಾದೆ: ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಟಿ!

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರದ್ಧಾ ಆರ್ಯ ಮದುವೆ ಕುರಿತು ಶಾಕಿಂಗ್​ ಹೇಳಿಕೆ ನೀಡಿದ್ದಾರೆ, ಏನದು?
 

 Kundali Bhagyas actress Shraddha Arya gets marry 10 times in 35 years secret reveled
Author
First Published Jan 26, 2023, 4:51 PM IST

2011ರಲ್ಲಿ ಬಿಡುಗಡೆಯಾದ ಕನ್ನಡದ ಮದುವೆ ಮತ್ತು ಡಬಲ್ ಡೆಕ್ಕರ್ ಮನೆ ಸೇರಿದಂತೆ ಬಾಲಿವುಡ್​, ಕಾಲಿವುಡ್​, ಮಾಲಿವುಡ್​, ಟಾಲಿವುಡ್​ ಹಾಗೂ ಪಂಜಾಬಿ ಚಿತ್ರಗಳಲ್ಲಿ ನಟಿಸಿರುವ ಮುದ್ದುಮೊಗದ ಚೆಲುವೆ ಶ್ರದ್ಧಾ ಆರ್ಯ (Shraddha Arya). 35 ವರ್ಷದ ಈ ಚೆಲುವೆ ಟಿ.ವಿ.ಧಾರಾವಾಹಿಗಳಲ್ಲಿಯೂ (TV serials) ಸಕತ್​ ಫೇಮಸ್​.  ಶ್​... ಫಿರ್ ಕೋಯಿ ಹೈ, ಮೈ ಲಕ್ಷ್ಮಿ ತೇರೆ ಆಂಗನ್ ಕೀ, ತುಮ್ಹಾರಿ ಪಾಖಿ, ಡ್ರೀಮ್ ಗರ್ಲ್, ಮಜಾಕ್ ಮಜಾಕ್ ಮೆ, ಕಸಮ್ ತೇರೆ ಪ್ಯಾರ್ ಕೀ ಸ್ವಾತಿ ಬೋರಾ, ಕುಂಕುಮ್​  ಭಾಗ್ಯ, ನಚ್ ಬಲಿಯೆಯಲ್ಲಿ ಧಾರಾವಾಹಿಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ಶ್ರದ್ಧಾ ಸದ್ಯ ಕುಂಡಲಿ ಭಾಗ್ಯದಲ್ಲಿ (Kundali Bhagya) ಡಾ.ಪ್ರೀತಾ ಅರೋರಾ ಆಗಿ ನಟಿಸುತ್ತಿದ್ದಾರೆ. ಟಿವಿಎಸ್ ಸ್ಕೂಟಿ, ಪಿಯರ್ಸ್ ಮತ್ತು ಜಾನ್ಸಸ್ ನಂತಹ ಬ್ರಾಂಡ್‌ಗಳೊಂದಿಗೆ ಪ್ರಮುಖ ಜಾಹೀರಾತು ಪ್ರಚಾರದಲ್ಲಿ ಭಾಗವಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಈ ನಟಿ ಈಗ ನೀಡಿರುವ ಒಂದು ಹೇಳಿಕೆಯಿಂದ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದಾರೆ. ಇದು ನಿಜನಾ? ಖಂಡಿತಾ ಸಾಧ್ಯವಿಲ್ಲ, ಇದು ತಮಾಷೆ ಇರಬೇಕು ಎಂದೆಲ್ಲಾ ನೆಟ್ಟಿಗರು ಹೇಳುತ್ತಿದ್ದಾರೆ. ಅಷ್ಟಕ್ಕೂ ಅಂಥದ್ದೇನು ಶಾಕಿಂಗ್​ (Shocking) ಸುದ್ದಿ ನಟಿ ಶ್ರದ್ಧಾ ನೀಡಿದ್ದು ಎಂದರೆ, ಈಗ ನನಗೆ 35 ವರ್ಷ ವಯಸ್ಸು. ಈ 35 ವರ್ಷಗಳಲ್ಲಿ ನಾನು 10 ಬಾರಿ ಮದುವೆಯಾಗಿದ್ದೇನೆ ಎಂದಿದ್ದಾರೆ! ಈ ಹೇಳಿಕೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ವಧುವಿನ ಗೆಟಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಶ್ರದ್ಧಾ, ಫೋಟೋದಲ್ಲಿ ಮದುವೆಯ ವಿಧಿವಿಧಾನಗಳನ್ನು ಮಾಡುವುದನ್ನು ಕಾಣಬಹುದು.

Katrina Kaif: ಫ್ಯಾನ್ಸ್​ಗೆ ಗುಡ್​​ ನ್ಯೂಸ್​ ಕೊಟ್ಟ ಕತ್ರಿಕಾ ಕೈಫ್​: ಇನ್​ಸ್ಟಾದಲ್ಲಿ ಪೋಸ್ಟ್​

ಆದರೆ ನಿಜಾಂಶ ಏನೆಂದರೆ,  ಶ್ರದ್ಧಾ ಆರ್ಯ  ಅವರು 10 ಬಾರಿ ಮದುವೆಯಾಗಿದ್ದು ಧಾರಾವಾಹಿ (Serials) ಮತ್ತು ಚಲನಚಿತ್ರಗಳಲ್ಲಿ! ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್​ ನಾಗಲ್​ (Rahul Nagal) ಅವರನ್ನು 2021ರಲ್ಲಿ ಮದುವೆಯಾಗಿರುವ ಶ್ರದ್ಧಾ ತಮ್ಮ ಧಾರಾವಾಹಿಯ ಜೋಡಿಯ ಫೋಟೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರಷ್ಟೇ. 'ಕುಂಡಲಿ ಭಾಗ್ಯ' ಟಿವಿ ಸೀರಿಯಲ್​ನಲ್ಲಿರುವ ವಧುವಿನ ಪಾತ್ರದ ಫೋಟೋ ಹಾಕಿಕೊಂಡು ತಮಾಷೆ ಮಾಡಿದ್ದಾರೆ. ಇದು ತಮ್ಮ 10ನೇ ಮದುವೆ ಎಂದು ಹೇಳಿದ್ದಾರೆ. ಶ್ರದ್ಧಾ ಮದುವೆ ಮಂಟಪದ ಫೋಟೋಗಳನ್ನೂ ಶೇರ್​ ಮಾಡಿದ್ದಾರೆ. ಇದು ಕೂಡ ಅದೇ ಸೀರಿಯಲ್​ದು.  ಇದನ್ನು ಶೇರ್​ ಮಾಡಿಕೊಂಡಿರುವ ನಟಿ,  'ಇದೇ ಶೋನಲ್ಲಿ 10ನೇ ಮದುವೆಯಾಗಿದ್ದೇನೆ. ಯಾಕೆ, ಯಾವಾಗ, ಯಾರೊಂದಿಗೆ ಎಂಬ ಚಿಂತೆಯಿಲ್ಲದೆ ಮದುವೆಯಾಗುತ್ತಲೇ ಇದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತುಂಬಾ ಫನ್ನಿ ಮೂಡ್​ನಲ್ಲಿ (Funny mood)ಕಾಣಿಸಿಕೊಂಡಿದ್ದಾರೆ. ನಿಜಾಂಶ ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

ಅಂದಹಾಗೆ  ರಾಹುಲ್ ನಾಗಲ್ ಅವರನ್ನು ಮದುವೆಯಾಗುವ ಮುನ್ನ 2015ರಲ್ಲಿ ಅವರು ಎನ್ಆರ್​ಐ ಉದ್ಯಮಿ ಜಯಂತ್ ರಟ್ಟಿ ಅವರ ಜೊತೆ ಶ್ರದ್ಧಾ ಎಂಗೇಜ್​ಮೆಂಟ್​ ಆಗಿತ್ತು. ಆದರೆ ಮದುವೆಯಾದ ಮೇಲೆ ನಟನೆ ಬಿಡಬೇಕು ಎಂದು ಅವರು ಕಂಡೀಷನ್​ ಹಾಕಿದ್ದರಿಂದ ಶ್ರದ್ಧಾ ಮದುವೆ ಮುರಿದುಕೊಂಡಿದ್ದರು. ಈಗ  ನೌಕಾಪಡೆಯ ಅಧಿಕಾರಿಯಾಗಿರುವ (Navy Officer) ರಾಹುಲ್​ ನಾಗಲ್​ ಅವರನ್ನು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. 

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

 ಶ್ರದ್ಧಾ ಜನಿಸಿರುವುದು ನವದೆಹಲಿಯಲ್ಲಿ. ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2005ರಲ್ಲಿ  ಅವರು ನಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಅಲ್ಲಿಂದ ಇಲ್ಲಿಯವರೆಗೂ ಹಲವಾರು ಚಿತ್ರ, ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ (Advertisement) ತೊಡಗಿಸಿಕೊಂಡಿದ್ದಾರೆ. 2006ರಲ್ಲಿ ಕಲ್ವಾನಿನ್ ಕಾದಲಿ (ತಮಿಳು), 2007ರಲ್ಲಿ  ನಿಶಬ್ದ್  (ಹಿಂದಿ), ಗೊಡವ (ತೆಲುಗು), 2010ರಲ್ಲಿ ಪಾಠ್​ಶಾಲಾ (ಹಿಂದಿ), ಕೋತಿ ಮುಖ (ತೆಲುಗು), ರೋಮಿಯೋ (ತೆಲುಗು), ವಂದೇ ಮಾತರಂ (ತಮಿಳು ಮತ್ತು ಮಲಯಾಳಿ), 2011ರಲ್ಲಿ  ಡಬಲ್ ಡೆಕ್ಕರ್ (ಕನ್ನಡ), ಮದುವೆ ಮನೆ (ಕನ್ನಡ), 2018ರಲ್ಲಿ ಬಂಜಾರ (ಪಂಜಾಬಿ) ಚಿತ್ರದಲ್ಲಿ ನಟಿಸಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Shraddha Arya (@sarya12)

Follow Us:
Download App:
  • android
  • ios