Asianet Suvarna News Asianet Suvarna News

ಒಬ್ರು ಸೇಲಲ್ಲಿ ಬಟ್ಟೆ ಖರೀಸಿದ್ರೆ, ಇನ್ನೊಬ್ರು ಡಾಟಾ ಹಾಕಿಸಲ್ಲ, ಮತ್ತೊಬ್ರು... ಬಾಲಿವುಡ್​ನ 7 ಜಿಪುಣಾಗ್ರೇಸರು!

ನೂರಾರು ಕೋಟಿ ರೂಪಾಯಿಗಳ ಒಡೆಯರಾದರೂ ಕೆಲವು ಸೂಪರ್​ಸ್ಟಾರ್ಸ್​ ಇಂದಿಗೂ ಕಡಿಮೆ ಖರ್ಚಿನಲ್ಲಿ ಬದುಕುತ್ತಿದ್ದಾರೆ. ಅಂಥ ನಟ-ನಟಿಯರು ಯಾರು? 
 

7 actors are the most stingy stars of Bollywood the condition is bad in spending money suc
Author
First Published Jun 8, 2023, 5:26 PM IST

ಇತ್ತೀಚೆಗೆ, ಸಾರಾ ಅಲಿ ಖಾನ್ (Sara Ali Khan) ತಮ್ಮ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಪ್ರಚಾರದಲ್ಲಿದ್ದಾಗ, ಅವರು ತಮಗೆ ಸಂಬಂಧಿಸಿದ ಒಂದು ವಿಷಯವನ್ನು  ಹಂಚಿಕೊಂಡಿದ್ದರು. ಸಾರಾ ಅವರು IIFA 2023 ಗಾಗಿ ಅಬುಧಾಬಿಯಲ್ಲಿದ್ದಾಗ, ರೂ 400 ರ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಯನ್ನು ತೆಗೆದುಕೊಳ್ಳುವ ಬದಲು, ಹೇರ್ ಡ್ರೆಸ್ಸರ್‌ನಿಂದ ಹಾಟ್‌ಸ್ಪಾಟ್ ತೆಗೆದುಕೊಂಡು ವ್ಯವಹಾರ ಕುದುರಿಸಿದ್ದರು. ಯಾವುದೇ ವ್ಯಕ್ತಿಯು ತನ್ನ ದೇಶದಿಂದ ಹೊರಗಿರುವಾಗ, ಹೋಮ್ ನೆಟ್‌ವರ್ಕ್ ಇಲ್ಲದಿದ್ದಲ್ಲಿ ಅವನು ಇಂಟರ್ನ್ಯಾಷನಲ್ ರೋಮಿಂಗ್ ಪ್ಯಾಕ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ, ಅದು ಸಾಕಷ್ಟು ದುಬಾರಿಯಾಗಿದೆ. ಆದರೆ ಸ್ಟಾರ್​ ನಟರಿಗೆ ಇದೊಂದು ಮಾತೇ ಅಲ್ಲ. ಕೋಟಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ-ನಟಿಯರಿಗೆ ಒಂದಿಷ್ಟು ಸಾವಿರ ರೂಪಾಯಿಗಳ ಡಾಟಾ ಹಾಕಿಸುವುದು ದೊಡ್ಡ ವಿಷ್ಯವೇ ಅಲ್ಲ.  ಆದರೆ ಸಾರಾ ಅಲಿ ಖಾನ್​ ಮಾತ್ರ ಹಾಗೆ ಮಾಡದೇ ಬೇರೊಬ್ಬರಿಂದ ಹಾಟ್​ಸ್ಪಾಟ್​ ಪಡೆದುಕೊಂಡಿದ್ದರಂತೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದರು.

ವಿಕ್ಕಿ ಕೌಶಲ್ ಜೊತೆಗೆ ಅವರು ಚಿತ್ರದ ಪ್ರಚಾರವನ್ನು ಎಲ್ಲೆಡೆ ಮಾಡುತ್ತಿರುವ ನಡುವೆಯೇ,  ಸಾರಾ ಅಲಿ ಖಾನ್ ಅವರ ಜಿಪುಣತನದ ಬಗ್ಗೆಯೂ ಚರ್ಚೆಯಲ್ಲಿದೆ. ಆದರೆ, ಸಾರಾ ಮಾತ್ರ ಜಿಪುಣತನದಿಂದ ಗಮನ ಸೆಳೆದಿರುವ ಬಾಲಿವುಡ್ ತಾರೆಯಲ್ಲ. ಸಾರಾ ಹೊರತಾಗಿ, ದುಂದುಗಾರಿಕೆಯಿಂದ ದೂರವಿರುವ ಅನೇಕ ತಾರೆಯರು ಉದ್ಯಮದಲ್ಲಿದ್ದಾರೆ. ಅಂತಹ ಕೆಲವು ಸ್ಟಾರ್ಸ್​ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. 
  
ಕಾಜೋಲ್​ (Kajol): ಬಾಲಿವುಡ್​ನ ಬಬ್ಲಿ ಸ್ಟಾರ್ ಕಾಜೋಲ್​ಗೆ ಹಣದ ಕೊರತೆಯೇನೂ ಇಲ್ಲ. ಈಕೆ ಬಾಲಿವುಡ್‌ನ ಶ್ರೀಮಂತ ತಾರೆಗಳಲ್ಲಿ ಒಬ್ಬರು. ಆದರೆ ಈಕೆ ಅತ್ಯಂತ ಕಂಜೂಸ್​ ನಟಿ ಎನಿಸಿಕೊಂಡಿದ್ದಾರೆ.  ಖುದ್ದು ನಿರ್ಮಾಪಕ ಕರಣ್ ಜೋಹರ್ ಅವರಿಗೆ ಜಿಪುಣ ಎಂಬ ಟ್ಯಾಗ್ ನೀಡಿದ್ದಾರೆ. 

ಸಲ್ಮಾನ್​  ಖಾನ್​ (Salman Khan): ಬಾಲಿವುಡ್‌ನ ಸೂಪರ್‌ಸ್ಟಾರ್ ಮತ್ತು ಶ್ರೀಮಂತ ತಾರೆಗಳಲ್ಲಿ ಒಬ್ಬರಾದ ನಂತರವೂ ಸಲ್ಮಾನ್ ಖಾನ್ ಇನ್ನೂ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡಿರೋ ಸಲ್ಲು ಭಾಯಿ ಅವರಿಗೆ ಮದುವೆಯಾಗದಿದ್ದರೆ ಸಂಬಂಧಗಳಿಗೇನೂ ಕೊರತೆಯಿಲ್ಲ. ಆದರೆ ಸ್ಟಾರ್​ ನಟರು ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸಿಸುವುದು ಮಾಮೂಲು. ಆದರೆ ಸಲ್ಮಾನ್​ ಖಾನ್​ ಅವರು ತಮ್ಮ  ಹಣವನ್ನು ಬಹಳ ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಾರೆ. ಈ ಬಗ್ಗೆ ಅವರೇ ಖುದ್ದು ಹೇಳಿಕೊಂಡಿದ್ದರು.

Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್​ ಜತೆ ಮದ್ವೆ, ಅಕ್ಷಯ್​ ಮಹಾಮೋಸ ಬಯಲು!
 
ಜಾನ್​ ಅಬ್ರಹಾಂ (John Abraham), ವಿಕ್ಕಿ ಕೌಶಲ್​: ಬಾಲಿವುಡ್​ನ ಯಶಸ್ವಿ ನಟರಲ್ಲಿ ಜಾನ್ ಅಬ್ರಹಾಂ ಕೂಡ ಒಬ್ಬರು. ಆದರೆ, ಅವರು ಇಡೀ ವರ್ಷವನ್ನು ಒಂದು ಜೊತೆ ಚಪ್ಪಲಿ, ಒಂದು ಜೊತೆ ಜೀನ್ಸ್ ಮತ್ತು ಟಿ-ಶರ್ಟ್‌ನಲ್ಲಿ ಕಳೆಯಬಹುದು ಎನ್ನುತ್ತಾರೆ.  ಇದನ್ನು ಕಂಜೂಸ್​ ಎಂದು ಹೇಳಲಾಗದಿದ್ದರೂ ಸ್ಟಾರ್​ ನಟನೊಬ್ಬ ಹೀಗೆ ಮಾತನಾಡಿದರೆ ಅವರನ್ನು ಜಿಪುಣರ ಪಟ್ಟಿಗೆ ಸೇರಿಸಲಾಗುತ್ತದೆ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ನಟರು ಗಂಟೆಗೊಮ್ಮೆ ಬಟ್ಟ ಬದಲಾಯಿಸುವವರು. ಆದರೆ ಈ ರೀತಿ ಶಾಕಿಂಗ್​ ಹೇಳಿಕೆ ನೀಡಿದ್ದರಿಂದ ಜಾನ್​ ಅಬ್ರಹಾಂ ಅವರನ್ನು ಜಿಪುಣಾಗ್ರೇಸರ ಲಿಸ್ಟ್​ಗೆ ಸೇರಿಸಲಾಗಿದೆ. ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ನಟ  ವಿಕ್ಕಿ ಕೌಶಲ್ ಅವರು ಸರಳ ಜೀವನವನ್ನು ನಂಬುವ ಬಗ್ಗೆ ಹೇಳಿಕೊಂಡಿದ್ದರು. ಎಷ್ಟೇ ಕೋಟಿ ದುಡಿದರೂ  ಕಷ್ಟಪಟ್ಟು ಗಳಿಸಿದ ಹಣವನ್ನು ವಿವೇಚನೆಯಿಂದ ಖರ್ಚು ಮಾಡುವುದಾಗಿ, ಈ ನಿಟ್ಟಿನಲ್ಲಿ ತಾವು ಕಂಜೂಸ್​ ಎನ್ನುವುದಾಗಿ ಹೇಳಿದ್ದರು.  

ಶಾರುಖ್​ ಖಾನ್​, ಶ್ರದ್ಧಾ ಕಪೂರ್​ (Sharukh Khan): ಶಾರುಖ್ ಖಾನ್ ಅವರು ಅದೆಂಥ ಶ್ರೀಮಂತರು ಎಂದು ಬೇರೆ ಹೇಳಬೇಕಾಗಿಲ್ಲ. ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಇವರು ನೂರಾರು ಕೋಟಿ ರೂಪಾಯಿಗಳ ಒಡೆಯ.  ಆದರೆ ಅವರು ತಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಾರೆ. ಇನ್ನು ನಟಿ ಶ್ರದ್ಧಾಕಪೂರ್​.  'ತೂ ಜೂಠಿ ಮೈನ್ ಮಕ್ಕರ್' ಚಿತ್ರದ ಪ್ರಚಾರದ ವೇಳೆ ಶ್ರದ್ಧಾ ಕಪೂರ್ (Shruddha Kapoor) ತಮ್ಮ ಕಂಜೂಸ್​ತನದ ಬಗ್ಗೆ ಬಹಿರಂಗಪಡಿಸಿದ್ದರು. ಇವತ್ತಿಗೂ ಬಟ್ಟೆ ಕೊಳ್ಳುವುದು ಸೆಲ್‌ನಿಂದ ಮಾತ್ರ ಎಂದು ಹೇಳಿದ್ದರು. 

Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್​, ರಾಜೇಶ್​ ಖನ್ನಾ ದಾಂಪತ್ಯದ ಕಥೆ-ವ್ಯಥೆ!

Follow Us:
Download App:
  • android
  • ios