ಪವನ್ ಒಡೆಯನ್ ನಿರ್ಮಾಣದ ಮೊದಲ ಸಿನಿಮಾ ಡೊಳ್ಳು ಸಿನಿಮಾ ಪ್ರಶಸ್ತಿ ಗೆದ್ದು ಬೀಗಿದೆ. ಸುನಿಲ್ ಪುರಾಣಿಕ್ ಸಾರಥ್ಯದಲ್ಲಿ ಬಂದ ಡೊಳ್ಳು ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಒಟ್ಟು 400 ಸಿನಿಮಾಗಳು ಸ್ಪರ್ಧೆ ಮಾಡಿದ್ದವು. 30 ವಿವಿಧ ಭಾಷೆಯ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಒಟ್ಟು 50 ವಿಭಾಗದಲ್ಲಿ ಸಿನಿಮಾಗಳು ಸ್ಪರ್ಧೆ ಮಾಡಿದ್ದವು.
ಪವನ್ ಒಡೆಯನ್ ನಿರ್ಮಾಣದ ಮೊದಲ ಸಿನಿಮಾ ಡೊಳ್ಳು ಚಿತ್ರ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದು ಬೀಗಿದೆ. ಸುನಿಲ್ ಪುರಾಣಿಕ್ ಸಾರಥ್ಯದಲ್ಲಿ ಬಂದ ಡೊಳ್ಳು ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ, ಅತ್ಯುತ್ತಮ ಆಡಿಯೋಗ್ರಫಿ ವಿಭಾಗದಲ್ಲಿ ಡೊಳ್ಳು ಪ್ರಶಸ್ತಿ ಬಾಚಿಕೊಂಡಿದೆ.
ಇನ್ನು ಸಂಚಾರಿ ವಿಜಯ್ ನಟನೆಯ ತಲೆತಂಡ ಸಿನಿಮಾಗೂ ಪ್ರಶಸ್ತಿ ಲಭಿಸಿದೆ. ಅತ್ತ್ಯುತ್ತಮ ಪರಿಸರ ಕಾಳಜಿ ಸಿನಿಮಾ ವಿಭಾದಲ್ಲಿ ತಲೆತಂಡ ಪ್ರಶಸ್ತಿ ಗಿದ್ದು ಬೀಗಿದೆ. ಇನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಸಿನಿಮಾ ಅತ್ಯುತ್ತ, ಕಲೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಈ ಬಾರಿ ಕನ್ನಡಕ್ಕೆ ಒಟ್ಟು 4 ಪ್ರಶಸ್ತಿ ಲಭಿಸಿದೆ.
