ಅದೃಷ್ಟ, ಹಣೆ ಬರಹ ನೆಟ್ಟಗಿದ್ರೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಕೇರಳದ ಮಮ್ಮಿಕ್ಕಾ ಸಾಕ್ಷಿ. ಒಂದು ಪೋಟೋ ಕೂಲಿಯನ್ನು ಸೂಪರ್ ಮಾಡೆಲ್ ಮಾಡ್ತು. ಈ ಬಗ್ಗೆ ಸಖತ್ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಹಣೇಬರಹ, ಅದೃಷ್ಟ (Luck) ಅನ್ನೋದನ್ನು ನೀವು ನಂಬಿ ಬಿಡಿ, ಆದರೆ ಜಗತ್ತಿನಾದ್ಯಂತ ಆಗೋ ಮಿರಾಕಲ್‌ಗಳು (Miracle) ಇಂಥದ್ದೆಲ್ಲ ಸತ್ಯ ಅಂತ ನಂಬಿಸಿಬಿಡ್ತವೆ. ಭಿಕ್ಷುಕನೊಬ್ಬ ಬೆಳಗಾಗೋದ್ರೊಳಗೆ ಕೋಟ್ಯಾಧಿಪತಿಯಾಗ್ತಾನೆ. ತೀರಾ ಸಾಮಾನ್ಯ ವ್ಯಕ್ತಿ ಲಾಟರಿ (Lottery) ಹೊಡೆದು ದೊಡ್ಡ ಶ್ರೀಮಂತ ಅನಿಸಿಕೊಳ್ತಾನೆ. ಕೋಟಿ ಕೋಟಿ ಸಂಪಾದಿಸುತ್ತಿದ್ದವ ಭಿಕ್ಷೆ ಬೇಡುವ ಲೆವೆಲ್‌ಗೆ ಬಂದಿರ್ತಾನೆ. ನಮ್ಮ ಕಣ್ಣೆದುರೇ ನಡೆಯೋ ಇಂಥಾ ವಿದ್ಯಮಾನಗಳನ್ನ ಕಣ್ಣುಗಳೇ ನಂಬೋದಿಕ್ಕೆ ಕಷ್ಟಪಡುತ್ತವೆ.
ಕೇರಳದ ಮಮ್ಮಿಕ (Mammikka) ಎಂಬ ವ್ಯಕ್ತಿಯ ಕತೆಯೂ ಹೀಗೇ. ಮಮ್ಮಿಕ್ಕಗೀಗ 60 ಚಿಲ್ರೆ ವಯಸ್ಸು. ಅವರು ಅರವತ್ತು ಅಂದ್ರೂ ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಆ ಫ್ಯಾಮಿಲಿ ಡೇಟ್ ಆಫ್ ಬರ್ತ್ ಕರೆಕ್ಟಾಗಿ ಇಟ್ಟುಕೊಂಡಿರೋದು ಡೌಟು. 'ಅರವತ್ತರಲ್ಲಿ ಅರಳುಮರಳು' ಅನ್ನೋದು ಕನ್ನಡದ ಫೇಮಸ್ ಗಾದೆ. ಆದರೆ ಈ ವ್ಯಕ್ತಿಯ ವಿಚಾರದಲ್ಲಿ ಗಾದೆಯನ್ನು ಕರೆಕ್ಷನ್ ಮಾಡದೇ ವಿಧಿಯಿಲ್ಲ. ಈ ಮಮ್ಮಿಕ್ಕ ಅವರಿಂದಾಗಿ 'ಅರವತ್ತರಲ್ಲಿ ಅದೃಷ್ಟ' ಅಂತ ಗಾದೆ ಮಾತನ್ನೇ ಬದಲಾಯಿಸಬೇಕಾದ ಸ್ಥಿತಿ. ಇಲ್ಲವಾದರೆ ಈ ಕೂಲಿ ಕಾರ್ಮಿಕ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಸೂಪರ್ ಮಾಡೆಲ್ ಆಗಿ ಮಿಂಚೋದನ್ನು ಕನಸಿನಲ್ಲಾದರೂ ಊಹಿಸೋದಕ್ಕಾಗುತ್ತಾ..
ಆ ದಿನ ಬೆಳಗ್ಗೆ ಮಮ್ಮಿಕ್ಕ ಅದ್ಯಾವ ಮಗ್ಗುಲಿಂದ ಎದ್ದರೋ ಗೊತ್ತಿಲ್ಲ. ತನ್ನ ಪಾಡಿಗೆ ಕೆಲಸ ಮಾಡಿ ಸಂಜೆ ತನ್ನ ಎಂದಿನ ಸ್ಟೈಲಿನಲ್ಲಿ ಮಾಸಲು ಅಂಗಿ, ಪಂಚೆ ತೊಟ್ಟು, ತಲೆಗೊಂದು ಟವೆಲ್ ಕಟ್ಟಿಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಮನೆಗೆ ಬೇಕಾದ ಸಾಮಗ್ರಿ ತಗೊಂಡು ಬರ್ತಾ ಇದ್ರು. ಆದರೆ ಅಚಾನಕ್ ಆಗಿ ಇವರನ್ನು ನೋಡಿದ ಒಬ್ಬ ಫೇಮಸ್ ಫೋಟೋಗ್ರಾಫರ್‌ಗೆ (Photographer) ತಲೆಯಲ್ಲೇನೋ ಯೋಚನೆ ಚಕ್ಕನೆ ಮಿಂಚಿ ಹೋಯ್ತು. ಅರೆ ಕ್ಷಣದಲ್ಲಿ ಆತನ ಕ್ಯಾಮರ ಈ ತಾತನ ಫೋಟೋವನ್ನು ಚಕ ಚಕನೆ ಕ್ಲಿಕ್ಕಿಸಿತು. ಸೀನ್ ಕಟ್ ಮಾಡಿದ್ರೆ ಆ ತಾತ ಸೂಪರ್ ಮಾಡೆಲ್! ಪ್ರಸಿದ್ಧ ಕಂಪನಿಯೊಂದರ ಉತ್ಪನ್ನಗಳಿಗೆ ರೂಪದರ್ಶಿ. (Model) ಇದೆಲ್ಲ ನಿಜಕ್ಕೂ ನಡೀತಿದ್ಯಾ ಅಥವಾ ಕನಸಾ ಅಂತ ಮಮ್ಮಿಕ್ಕ ಅವರೇ ಮೈ ಮುಟ್ಟಿಕೊಂಡು ನೋಡುವ ಸ್ಥಿತಿ.
Anupamaa ಸ್ಟಾರ್ ರೂಪಾಲಿ ಗಂಗೂಲಿ ನಿವ್ವಳ ಆಸ್ತಿ, ವಯಸ್ಸು, ಶಿಕ್ಷಣವಿಷ್ಟು!
ಈ ಮಮ್ಮಿಕ್ಕಾ ಕೇರಳದ ಕೋಯಿಕೋಡ್ (Kozikode) ನಿವಾಸಿ. ಕೂಲಿ (Laborer) ಕೆಲಸದಿಂದ ದಿನ ಹೊರೆಯುವ ಸಾಮಾನ್ಯ ನೌಕರ. ಎಂದಿನಂತೆ ಕೆಲಸ ಮುಗಿಸಿಕೊಂಡು ತನ್ನ ಕೂಲಿಕಾರನ ಉಡುಗೆಯಲ್ಲೇ ನಡೆದು ಬರುತ್ತಿದ್ದಾಗ ಈತನಲ್ಲಿ ಅದೇನೋ ಆಕರ್ಷಣೆ ಇದೆ ಅಂತ ಇವರ ಫೋಟೋ ಕ್ಲಿಕ್ಕಿಸಿದ್ದು ಶರೀಕ್ ವಯಾಲಿಲ್ ಎಂಬ ಫೋಟೋಗ್ರಾಫರ್. ಅವರು ಮಮ್ಮಿಕ್ಕ ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾರೆ. ಇದನ್ನು ನೋಡಿದ ಜನ ಈ ವ್ಯಕ್ತಿ ಒಂದು ಆಂಗಲ್‌ನಲ್ಲಿ ಮಲಯಾಳಂ ನಟ ವಿನಾಯಕನ್ ಅವರನ್ನು ಹೋಲುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ. ಹೌದಾ, ಹಾಗಾದ್ರೆ ಒಮ್ಮೆ ನೋಡೇ ಬಿಡೋಣ ಅಂತ ಈ ವ್ಯಕ್ತಿಯನ್ನು ಕರೆತಂದು ಆತನಿಗೆ ಫೇಶಿಯಲ್ (Facial), ಸ್ಪಾ (Spa) ಇತ್ಯಾದಿ ಮಾಡಿ ಹೇರ್ ಸ್ಟೈಲ್ ಬದಲಾಯಿಸಿ ಮಾಡರ್ನ್ ಆಗಿ ಫೋಟೋಶೂಟ್ (Photoshoot) ಮಾಡಿಸಲಾಗುತ್ತದೆ. ಕಂಪ್ಲೀಟ್ ಮಾಡರ್ನ್ ಲುಕ್‌ನಲ್ಲಿರುವ ಈ ಫೋಟೋಶೂಟ್ ಸಖತ್ ವೈರಲ್ (Viral) ಆಗುತ್ತದೆ. ಈ ವ್ಯಕ್ತಿಯ ಚೇಂಜ್ ಓವರ್ ಅನ್ನೂ ಸೋಷಿಯಲ್ ಮೀಡಿಯಾ (Social Media) ದಲ್ಲಿ ಪೋಸ್ಟ್ ಮಾಡಲಾಗಿದ್ದು, ಬಹಳಷ್ಟು ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಮಮ್ಮಿಕ ಅವರಿಗೂ ಇದು ಅಚ್ಚರಿಯ ಸಂಗತಿ. ಸಡನ್ನಾಗಿ ತನ್ನ ಲುಕ್ಕೇ ಬದಲಾಗಿದ್ದು, ತಾನೊಬ್ಬ ಸೂಪರ್ ಮಾಡೆಲ್ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರೋದನ್ನು ಕಂಡು ಮುಗ್ಧ ನಗೆ ಬೀರುತ್ತಾರವರು. ಹೆಚ್ಚು ವಿದ್ಯಾಭ್ಯಾಸವೂ ಇಲ್ಲದ ಅವರಿಗೆ ಇದನ್ನು ಹೇಗೆ ಸ್ವೀಕರಿಸಬೇಕು ಅನ್ನುವುದರ ಬಗ್ಗೆ ತಿಳಿಯುತ್ತಿಲ್ಲ. 'ನಾನಿನ್ನು ಕೂಲಿಯ ಜೊತೆಗೆ ಮಾಡೆಲಿಂಗ್‌ಅನ್ನೂ ಮಾಡುತ್ತೀನಿ. ಜನ ನನ್ನ ಬಗ್ಗೆ ಮೆಚ್ಚುಗೆ ತೋರಿಸುತ್ತಿರುವುದನ್ನು ನೋಡಿದರೆ ನನ್ನಂಥವರೂ ಮಾಡೆಲ್ ಆಗಬಹುದು' ಅನ್ನುತ್ತಾರವರು. ಮಾಡೆಲಿಂಗ್‌ನಲ್ಲಿ ಬರುವ ಹಣ ಎಷ್ಟಿರುತ್ತೆ, ಅದು ತನಗೆ ಸಿಗುವ ಕೂಲಿಗಿಂತ ಎಷ್ಟು ಪಟ್ಟು ಹೆಚ್ಚಿರುತ್ತೆ ಅನ್ನೋದೆಲ್ಲ ಇವರಿಗಿನ್ನೂ ತಿಳಿದ ಹಾಗಿಲ್ಲ. ಆದರೆ ಬದಲಾದ ಸ್ಟೈಲಿನಲ್ಲಿ ಇವರ ಅಪೀಯರೆನ್ಸ್ ಮಾತ್ರ ಅಬ್ಬಾ ಯಾವ ಸೂಪರ್ ಮಾಡೆಲ್‌ಗೂ ಕಡಿಮೆ ಇಲ್ಲ ಅನ್ನೋ ಹಾಗಿದೆ.
'ಅಫ್ರಿದಿ ಕಲ್ಪಿಸಿಕೊಂಡೆ ನನ್ನನ್ನು ನಾನು ಮುಟ್ಟಿಕೊಂಡೆ' ಆದರೆ ಇನ್ನು ಆಸೆ ತೀರಿಲ್ಲ!
