ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಕೇಸಲ್ಲಿ ನಟಿ ಸಪ್ನಾ ಜೌಧರಿ, ಜೈಲು ಪಕ್ಕಾ?

ನಟಿ, ಗಾಯಕಿ, ನರ್ತಕಿ ಸಪ್ನಾ ಚೌಧರಿ ಅವರ ವಿರುದ್ಧ ವರದಕ್ಷಿಣೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಕೇಸ್​ಗಳು ದಾಖಲಾಗಿದ್ದು, ಜೈಲು ಸೇರುವುದು ಬಹುತೇಕ ಖಚಿತವಾಗಿದೆ. ಏನಿದು ಕೇಸ್​?
 

New case against dancer Bigg Boss Sapna chowdhary by sister in law

ಇತ್ತೀಚೆಗಷ್ಟೇ ಕನ್ನಡದ ನಟಿ ಅಭಿನಯ ಅವರು ವರದಕ್ಷಿಣೆ ಕೇಸ್​ನಲ್ಲಿ ಸಿಲುಕಿ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದೇ ಇರುವ ವಿಷಯ.  ಅತ್ತಿಗೆಗೆ ವರದಕ್ಷಿಣಿ (dwory) ಕಿರುಕುಳ ನೀಡಿದ್ದಕ್ಕಾಗಿ ಹಾಗೂ ಕೌಟುಂಬಿಕ ದೌರ್ಜನ್ಯ (Domestic Violence) ನಡೆಸಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ.  ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ನೀಡಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ್ದ ಕೋರ್ಟ್​, ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅಭಿನಯಾ ಅವರಿಗೆ ಎರಡು ವರ್ಷ, ಅವರ ತಾಯಿ  ಜಯಮ್ಮ ಅವರಿಗೆ 5 ವರ್ಷ ಶಿಕ್ಷೆ ಹಾಗೂ ಅಭಿನಯಾ ಸಹೋದರ ಚೆಲುವರಾಜ್​ಗೆ 2 ವರ್ಷ ಶಿಕ್ಷೆ (punishment) ನೀಡಲಾಗಿದೆ. ಈಗ ಇನ್ನೋರ್ವ ನಟಿ ಇದೇ ರೀತಿಯ ವರದಕ್ಷಿಣೆ ಕಿರುಕುಳ ಕೇಸ್​ನಲ್ಲಿ ಸಿಲುಕಿದ್ದಾರೆ.

ಕೆಲವು ಚಿತ್ರಗಳಲ್ಲಿ ನಟಿಸಿರೋ ನಟಿ, ಯೂಟ್ಯೂಬರ್​ ಹಾಗೂ ಹಿಂದಿ ಬಿಗ್​ಬಾಸ್​ (Bigg Boss) ಖ್ಯಾತಿಯ ಸಪ್ನಾ ಚೌಧರಿ (Sapna Chowdhary) ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಈ ಕೇಸ್​ನಲ್ಲಿ ಕೂಡ ಅವರ ಅತ್ತಿಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಅತ್ತಿಗೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಸಪ್ನಾ ಚೌಧರಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಹರಿಯಾಣದ ಡಾನ್ಸರ್​ ಹಾಗೂ ಖ್ಯಾತ ಗಾಯಕಿಯೂ (Singer and Dancer) ಕೂಡ ಆಗಿರುವ ಸಪ್ನಾ ವಿರುದ್ಧ   ನೀಡಲಾಗಿರುವ ದೂರಿನ ಮೇರೆಗೆ ಪಲ್ವಾಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಅತ್ತಿಗೆಯನ್ನು ಹಿಂಸಿಸಿ ಹಲ್ಲೆ ಮಾಡಿದ ದೂರಿನ ಮೇರೆಗೆ ಹರಿಯಾಣ ಪೊಲೀಸರು ಸಪ್ನಾ ಚೌಧರಿ, ಆಕೆಯ ಸಹೋದರ ಕರಣ್ ಚೌಧರಿ ಮತ್ತು ಆಕೆಯ ತಾಯಿ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ (Enquiry) ಆರಂಭಿಸಿದ್ದಾರೆ.

ವರದಕ್ಷಿಣೆ (dowry) ರೂಪದಲ್ಲಿ ಕ್ರೆಟಾ ಕಾರನ್ನು ನೀಡುವಂತೆ ಎಲ್ಲರೂ ಹಿಂಸೆ ನೀಡುತ್ತಿದ್ದಾರೆ. ಅದು ಕೊಡಲು ತಮ್ಮ ತವರು ಮನೆಯವರಿಗೆ ಸಾಧ್ಯವಾಗದ ಕಾರಣ, ತಮ್ಮ ಮೇಲೆ ಹಲ್ಲೆ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಪ್ನಾ ಅವರ ಅತ್ತಿಗೆ ಆರೋಪಿಸಿದ್ದಾರೆ. '2018ರಲ್ಲಿ ದೆಹಲಿಯ ನಜಾಫ್‌ಗಢದ ನಿವಾಸಿಯಾಗಿರುವ ಸಪ್ನಾ ಅವರ ಸಹೋದರ ಕರಣ್ ಅವರನ್ನು ನಾನು ವಿವಾಹವಾಗಿದ್ದೆ.  ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ  ಅಪಾರ ಪ್ರಮಾಣದ ಚಿನ್ನಾಭರಣ, ನಗದು ನೀಡಲಾಗಿದೆ. ಸಪ್ನಾ ಅವರ ಕುಟುಂಬದವರ ಕೋರಿಕೆಯಂತೆ ದೆಹಲಿಯಲ್ಲಿ ದೊಡ್ಡ  ಹೋಟೆಲ್‌ನಲ್ಲಿ ಮದುವೆಯನ್ನು ಮಾಡಿ ಕೊಡಲಾಗಿದೆ.  ಆ ಸಮಯದಲ್ಲಿ ಸುಮಾರು 42 ಲಕ್ಷ ರೂ. ಖರ್ಚು ಮಾಡಲಾಗಿದೆ. ಇಷ್ಟು ಮಾಡಿದರೂ ಅವರ ದಾಹ ತೀರಲಿಲ್ಲ. ನನಗೆ ವಿಪರೀತ ಹಿಂಸೆ ಕೊಡುತ್ತಿದ್ದಾರೆ' ಎಂದು ಸಪ್ನಾ ಅತ್ತಿಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ (Complaint) ತಿಳಿಸಲಾಗಿದೆ. 

ತೆರಿಗೆ ವಂಚನೆ ಕೇಸ್: ಎ.ಆರ್​. ರೆಹಮಾನ್‌ಗೆ- ಹೈಕೋರ್ಟ್​ನಿಂದ ಬಿಗ್​ ಶಾಕ್​!

'ಹಲವು ಬಾರಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ.  ಮಗಳಿಗೆ ಜನ್ಮ ನೀಡಿದಾಗ ಈ ಹಿಂಸೆ ಹೆಚ್ಚಾಗಿದೆ. ಮಗಳು ಹುಟ್ಟಿದ ಸಂದರ್ಭದಲ್ಲಿಯೂ   3 ಲಕ್ಷ ರೂಪಾಯಿ, ಚಿನ್ನಾಭರಣ ಮತ್ತು ಹೊಸ ಬಟ್ಟೆಗಳನ್ನು ನನ್ನ ತವರು ಮನೆಯವರು ನೀಡಿದ್ದರು.  ಆದರೆ ಸಪ್ನಾ ಅವರ ಕುಟುಂಬವು  ಕಾರಿಗೆ ಬೇಡಿಕೆಯಿಡುತ್ತಲೇ ಇತ್ತು. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಾಗ  ಹಿಂಸಿಸಲು ಪ್ರಾರಂಭಿಸಿದರು ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ, ಆಕೆಯ ಪತಿಯು ಅಮಲೇರಿದ ಸ್ಥಿತಿಯಲ್ಲಿ ಆಕೆಯನ್ನು ಥಳಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ' ಎಂದು ಅತ್ತಿಗೆ ತಿಳಿಸಿದ್ದಾರೆ. 

 ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ನವೆಂಬರ್​ ತಿಂಗಳಿನಲ್ಲಿ ಸಪ್ನಾ ವಿರುದ್ಧ ವಂಚನೆಯ (Fruad) ಆರೋಪಗಳು ಕೇಳಿಬಂದಿದ್ದವು. ಸಪ್ನಾ ಚೌಧರಿ ಅವರು 2018 ರಲ್ಲಿ ಕಾರ್ಯಕ್ರಮವೊಂದರಲ್ಲಿ ಮುಂಗಡ ಪಡೆದರೂ ತಮ್ಮ ಅಭಿನಯವನ್ನು ನೀಡಲಿಲ್ಲ ಎಂದು ಆರೋಪಿಸಿ ಕಂಪೆನಿಯೊಂದು ದೂರು ದಾಖಲು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಪ್ನಾ ವಿರುದ್ಧ  ಬಂಧನ ವಾರೆಂಟ್ ಕೂಡ ಹೊರಡಿಸಲಾಗಿತ್ತು. ಇಷ್ಟೇ ಅಲ್ಲದೇ 2018ರಲ್ಲಿ ಕೂಡ ವಂಚನೆ ಕೇಸ್​ನಲ್ಲಿ ಇವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಆಗಲೂ ದುಡ್ಡು ಪಡೆದು ಕಾರ್ಯಕ್ರಮಕ್ಕೆ ಹಾಜರು ಆಗಿರಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ನಟಿ, ಜೈಲು ಸೇರುವುದು ಈಗ ಪಕ್ಕಾ ಆಗಿದೆ. 
 

ನಟಿ ಆಲಿಯಾ ಭಟ್​ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್​

Latest Videos
Follow Us:
Download App:
  • android
  • ios