ಅಮ್ಮನೊಂದಿಗೆ ಮದುವೆಗೆ ಬಂದಿದ್ದ ನಾಲ್ಕು ವರ್ಷದ ಬಾಲಕಿಯನ್ನು ಮದುವೆ ಮನೆಯಿಂದಲೇ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಲಿಘರ್‌: ಅಮ್ಮನೊಂದಿಗೆ ಮದುವೆಗೆ ಬಂದಿದ್ದ ನಾಲ್ಕು ವರ್ಷದ ಬಾಲಕಿಯನ್ನು ಮದುವೆ ಮನೆಯಿಂದಲೇ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಮನೆಯಿಂದ ರಾತ್ರಿ 11 ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಆಕೆಗಾಗಿ ಸುತ್ತಮುತ್ತಲೆಲ್ಲಾ ಹುಡುಕಾಟ ನಡೆಸಿದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿ ಮದುವೆ ನಿಗದಿಯಾಗಿದ್ದ ಬ್ಯಾಂಕ್ವೆಟ್ ಹಾಲ್‌ನ ಸಮೀಪದಲ್ಲೇ ಬಾಲಕಿ ಪತ್ತೆಯಾಗಿದ್ದಳು, ಆಕೆಯ ದೇಹದಲ್ಲಿ ಗಾಯದ ಗುರುತುಗಳಿದ್ದು, ರಕ್ತಸ್ರಾವವಾಗುತ್ತಿತ್ತು. ಕೂಡಲೇ ಆಕೆಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಾಲಕಿಯ ದೇಹದಲ್ಲಿ ಗಾಯಗಳು ಗಂಭೀರವಾಗಿದ್ದರಿಂದ ಆಕೆಯನ್ನು ಅಲ್ಲಿಂದ ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು. 

ಉತ್ತರ ಪ್ರದೇಶದ ಫಾರುಕಾಬಾದ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದಾಗ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಲಾಕೆಟ್ ಹಾಗೂ ಕಾಲುಗೆಜ್ಜೆಗಳು ನಾಪತ್ತೆಯಾಗಿದ್ದವು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಅವರ ಜೊತೆಗೆ ಎಸ್‌ಪಿ ಅಲೋಕ್ ಪ್ರಿಯದರ್ಶಿನಿ, ಎಎಸ್‌ಪಿ ಸಂಜಯ್‌ಕುಮಾರ್, ಡಿಎಸ್‌ಪಿ ಅರುಣ್‌ಕುಮಾರ್ ಮುಂತಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. 

ಬಾಲಕರಲ್ಲ ಇವರು ರಾಕ್ಷಸರು... ಶಾಲೆಗೆ ಹೋಗೋ ಮಕ್ಕಳಿಂದ ಇದೆಂಥಾ ಪೈಶಾಚಿಕ ಕೃತ್ಯ

ಮದುವೆ ಹಾಲ್‌ನ ಸಮೀಪದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ 4 ವರ್ಷದ ಮಗು ಮದ್ವೆ ಮನೆಯ ಹಾಲ್‌ನಿಂದ ಹೊರ ಹೋಗುತ್ತಿದ್ದು, ಆಕೆಯನ್ನು ಶಂಕಿತ ಹಿಂಬಾಲಿಸುತ್ತಿರುವುದು ಕಾಣಿಸುತ್ತಿದೆ. ಪೊಲೀಸರು ಘಟನಾ ಸ್ಥಳದ ಸಮೀಪದಲ್ಲಿರುವ ಕಾಲೋನಿಯ ಕೆಲ ಮನೆಗಳಲ್ಲಿ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಅಲ್ಲದೇ ಆರೋಪಿಯ ಪತ್ತೆಗೆ ಮೂರು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಅಲ್ಲದೇ ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಮಗು ಎಂಬುವುದನ್ನು ನೋಡದೇ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ತಪ್ಪಿತಸ್ಥನಿಗೆ ಕಠಿಣಶಿಕ್ಷೆಯಾಗಬೇಕಿದೆ. 

Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ