Asianet Suvarna News Asianet Suvarna News

ಅಲ್ಲು ಅರ್ಜುನ್ ಸಿನಿಮಾಗೆ ಭಾರಿ ಬೇಡಿಕೆ; OTT ರೈಟ್ಸ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್

ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪ-2 (Pushpa 2)ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪುಷ್ಪ ಸಿನಿಮಾದ ಸಕ್ಸಸ್ ಪಾರ್ಟ್-2 ಮೇಲಿನ ಕುತೂಹಲ ದುಪ್ಪಟ್ಟು ಮಾಡಿದೆ. ಮೊದಲ ಭಾಗದ ಯಶಸ್ಸು ಪುಷ್ಪ ಪಾರ್ಟ್-2ಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

2 OTT platforms at war for Allu Arjun starrer Pushpa 2 streaming rights sgk
Author
Bengaluru, First Published May 17, 2022, 3:02 PM IST

ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪ-2 (Pushpa 2)ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪುಷ್ಪ ಸಿನಿಮಾದ ಸಕ್ಸಸ್ ಪಾರ್ಟ್-2 ಮೇಲಿನ ಕುತೂಹಲ ದುಪ್ಪಟ್ಟು ಮಾಡಿದೆ. ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪುಷ್ಪ ಸಿನಿಮಾ ಮೂಲಕ ಅಲ್ಲು ಅರ್ಜುನ್ ಬಾಲಿವುಡ್ ನಲ್ಲೂ ಭರ್ಜರಿ ಯಶಸ್ಸು ಕಂಡರು. ಹಿಂದಿ ಬಾಕ್ಸ್ ಆಫೀಸ್ ನಲ್ಲೂ ಪುಷ್ಪ ಸಿನಿಮಾ ಉತ್ತಮ ಕಮಾಯಿ ಮಾಡಿದೆ. ಮೊದಲ ಭಾಗದ ಯಶಸ್ಸು ಪುಷ್ಪ ಪಾರ್ಟ್-2ಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಒಂದೆಡೆ ದಕ್ಷಿಣ ಭಾರತದ ಸಿನಿಮಾಗಳು ಭಾರತದಾದ್ಯಂತ ರಾರಾಜಿಸುತ್ತಿವೆ. ಹಿಂದಿ ಪ್ರೇಕ್ಷಕರು ಸಹ ದಕ್ಷಿಣದ ಸಿನಿಮಾವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಹೀಗಿರುವಾಗ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾಗೂ ಬೇಡಿಕೆ ಹೆಚ್ಚಾಗಿದೆ.

ಪುಷ್ಪ-2 ಸಿನಿಮಾಗಾಗಿ 2 ದೊಡ್ಡ ಒಟಿಟಿಗಳ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಪುಷ್ಪ-2 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಖರೀದಿಸಲು ಎರಡು ಒಟಿಟಿಗಳ ನಡುವೆ ವಾರ್ ಪ್ರಾರಂಭವಾಗಿದೆ ಎನ್ನುವ ಸುದ್ದಿ ತಿಳಿದುಬಂದಿದೆ. ಪುಷ್ಪ-2 ಸಿನಿಮಾದ ಒಟಿಟಿ ಹಕ್ಕಿಗಾಗಿ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಲ್ಲದೇ ಈ ಎರಡು ಒಟಿಟಿಗಳು ದೊಡ್ಡ ಮೊತ್ತದ ಹಣ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಈ ಪರಿ ಬೇಡಿಕೆ ಹೆಚ್ಚಾಗಿದ್ದು ದೊಡ್ಡ ಒಟಿಟಿ ಜೊತೆ ಒಪ್ಪಂದ ಮಾಡಿಕೊಳ್ಳಲು ಪುಷ್ಪ ತಂಡ ನಿರ್ಧರಿಸಿದೆ.

ಅಬ್ಬಾ..ಪುಷ್ಪ-2ಗಾಗಿ ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಅಲ್ಲು ಅರ್ಜುನ್ ..

ಇನ್ನು ಮೂಲಗಳ ಪ್ರಕಾರ ಪುಷ್ಪ-2 ಅಮೆಜಾನ್ ಪ್ರೈಮ್ ವಿಡಿಯೋ ಪಾಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಅಂದಹಾಗೆ ಪುಷ್ಪ-2 ಸಿನಿಮಾದ ಚಿತ್ರೀಕರಣ ಇನ್ನು ಪ್ರಾರಂಭವಾಗಿಲ್ಲ. ಜೂನ್ ಕೊನೆಯಲ್ಲಿ ಅಥವಾ ಜುಲೈ ಪ್ರಾರಂಭದಲ್ಲಿ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ ಸಿನಿಮಾತಂಡ. ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿ ಕಟ್ಟಿಕೊಡಲು ನಿರ್ದೇಶಕರ ತಯಾರಿ ನಡೆಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ 2023 ಬೇಸಿಗೆ ರಜೆಯ ಸಮಯದಲ್ಲಿ ಚಿತ್ರಮಂದಿರಕ್ಕೆ ಎಂಟ್ರಿಕೊಡಲಿದೆ.

'ಪುಷ್ಪಾ' ಸೆಲಿಬ್ರೇಷನ್‌ ಮಾಡಿದ ನೇಪಾಳ ಆಟಗಾರ್ತಿ..! ವಿಡಿಯೋ ವೈರಲ್

ಪುಷ್ಪ ಸಿನಿಮಾ ಕಳೆದ ವರ್ಷ 2021 ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಪಾರ್ಟ್-2ನಲ್ಲೂ ರಶ್ಮಿಕಾ ಪಾತ್ರ ಮುಂದುವರೆಯಲಿದೆ. ಜೊತೆಗೆ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಪುಷ್ಪ-2 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ಸಿನಿಮಾದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಫಹಾದ್ 2ನೇ ಭಾಗದಲ್ಲಿ ಸಂಪೂರ್ಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Latest Videos
Follow Us:
Download App:
  • android
  • ios