* ಪುಪ್ಪಾ ಸಿನೆಮಾದ ಸ್ಟೈಲ್ ಅನುಕರಿಸಿದ ಮಹಿಳಾ ಆಟಗಾರ್ತಿ * ನೇಪಾಳದ ಸೀತಾ ರಾಣಾ ಮಗಾರ್ ವಿಕೆಟ್ ಕಬಳಿಸಿದ ಬಳಿಕ 'ಪುಷ್ಪಾ' ಸಿನೆಮಾದ ಸ್ಟೈಲ್‌ನಲ್ಲಿ ಶೈನಿಂಗ್* ಇತ್ತೀಚೆಗೆ ಮಹಿಳಾ ಕ್ರಿಕೆಟ್ ಸಾಕಷ್ಟು ವೈರಲ್
ಬೆಂಗಳೂರು(ಮೇ.11): ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನೆಮಾ (Pushpa celebration) ಸದ್ಯ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದು ಎನಿಸಿದೆ. ಇದೀಗ 'ಪುಷ್ಪಾ' ಸಿನಿಮಾದ ಕ್ರೇಜ್ ಮಹಿಳಾ ಕ್ರಿಕೆಟ್‌ನಲ್ಲೂ ಹೊಸ ಅಲೆ ಎಬ್ಬಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಪಾಲ್ಗೊಂಡಿರುವ ಡೇವಿಡ್ ವಾರ್ನರ್ (David Warner), ರವೀಂದ್ರ ಜಡೇಜಾ (Ravindra Jadeja) ಹಾಗೂ ಒಬೆಡ್ ಮೆಕಾಯ್ ಬಳಿಕ ಇದೀಗ ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ 'ಪುಷ್ಪಾ'ದ ಸೆಲಿಬ್ರೇಷನ್ ಗಮನ ಸೆಳೆದಿದೆ.
ಕಳೆದ ಮೇ 05ರಂದು ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ತೋರ್ನಾಡೊಸ್ ವುಮೆನ್ ಹಾಗೂ ಸಪ್ಪೈರ್ಸ್ ವುಮೆನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೇಪಾಳದ ಸೀತಾ ರಾಣಾ ಮಗಾರ್ ವಿಕೆಟ್ ಕಬಳಿಸಿದ ಬಳಿಕ 'ಪುಷ್ಪಾ' ಸಿನೆಮಾದಲ್ಲಿ ಅಲ್ಲು ಅರ್ಜುನ್ (Allu arjun) ಅವರ ಪ್ರಖ್ಯಾತ ಸ್ಟೈಲ್ ಅನುಕರಿಸಿ ಗಮನ ಸೆಳೆದಿದ್ದಾರೆ.
ಈ ಕುರಿತಂತೆ ಐಸಿಸಿ (ICC) ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದೆ. ನೇಪಾಳದ ಸೀತಾ ರಾಣಾ ಮಗಾರ್ (Sita Rana Magar) ಸದ್ಯದ ಅತ್ಯಂತ ಜನಪ್ರಿಯ ಸೆಲಿಬ್ರೇಷನ್ ಮಾಡಿದ್ದಾರೆ ಎಂದು ಬರೆದುಕೊಂಡಿದೆ.
ಫೇರ್‌ಬ್ರೇಕ್ ಆಹ್ವಾನಿತ ತಂಡಗಳ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಹಲವು ತಾರಾ ಹಾಗೂ ಉದಯೋನ್ಮುಖ ಆಟಗಾರ್ತಿಯರು ಪಾಲ್ಗೊಂಡಿದ್ದರು. ಫೇರ್‌ಬ್ರೇಕ್ ಆಹ್ವಾನಿತ ತಂಡಗಳ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್, ವೆಸ್ಟ್ ಇಂಡೀಸ್‌ನ ಸ್ಟಿಫಾನೆ ಟೇಲರ್ ಹಾಗೂ ಸನಾ ಮಿರ್ ಮುಂತಾದ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಟೂರ್ನಿಯು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. 2020ರ ಮಾರ್ಚ್ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು 86,000 ಪ್ರೇಕ್ಷಕರು ಮೈದಾನಕ್ಕೆ ಬಂದಿದ್ದರು.
ICC T20 World Cup ಟೂರ್ನಿಗೂ ಮುನ್ನ ಆಸೀಸ್ ಎದುರು ಟಿ20 ಸರಣಿಯಾಡಲಿದೆ ಟೀಂ ಇಂಡಿಯಾ
ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC Women's T20 World Cup) ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಕೊರೋನಾ ಸೋಂಕು ಅಪ್ಪಳಿಸಿದ್ದರಿಂದ ಇದರ ಪರಿಣಾಮ ಮಹಿಳಾ ಕ್ರಿಕೆಟ್ ಮೇಲೂ ಆಯಿತು. ಇದಾದ ಬಳಿಕ ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ.
