16ನೇ ವಯಸ್ಸಿನಲ್ಲಿ ಸಮಂತಾ ಹೇಗಿದ್ದರು ನೋಡಿದ್ರಾ? ಆಗಲೇ ಫೇಮಸ್ ಈ ಸ್ಟಾರ್ ನಟಿ!

16ನೇ ವಯಸ್ಸಿನಲ್ಲಿ ಸಮಂತಾ ಹೇಗಿದ್ದರು ನೋಡಿದ್ರಾ? ಹಳೆಯ ಫೋಟೋ ಹಂಚಿಕೊಂಡ ಸ್ಯಾಮ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

16 years old Samantha Ruth Prabhu throwback photo from her modelling days goes viral sgk

ಸೌತ್ ಸ್ಟಾರ್ ಸಮಂತಾ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಸಿನಿಮಾ ವೆಬ್ ಸೀರಿಸ್ ಅಂತ ಬ್ಯುಸಿಯಾಗಿರುವ ಸಮಂತಾ ದಿ ಫ್ಯಾಮಿಲಿ ಮ್ಯಾನ್ 2 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಮಂತಾ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಅಕ್ಟೀವ್ ಆಗಿರುವ ಸಮಂತಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೌದು ಸಮಂತಾ ತಮ್ಮ 16ನೇ ವಯಸ್ಸಿನ ಫೋಟೋ ಹಂಚಿಕೊಂಡಿದ್ದಾರೆ. ಇಗಷ್ಟೆ ಇಲ್ಲ ಆಗಲೂ ಸಮಂತಾ ಸಿಕ್ಕಾಪಟ್ಟೆ ಫೇಮಲ್.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ಸಮಂತಾ 16ನೇ ವಯಸ್ಸಿನ ಫೋಟೋ ಶೇರ್ ಮಾಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಫೋಟೋ ಅದಾಗಿದ್ದು ಫ್ರಾಕ್ ನಲ್ಲಿ ಮಿಂಚಿರುವ ಸಮಂತಾ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಮಂತಾ ಆಗಲೇ ಮಾಡಲಿಂಗ್‌ನಲ್ಲಿ ಗುರಿತಿಸಿಕೊಂಡಿದ್ದರು. ಕ್ಯಾಮರಾಗೆ ಮಸ್ತ್ ಪೋಸ್ ನೀಡಿರುವ ಸ್ಯಾಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಇತ್ತೀಚೆಗಷ್ಟೆ ಸಮಂತಾ ಹುಟ್ಟುಹಬ್ಬ ಆಚರಿಸಿಕೊಂಡರು. 36ನೇ ವರ್ಷದ ಜನ್ಮದಿನ ಸಂಭ್ರಮಿಸಿದರು. '16 ವರ್ಷದವಳಾಗಿದ್ದಾ ನಾನು' ಎಂದು ಬರೆದುಕೊಂಡಿದ್ದಾರೆ. ಸಮಂತಾ ಕಾಜೇಲು ದಿನಗಳಲ್ಲಿಯೇ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಯೇ ಮಾಯಾ ಚೇಸವೇ ಸಿನಿಮಾ ಮೂಲಕ ಸಮಂತಾ ಸಿನಿಮಾರಂಗ ಜರ್ನಿ ಪ್ರಾರಂಭಿಸಿದರು. ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಮಿಂಚಿದ ಸಮಂತಾ ಸ್ಟಾರ್ ಆಗಿ ಮೆರೆದರು. ಬಹುತೇಕ ಎಲ್ಲಾ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಈಗಲೂ ಬೇಡಿಕೆಯ ನಟಿಯಾಗಿದ್ದಾರೆ. 

Jr.NTR ಬಳಿಕ ಸಮಂತಾ; ಪಾಶ್ಚಿಮಾತ್ಯರ ಶೈಲಿಯಲ್ಲಿ ಇಂಗ್ಲಿಷ್ ಮಾತಾಡಿದ ಸ್ಯಾಮ್, ಹಿಗ್ಗಾಮುಗ್ಗ ಟ್ರೋಲ್

ಸಮಂತಾ ಕೊನೆಯದಾಗಿ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾಕುಂತಲಂ ಸಿನಿಮಾ ನಿರೀಕ್ಷೆಯ ಗೆಲುವು ಕಂಡಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಈ ಸಿನಿಮಾ ಬಳಿಕ ತೆಲುಗಿನಲ್ಲಿ ಸಮಂತಾ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಿಟಾಡೆಲ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. 

'ಶಾಕುಂತಲಂ' ಸೋಲಿನ ನಡುವೆಯೂ ಸಮಂತಾ ಸೆಕ್ಸಿ ಪೋಸ್; ವರುಣ್ ಧವನ್ ಜೊತೆಗಿನ ಫೋಟೋ ವೈರಲ್

ದಿ ಫ್ಯಾಮಿಲಿ ಮ್ಯಾನ್-2 ಸೀರಿಸ್ ಬಳಿಕ ಸಮಂತಾ ಸಿಟಾಡೆಲ್ ಭಾರತೀಯ ವರ್ಷನ್‌ನಲ್ಲಿ ನಟಿಸುತ್ತಿದ್ದಾರೆ. ಸಮಂತಾ ಮತ್ತು ಬಾಲಿವುಡ್ ಸ್ಟಾರ್ ವರುಣ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ಗೆ ಆಕ್ಷನ್ ಕಟ್ ಹೇಳಿದ್ದ ರಾಜ್ ಮತ್ತು ಡಿಕೆ ಸಿಟಾಡೆಲ್ ಸೀರಿಸ್‌ಗೂ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಇಬ್ಬರೂ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 

Latest Videos
Follow Us:
Download App:
  • android
  • ios