Jr.NTR ಬಳಿಕ ಸಮಂತಾ; ಪಾಶ್ಚಿಮಾತ್ಯರ ಶೈಲಿಯಲ್ಲಿ ಇಂಗ್ಲಿಷ್ ಮಾತಾಡಿದ ಸ್ಯಾಮ್, ಹಿಗ್ಗಾಮುಗ್ಗ ಟ್ರೋಲ್
ಪಾಶ್ಚಿಮಾತ್ಯರ ಶೈಲಿಯಲ್ಲಿ ಇಂಗ್ಲಿಷ್ ಮಾತಾಡಿ ನಟಿ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಇತ್ತೀಚೆಗಷ್ಟೆ ಪಾಶ್ಚಿಮಾತ್ಯರ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆರ್ ಆರ್ ಆರ್ ಸ್ಟಾರ್ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಸಮಾರಂಭದಲ್ಲಿ ಪಾಶ್ಚಿಮಾತ್ಯ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಿ ಸಖತ್ ಟ್ರೋಲ್ ಆಗಿದ್ದರು. ಫೇಕ್ ಆ್ಯಕ್ಸೆಂಟ್ ಬೇಕಿತ್ತಾ ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಜೂ.ಎನ್ ಟಿ ಆರ್ ಟ್ರೋಲ್ ಆದ ಬೆನ್ನಲ್ಲೇ ಇದೀಗ ಸಮಂತಾ ಕೂಡ ಪಾಶ್ಚಿಮಾತ್ಯ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಸೌತ್ ಸುಂದರಿ ಸಮಂತಾ ಇತ್ತೀಚೆಗಷ್ಟೆ ಸಿಟಾಡೆಲ್ ಇಂಗ್ಲಿಷ್ ವರ್ಷನ್ ಪ್ರೀಮಿಯರ್‌ನಲ್ಲಿ ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟನೆಯ ಸಿಟಾಡೆಲ್ ವೆಬ್ ಸೀರಿಸ್ ಇತ್ತೀಚೆಗಷ್ಟೆ ಲಂಡನ್‌ನಲ್ಲಿ ಪ್ರೀಮಿಯರ್ ಮಾಡಲಾಗಿತ್ತು. ಆಗ ಸಮಂತಾ ಮತ್ತು ಬಾಲಿವುಡ್ ಸ್ಟಾರ್ ಇಬ್ಬರೂ ಹಾಜರಾಗಿದ್ದರು. ರೆಡ್ ಕಾರ್ಪೆಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂವಾದ ನಡೆಸಿದ ಸಮಂತಾ ಈ ಸ್ಪೈ ಥ್ರಿಲ್ಲರ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಬಗ್ಗೆ ಮಾತನಾಡಿದರು. ಆದರೆ ನೆಟ್ಟಿಗರ ಗಮನ ಸೆಳೆದಿದ್ದು ಸಮಂತಾ ಅವರ ಮಾತಿನ ಶೈಲಿ.
ಸಮಂತಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಂತಾ ಮಾತಿಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಸಮಂತಾ ಅವರು ತುಂಬಾ ಇಷ್ಟ ಆದರೆ ಈ ರೀತಿ ಫೇಕ್ ಉಚ್ಚಾರಣೆ ಮಾಡಬಾರದು, ಭಾರತೀಯ ಉಚ್ಚಾರಣೆ ಮಾತನಾಡಬೇಕು' ಎಂದು ಹೇಳಿದರು. ಮತ್ತೋರ್ವ ಕಾಮೆಂಟ್ ಮಾಡಿ, ಈ ಭಾರತೀಯ ನಟರಿಗೆ ಏನಾಗಿದೆ? ಎಂದು ಹೇಳಲಾಗಿದೆ. ವಿದೇಶಕ್ಕೆ ಹೋಗುತ್ತಿದ್ದಂತೆ ಯಾಕೆ ಇಂಥ ಆಕ್ಸೆಂಟ್ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
'ಶಾಕುಂತಲಂ' ಸೋಲಿನ ನಡುವೆಯೂ ಸಮಂತಾ ಸೆಕ್ಸಿ ಪೋಸ್; ವರುಣ್ ಧವನ್ ಜೊತೆಗಿನ ಫೋಟೋ ವೈರಲ್
ಲಂಡನ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ಸಮಂತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಿಟಾಡೆಲ್ ಭಾರತೀಯ ವರ್ಷನ್‌ನಲ್ಲಿ ಸಮಂತಾ ಮತ್ತು ಬಾಲಿವುಡ್ ಸ್ಟಾರ್ ವರುಣ್ ನಟಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ಗೆ ಆಕ್ಷನ್ ಕಟ್ ಹೇಳಿದ್ದ ರಾಜ್ ಮತ್ತು ಡಿಕೆ ಸಿಟಾಡೆಲ್ ಸೀರಿಸ್‌ಗೂ ನಿರ್ದೇಶನ ಮಾಡುತ್ತಿದ್ದಾರೆ.
'ಶಾಕುಂತಲಂ' ಹೀನಾಯ ಸೋಲು: ಭಗವದ್ಗೀತೆಯ ಸಾಲು ಹಂಚಿಕೊಂಡ ನಟಿ ಸಮಂತಾ
ಸಮಂತಾ ಕೊನೆಯದಾಗಿ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾಕುಂತಲಂ ಸಿನಿಮಾ ನಿರೀಕ್ಷೆಯ ಗೆಲುವು ಕಂಡಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಈ ಸಿನಿಮಾ ಬಳಿಕ ತೆಲುಗಿನಲ್ಲಿ ಸಮಂತಾ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಿಟಾಡೆಲ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ.