ಸಿಎಂ ಆದೇಶಕ್ಕೆ ಡೋಂಟ್ ಕೇರ್: ಮಾಸ್ಕ್ ಇಲ್ಲದೆ ಆರೋಗ್ಯ ಮೇಳದಲ್ಲಿ ಅಧಿಕಾರಿಗಳು ಭಾಗಿ
- ಆರೋಗ್ಯ ಮೇಳದಲ್ಲಿ ಸರ್ಕಾರದ ಆದೇಶ ಗಾಳಿಗೆ
- ಸಿಎಂ ಆದೇಶಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಡೋಂಟ್ ಕೇರ್
- ಮಾಸ್ಕ್ ಇಲ್ಲದೆ ವೇದಿಕೆ ಮೇಲೆ ಶಾಸಕರು, ಅಧಿಕಾರಿಗಳ ದರ್ಬಾರ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಸರ್ಕಾರ 4ನೇ ಅಲೆ ತಡೆಗೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶಕ್ಕೂ ನಮಗೂ ಸಂಬಂಧವಿಲ್ಲದಂತೆ ಜನರು ವರ್ತನೆ ಮಾಡುತ್ತಿದ್ದಾರೆ. ಇದರ ನಡುವೆ ಸರ್ಕಾರ ನಿಮಯದ ಬಗ್ಗೆ ಹೇಳುವ ಅಧಿಕಾರಿಗಳೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರದ ಆದೇಶವನ್ನು ಉಲ್ಗಂಘನೆ ಮಾಡಿದ್ದಾರೆ .
ಆರೋಗ್ಯ ಮೇಳದಲ್ಲಿ ಸರ್ಕಾರ ಆದೇಶ ಗಾಳಿಗೆ
ತಜ್ಞ ವೈದ್ಯರ ಸೂಚನೆ ಮೇರೆಗೆ ಕೊರೋನಾ ನಾಲ್ಕನೇ ಅಲೆ ಬರಬಹುದೆಂಬ ಆತಂಕದಲ್ಲಿ ಸರ್ಕಾರ ಸಾರ್ವಜನಿಕ ಪ್ರದೇಶದಲ್ಲಿ ಜನಸಾಮಾನ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಆದೇಶ ಹೊರಡಿಸಿದೆ. ಜನಸಾಮಾನ್ಯರು ಹಾಗೂ ಇತರೆ ಇಲಾಖೆಯವರು ಬೇಡ, ಕಡೇ ಪಕ್ಷ ಆರೋಗ್ಯ ಇಲಾಖೆಯವರಾದರೂ ಮಾಸ್ಕ್ ಹಾಕಿಕೊಳ್ಳಬೇಕಿತ್ತು. ಆದರೆ, ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಆರೋಗ್ಯ ಮೇಳದಲ್ಲಿ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಟಿ.ಡಿ. ರಾಜೇಗೌಡ (Rajegowda), ಡಿಎಚ್ಓ ಉಮೇಶ್ (Umesh) ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ (Jubeda) ಸೇರಿದಂತೆ ಯಾರೊಬ್ಬರು ಮಾಸ್ಕ್ ಹಾಕದೆ ವೇದಿಕೆ ಏರಿದ್ದಾರೆ.
Covid Crisis: ತಮಿಳುನಾಡು, ದಿಲ್ಲಿಯಲ್ಲಿ ಮತ್ತೆ ಕಠಿಣ ನಿರ್ಬಂಧ: ಮಾಸ್ಕ್ ಬಳಕೆ ಕಡ್ಡಾಯ
ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆಯಿಂದಲೇ ನಿಮಯ ಗಾಳಿಗೆ
ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದರೂ ಬಂದಂತವರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಬೇಕಿತ್ತು. ಆದರೆ, ಸಿಬ್ಬಂದಿಗಳು ಮಾಸ್ಕ್ ಹಾಕಿರಲಿಲ್ಲ. ಬಂದವರಿಗೂ ಮಾಸ್ಕ್ ಹಾಕಿ ಎಂದು ಹೇಳಲಿಲ್ಲ. ಕೇವಲ ಸಿಬ್ಬಂದಿಗಳ ಅಷ್ಟೇ ಅಲ್ಲದೆ ಆರೋಗ್ಯ ಮೇಳದ ತಪಾಸಣೆಗೆ ಬಂದಿದ್ದ ವೈದ್ಯರು ಕೂಡ ಮಾತು ಧರಿಸಿರಲಿಲ್ಲ. ರಾಜಕಾರಣಿಗಳು, ಅಧಿಕಾರಿಗಳು, ವೈದ್ಯರು, ಶೂಶ್ರುಕಿಯರು, ಇತರೆ ಸಿಬ್ಬಂದಿಗಳು ಎಲ್ಲರೂ ಕೂಡ ಮಾಸ್ಕ್ ಇಲ್ಲದೆ ಆರೋಗ್ಯ ಮೇಳ ನಡೆಸಿ, ಸರ್ಕಾರದ ಆದೇಶವನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಆರೋಗ್ಯ ಮೇಳದ ಪೋಟೋ ಹಾಕಿ ಕೆಲವರು ವೈರಲ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಮಾಸ್ಕ್ ಹಾಕದ್ದಕ್ಕೆ ದಂಡ ಹಾಕುವ ಸ್ಥಿತಿ ಬಂದಿಲ್ಲ: ಸಚಿವ ಸುಧಾಕರ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಸರ್ಕಾರ 4ನೇ ಅಲೆ ತಡೆಗೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶಕ್ಕೂ ನಮಗೂ ಸಂಬಂಧವಿಲ್ಲದಂತೆ ಜನರು ವರ್ತನೆ ಮಾಡುತ್ತಿದ್ದಾರೆ. ಇದರ ನಡುವೆ ಸರ್ಕಾರ ನಿಮಯದ ಬಗ್ಗೆ ಹೇಳುವ ಅಧಿಕಾರಿಗಳೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರದ ಆದೇಶವನ್ನು ಉಲ್ಗಂಘನೆ ಮಾಡಿದ್ದಾರೆ .
ಆರೋಗ್ಯ ಮೇಳದಲ್ಲಿ ಸರ್ಕಾರ ಆದೇಶ ಗಾಳಿಗೆ
ತಜ್ಞ ವೈದ್ಯರ ಸೂಚನೆ ಮೇರೆಗೆ ಕೊರೋನಾ ನಾಲ್ಕನೇ ಅಲೆ ಬರಬಹುದೆಂಬ ಆತಂಕದಲ್ಲಿ ಸರ್ಕಾರ ಸಾರ್ವಜನಿಕ ಪ್ರದೇಶದಲ್ಲಿ ಜನಸಾಮಾನ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಆದೇಶ ಹೊರಡಿಸಿದೆ. ಜನಸಾಮಾನ್ಯರು ಹಾಗೂ ಇತರೆ ಇಲಾಖೆಯವರು ಬೇಡ, ಕಡೇ ಪಕ್ಷ ಆರೋಗ್ಯ ಇಲಾಖೆಯವರಾದರೂ ಮಾಸ್ಕ್ ಹಾಕಿಕೊಳ್ಳಬೇಕಿತ್ತು. ಆದರೆ, ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಆರೋಗ್ಯ ಮೇಳದಲ್ಲಿ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಟಿ.ಡಿ. ರಾಜೇಗೌಡ (Rajegowda), ಡಿಎಚ್ಓ ಉಮೇಶ್ (Umesh) ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ (Jubeda) ಸೇರಿದಂತೆ ಯಾರೊಬ್ಬರು ಮಾಸ್ಕ್ ಹಾಕದೆ ವೇದಿಕೆ ಏರಿದ್ದಾರೆ.
ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆಯಿಂದಲೇ ನಿಮಯ ಗಾಳಿಗೆ
ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದರೂ ಬಂದಂತವರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಬೇಕಿತ್ತು. ಆದರೆ, ಸಿಬ್ಬಂದಿಗಳು ಮಾಸ್ಕ್ ಹಾಕಿರಲಿಲ್ಲ. ಬಂದವರಿಗೂ ಮಾಸ್ಕ್ ಹಾಕಿ ಎಂದು ಹೇಳಲಿಲ್ಲ. ಕೇವಲ ಸಿಬ್ಬಂದಿಗಳ ಅಷ್ಟೇ ಅಲ್ಲದೆ ಆರೋಗ್ಯ ಮೇಳದ ತಪಾಸಣೆಗೆ ಬಂದಿದ್ದ ವೈದ್ಯರು ಕೂಡ ಮಾತು ಧರಿಸಿರಲಿಲ್ಲ. ರಾಜಕಾರಣಿಗಳು, ಅಧಿಕಾರಿಗಳು, ವೈದ್ಯರು, ಶೂಶ್ರುಕಿಯರು, ಇತರೆ ಸಿಬ್ಬಂದಿಗಳು ಎಲ್ಲರೂ ಕೂಡ ಮಾಸ್ಕ್ ಇಲ್ಲದೆ ಆರೋಗ್ಯ ಮೇಳ ನಡೆಸಿ, ಸರ್ಕಾರದ ಆದೇಶವನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಆರೋಗ್ಯ ಮೇಳದ ಪೋಟೋ ಹಾಕಿ ಕೆಲವರು ವೈರಲ್ ಮಾಡಿದ್ದಾರೆ.
ಸರ್ಕಾರದ ಆದೇಶ ಜನಸಾಮಾನ್ಯರಿಗೆ ಮಾತ್ರನಾ ?
ಅಧಿಕಾರಿಗಳು ಹಾಗೂ ಜನನಾಯಕರ ಈ ನಡೆಯನ್ನು ಕಂಡ ಜನಸಾಮಾನ್ಯರು ಸರ್ಕಾರದ ಆದೇಶ ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತ ಎಂದು ಜನನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜನಸಾಮಾನ್ಯರು ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ಪೊಲೀಸರು ದಂಡ ಪ್ರಯೋಗ ಮಾಡುತ್ತಾರೆ. ಆದರೆ ಇಲ್ಲಿ ಶಾಸಕರು ಹಾಗೂ ಅಧಿಕಾರಿಗಳೇ ಮಾಸ್ಕ್ ಧರಿಸಿಲ್ಲ. ಅವರಿಗೆ ಏಕೆ ದಂಡ ಹಾಕುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಆದೇಶ ಮಾಡಿರುವ ಮಾಸ್ಕ್ ಕಡ್ಡಾಯವೆಂಬ ನಿಯಮ ಬಡಜನರಿಗೆ ಅಷ್ಟೇನಾ ಎಂದು ಪ್ರಶ್ನೆ ಮಾಡಿದ್ದಾರೆ.