ಚಿಕ್ಕಮಗಳೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂ*ಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕಿಯ ತಂದೆ ಮತ್ತು ಅಜ್ಜಿ ಸೇರಿದಂತೆ 12 ಜನರನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು: ತನ್ನ ಮಗಳ ಮೇಲಿನ ಲೈಂ*ಗಿಕ ದೌರ್ಜನ್ಯಕ್ಕೆ ಸಹಕರಿಸಿದ ತಂದೆ, ಅಜ್ಜಿ, ಮಂಗಳೂರಿನ ವ್ಯಕ್ತಿ ಸೇರಿ ಒಟ್ಟು 12 ಆರೋಪಿಗಳನ್ನು ಬಂಧಿಸಿದ ಬೀರೂರು ಠಾಣೆ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ವಾಸಿ ಭರತ್ ಶೆಟ್ಟಿ, ಗಿರೀಶ್ (ಬಾಲಕಿ ತಂದೆ), ನಾಗರತ್ನಮ್ಮ(ಬಾಲಕಿ ಅಜ್ಜಿ) ಸೇರಿ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ.
ಬೀರೂರು ಸಮೀಪದ ನಾಗವಂಗಲದಲ್ಲಿ ತನ್ನ ತಂದೆಯೊಂದಿಗೆ ವಾಸವಾಗಿದ್ದ ಬಾಲಕಿ ಬೀರೂರು ಪಟ್ಟಣದ ಅಂತರಘಟ್ಟಮ್ಮ ದೇವಾಲಯದ ಬಳಿಯ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಅಜ್ಜಿ ನಾಗರತ್ನಮ್ಮ ಮಂಗಳೂರಿನ ಆರೋಪಿ ಭರತ್ ಶೆಟ್ಟಿಯೊಂದಿಗೆ ಮಗಳನ್ನು ಕಳುಹಿಸಿ ಕೊಡುವಂತೆ ಬಾಲಕಿ ತಂದೆ ಗಿರೀಶ್ ಗೆ ಹೇಳಿದ್ದರಿಂದ ಡಿ. 20ರಂದು ಗಿರೀಶ್ ತನ್ನ ಮಗಳು ಮತ್ತು ಭರತ್ ಶೆಟ್ಟಿ ಜೊತೆ ಮಂಗಳೂರಿಗೆ ತೆರಳಿದ್ದಾರೆ.
ತಂದೆಗೆ ಹೇಳಿದ್ರೂ ಪ್ರಯೋಜನ ಆಗಿಲ್ಲ
ಮಂಗಳೂರಿನಲ್ಲಿ ಭರತ್ ಶೆಟ್ಟಿ ಲೈಂಗಿ*ಕವಾಗಿ ತನ್ನನ್ನು ಬಳಸಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಬಾಲಕಿ ತನ್ನ ತಂದೆ ಬಳಿ ಅಳಲುತೋಡಿಕೊಂಡರೂ ಪ್ರಯೋಜನವಾಗಲಿಲ್ಲ. ಅಸಹಾಯಕಳಾದ ಬಾಲಕಿ ನೀಚ ತಂದೆಯಿಂದಾಗಿ ಕೆಲವರಿಂದ ಲೈಂ*ಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಈ ಬಗ್ಗೆ ಬಾಲಕಿ ಮಂಗಳೂರಿಂದ ಹಿಂದಿರುಗಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ಭರತ್ ಶೆಟ್ಟಿಯಿಂದ ಹಣ ಪಡೆದು ಈ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: ಸೈಕಲ್ ಕಲಿಯಲು ಗ್ರೌಂಡ್‌ಗೆ ಬರುವ 13 ವರ್ಷದ ಬಾಲಕನ ಮೇಲೆ ನಿರಂತರ ಲೈಂ*ಗಿಕ ದೌರ್ಜನ್ಯ; 60 ವರ್ಷದ ಕಾಮುಕ ಆಟೋ ಚಾಲಕ ಅರೆಸ್ಟ್!
ಪೋಕ್ಸೋ ಪ್ರಕರಣ ದಾಖಲು
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತರೀಕೆರೆ ಡಿವೈಎಸ್ಪಿ ಪರುಶರಾಮ್ ನೇತೃತ್ವದಲ್ಲಿ ಸಿಪಿಐ ಶ್ರೀಕಾಂತ್ ಮಾರ್ಗದಶರ್ಶನದಲ್ಲಿ ಪಿಎಸೈಗಳಾದ ತಿಪ್ಪೇಶ್ ಹಾಗೂ ಆಪ್ರೀದಿ, ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿಹೇಮಂತ್ ಕುಮಾರ್, ಕೃಷ್ಣಮೂರ್ತಿ, ರಾಜಪ್ಪ, ಬಿ.ಎಚ್. ಶಿವಾನಂದ್. ರನ್ನ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಸದರಿ ತಂಡಕ್ಕೆ ಚಿಕ್ಕಮಗಳೂರು ಪೋಲಿಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಎರಡನೇ ದಿನಕ್ಕೆ ತಾಳಿ ಕಿತ್ತೆಸೆದ ಚಿಕ್ಕಬಳ್ಳಾಪುರದ ಯುವತಿ


