Asianet Suvarna News Asianet Suvarna News

ಕರ್ನಾಟಕದಲ್ಲಿ ಮಾಸ್ಕ್‌ ಹಾಕದ್ದಕ್ಕೆ ದಂಡ ಹಾಕುವ ಸ್ಥಿತಿ ಬಂದಿಲ್ಲ: ಸಚಿವ ಸುಧಾಕರ್‌

*   ಕೋವಿಡ್‌ 4ನೇ ಅಲೆ ತಪ್ಪಿಸಿಕೊಳ್ಳಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು
*  5 ರಿಂದ 12 ವರ್ಷದ ಮಕ್ಕಳಿಗೆ ಸದ್ಯದಲ್ಲೇ ಲಸಿಕೆ
*  ಕೋವಿಡ್‌ ಎಲ್ಲೋ ದೂರದಲ್ಲಿದೆ, ವಿದೇಶದಲ್ಲಿದೆ ಎಂಬ ನಿರ್ಲಕ್ಷ್ಯ ಬೇಡ 

Minister Dr K Sudhakar Reatct on Covid 4th Wave in Karnataka grg
Author
Bengaluru, First Published Apr 23, 2022, 7:38 AM IST

ಮೈಸೂರು(ಏ.23):  ಕೋವಿಡ್‌ 4ನೇ ಅಲೆ(Covid 4th Wave) ತಪ್ಪಿಸಿಕೊಳ್ಳಬೇಕು, ಯಾವುದೇ ತೊಂದರೆ ಆಗಬಾರದು ಎಂದರೆ ಎಲ್ಲರೂ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌(Dr K Sudhakar) ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೆಡೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಎಲ್ಲರೂ ಮಾಸ್ಕ್‌ ಧರಿಸಿ, ಕೋವಿಡ್‌ ಮಾರ್ಗಸೂಚಿ(Covid Guidelines) ಪಾಲಿಸಬೇಕು. ಜನಸಂದಣಿ ಇರುವೆಡೆ, ಕಾರ್ಯಕ್ರಮಗಳಲ್ಲಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸಿ ಎಂದರು.

505 ದಿನ ಕೋವಿಡ್‌ ಹೊಂದಿದ್ದ ಬ್ರಿಟನ್‌ ವ್ಯಕ್ತಿ: ಈತನಿಗೆ ಅತಿ ದೀರ್ಘಕಾಲದ ಪೀಡಿತ ಎಂಬ ‘ಪಟ್ಟ’

ಮಾಸ್ಕ್‌(Mask) ಕಡ್ಡಾಯ ಮಾಡಿ, ದಂಡ ವಿಧಿಸುವ ಪರಿಸ್ಥಿತಿ ರಾಜ್ಯದಲ್ಲಿ ಇನ್ನೂ ಬಂದಿಲ್ಲ. ಆದರೆ, ಕೋವಿಡ್‌ ಎಲ್ಲೋ ದೂರದಲ್ಲಿದೆ, ವಿದೇಶದಲ್ಲಿದೆ ಎಂಬ ನಿರ್ಲಕ್ಷ್ಯ ಬೇಡ. ಆದರೂ ಜನರು ಮಾಸ್ಕ್‌  ಧರಿಸಿಕೊಳ್ಳುವುದು ಒಳಿತು ಎಂದರು.
ವಿದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಮ್ಮ ಜನರು ಸಂಪೂರ್ಣ ಲಸಿಕಾಕರಣಕ್ಕೆ ಒಳಪಡಬೇಕು. ಒಂದನೇ ಡೋಸ್‌ ಪಡೆದಿರುವವರು ಅಸಡ್ಡೆ ಮಾಡದೇ ಎರಡನೇ ಡೋಸ್‌ ಪಡೆದುಕೊಳ್ಳಬೇಕು. ಮೂರನೇ ಡೋಸ್‌ ಪಡೆಯಲು ಅರ್ಹತೆ ಹೊಂದಿರುವವರು ತಡ ಮಾಡದೇ ಲಸಿಕೆ(Vaccine) ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದರು.

5 ರಿಂದ 12 ವರ್ಷದ ಮಕ್ಕಳಿಗೆ ಸದ್ಯದಲ್ಲೇ ಲಸಿಕೆ:

5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಸದ್ಯದಲ್ಲೇ ಕೋವಿಡ್‌ ಲಸಿಕೆ ನೀಡಲಾಗುತ್ತದೆ. ಎಳೆಯ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು(Central Governmnet) ಪೂರಕವಾದ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಈಗಾಗಲೇ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ತಿಳಿಸಿದರು.

Covid Crisis: ತಮಿಳುನಾಡು, ದಿಲ್ಲಿಯಲ್ಲಿ ಮತ್ತೆ ಕಠಿಣ ನಿರ್ಬಂಧ: ಮಾಸ್ಕ್‌ ಬಳಕೆ ಕಡ್ಡಾಯ

ಲಸಿಕೀಕರಣ ಆಗದ ದೇಶಗಳಲ್ಲಿ ಬೇರೆ ಬೇರೆ ಪ್ರಭೇದಗಳಲ್ಲಿ ಕೊರೋನಾ(Coronavirus) ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಂಡರೂ ಸಾವು ನೋವು ಸಂಭವಿಸಿಲ್ಲ. ಇದಕ್ಕೆ ಕಾರಣ ಲಸಿಕೀಕರಣ. ದೇಶದಲ್ಲಿ 185 ಕೋಟಿ ಹಾಗೂ ರಾಜ್ಯದಲ್ಲಿ(Karnataka) 10.5 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಸತತ 2ನೇ ದಿನ ಶೇ.2ಕ್ಕಿಂತ ಅಧಿಕ ಕೊರೋನಾ ಪಾಸಿಟಿವಿಟಿ ದರ

ಬೆಂಗಳೂರು: ರಾಜಧಾನಿಯಲ್ಲಿ (Bengaluru) ಕೊರೋನಾ ಸೋಂಕು (Corona Cases) ಹೊಸ ಪ್ರಕರಣಗಳು ಸತತ ಎರಡನೇ ದಿನ 90ರ ಆಸುಪಾಸಿನಲ್ಲಿ ಮುಂದುವರೆದಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ (Positivity Rate) ಕೂಡಾ ಶೇ.2ಕ್ಕಿಂತ ಹೆಚ್ಚಿದೆ. ನಗರದಲ್ಲಿ ಶುಕ್ರವಾರ 85 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 39 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,520 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3667 ನಡೆದಿದ್ದು, ಪಾಸಿಟಿವಿಟಿ ದರ ಶೇ.2.3 ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು ಆರು ಇಳಿಕೆಯಾಗಿವೆ. (ಗುರುವಾರ 91 ಕೇಸ್‌, ಸಾವು ಶೂನ್ಯ).
 

Follow Us:
Download App:
  • android
  • ios