ನಟನೆಯ ದುಡ್ಡಿನಲ್ಲಿ ಮಾಡಿರುವ ಚಿತ್ರ ಚೌಕಾಬಾರ: ವಿಕ್ರಮ್ ಸೂರಿ
ವಿಕ್ರಮ್ ಸೂರಿ ನಿರ್ದೇಶನದ, ಅವರ ಪತ್ನಿ ನಮಿತಾ ರಾವ್ ನಿರ್ಮಾಣದ ‘ಚೌಕಾಬಾರ’ ಚಿತ್ರ ಮಾ.10ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ವಿಕ್ರಮ್ ಸೂರಿ ಹಾಗೂ ನಮಿತಾ ರಾವ್ ಜೋಡಿಯ ಈ ಚಿತ್ರ ಬಿಡುಗಡೆ ಹೊತ್ತಿನಲ್ಲಿ ವಿಕ್ರಮ್ ಅವರ ಸಂದರ್ಶನ.
ಆರ್. ಕೇಶವಮೂರ್ತಿ
ಯಾವ ರೀತಿಯ ಸಿನಿಮಾ ಇದು?
ಹದಿಹರೆಯದವರ ಸುತ್ತ ಸಾಗುವ ಜೀವನ ಪ್ರೇಮ ಕತೆ. ಈಗಿನ ಯಂಗ್ ಜನರೇಷನ್ ತಪ್ಪದೇ ನೋಡಬೇಕಾದ ಸಿನಿಮಾ ಎಂದು ಹೇಳಬಲ್ಲೆ.
ಕತೆ ಬಗ್ಗೆ ಹೇಳುವುದಾದರೆ?
ನಾಲ್ಕು ಮಂದಿ ಸ್ನೇಹಿತರ ಕತೆ ಇದು. ಜೀವನ ಎಂಬುದು ಚೌಕಾಬಾರ ಇದ್ದಂತೆ. ಹದಿಹರೆಯದ ವಯಸ್ಸಿನಲ್ಲಿ ಎದುರಾಗುವ ಒತ್ತಡಗಳು, ಆಗ ತೆಗೆದುಕೊಳ್ಳುವ ನಿರ್ಧಾರಗಳು, ಅದರಿಂದ ಮುಂದಿನ ಜೀವನದ ಮೇಲೆ ಯಾವ ರೀತಿ ಪರಿಣಾಮಗಳು ಬೀರುತ್ತವೆ ಎಂಬುದನ್ನು ಹೇಳುವ ಕತೆ ಇಲ್ಲಿದೆ.
ಹೆಣ್ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು: ಸಪ್ತಮಿ ಗೌಡ
ಚೌಕಾಬಾರ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?
ಮದುವೆ ಎನ್ನುವುದು ಇಬ್ಬರ ದೇಹಗಳಿಗೆ ಸಂಬಂಧಿಸಿದ್ದಲ್ಲ. ಎರಡು ಕುಟುಂಬಗಳಿಗೆ ಸಂಬಂಧಿಸಿದ ಸಂಭ್ರಮ. ಇವು ಈಗಿನ ಜನರೇಷನ್‌ಗೆ ತುಂಬಾ ಅಗತ್ಯ ಎಂಬುದನ್ನು ಹೇಳುತ್ತಿದ್ದೇವೆ.
ಈ ರೀತಿಯ ಚಿತ್ರಗಳನ್ನು ಜನ ನೋಡುತ್ತಾರೆಯೇ?
ಖಂಡಿತ ನೋಡುತ್ತಾರೆ ಎನ್ನುವ ಭರವಸೆ ಇದೆ. ನಾವು ಹೇಳಿದ ಕತೆಯ ಅಂಶಗಳು ನಿಮಗೆ ಹಳೆಯದು ಅನಿಸಿದರೂ ತೆರೆ ಮೇಲೆ ಹೇಳಿರುವ ರೀತಿ ಹೊಸದಾಗಿದೆ. ಕ್ಲೈಮ್ಯಾಕ್ಸ್ ಮಾತ್ರ ಸೂಪರ್ ಆಗಿದೆ.
ಕಿರುತೆರೆ ಮತ್ತು ಹಿರಿತೆರೆæ ನಡುವಿನ ವ್ಯತ್ಯಾಸ ಏನು?
ಆಗ ನಾವೇ ಪ್ರೇಕ್ಷಕರ ಮನೆ ಮನೆಗೂ ಹೋಗಿ ಮನರಂಜನೆ ಕೊಡುತ್ತಿದ್ವಿ. ಈಗ ಅದೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆಯುತ್ತಿದ್ದೇವೆ. ಅಷ್ಟೇ ವ್ಯತ್ಯಾಸ.
ಕನ್ನಡ ಅಂತ ಶುರುವಾಗಿದ್ದು ಈಗ ನಾಲ್ಕು ಭಾಷೆಗಳಲ್ಲಿ ಬರುತ್ತಿದೆ: ಕಾಶಿಮಾ
ಕಿರುತೆರೆಯ ಯಶಸ್ಸು, ಹಿರಿತೆರೆಯಲ್ಲೂ ಸಿಗುತ್ತಾ?
ಇಲ್ಲಿವರೆಗೂ ನಮ್ಮನ್ನು ಕೈ ಹಿಡಿದಿದ್ದಾರೆ. ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿದ್ದೇವೆ. ಇಲ್ಲೂ ಕೈ ಹಿಡಿಯುತ್ತಾರೆ ಎಂದುಕೊಂಡಿದ್ದೇವೆ. ನಾವು ಕಲಾವಿದರು. ನಟನೆಯಿಂದ ದುಡಿದ ಹಣವನ್ನು ತಂದು ಸಿನಿಮಾ ಮಾಡಿದ್ದೇವೆ. ಇದು ಕಲಾವಿದ ದಂಪತಿಯ ಪ್ರಾಮಾಣಿಕ ಪ್ರಯತ್ನ. ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ.
ಸಿನಿಮಾ ಬಿಡುಗಡೆ ತಯಾರಿ ಹೇಗಿದೆ?
ಮಾ.10ಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೇ ಹೆಚ್ಚು ಬಿಡುಗಡುಗಡೆ ಮಾಡುತ್ತೇವೆ. ಆ ನಂತರ ಮಾಚ್‌ರ್ 24, 25 ಹಾಗೂ 26ಕ್ಕೆ ವಿದೇಶಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಅಲ್ಲಿ ನೆಲೆಸಿರುವ ಕನ್ನಡಿಗರು ನನ್ನ ಮೇಲೆ ಪ್ರೀತಿ ಇಟ್ಟು ನಮ್ಮ ‘ಚೌಕಾಬಾರ’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.