Asianet Suvarna News Asianet Suvarna News

ಕೃಷಿಯ ಮಹತ್ವ ಸಾರುವ ಸಿನಿಮಾ ಕಾಸಿನ ಸರ: ನಂಜುಂಡೇಗೌಡ

ಇಂದು ರಾಜ್ಯಾದ್ಯಂತ ಕಾಸಿನ ಸರ ಸಿನಿಮಾ ಬಿಡುಗಡೆಯಾಗುತ್ತಿದೆ. ಕೃಷಿ ಮಹತ್ವ ಸಾರುವ ಸಿನಿಮಾ ಇದಾಗಿದ್ದು ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೊಣಚ್ಚ ಅಭಿನಯಿಸಿದ್ದಾರೆ. 

Vijay Raghavendra Harshika Poonacha Kasina sara film director Nanjunde gowda exclusive interview vcs
Author
First Published Mar 3, 2023, 8:51 AM IST

ವಿಜಯ್‌ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಎನ್‌ಆರ್‌ ನಂಜುಂಡೇಗೌಡ ನಿರ್ದೇಶನದ ‘ಕಾಸಿನ ಸರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.

ವಿಜಯ್‌ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ ಜೋಡಿಯಾಗಿ ನಟಿಸಿರುವ ‘ಕಾಸಿನ ಸರ’ ಸಿನಿಮಾ ಇಂದು (ಮಾ.3) ತೆರೆಗೆ ಬರುತ್ತಿದೆ. ಎನ್‌ಆರ್‌ ನಂಜುಂಡೇಗೌಡ ನಿರ್ದೇಶಿಸಿರುವ, ಈ ದೊಡ್ಡನಾಗಯ್ಯ ನಿರ್ಮಿಸಿರುವ ಚಿತ್ರವಿದು. ಉಮಾಶ್ರೀ, ನೀನಾಸಂ ಅಶ್ವತ್‌್ಥ, ಸಂಗೀತ, ಸುಧಾ ಬೆಳವಾಡಿ, ಮಂಡ್ಯ ರಮೇಶ್‌, ಅಶ್ವಿನ್‌ ಹಾಸನ್‌ ನಟಿಸಿದ್ದಾರೆ. ಈ ಸಿನಿಮಾ ಕುರಿತು ನಿರ್ದೇಶಕ ನಂಜುಂಡೇಗೌಡ ಮಾತುಗಳು ಇಲ್ಲಿವೆ.

1. ರೈತ, ಭೂಮಿ ಹಾಗೂ ಕೆಮಿಕಲ್‌ ರಹಿತ ಕೃಷಿಯ ಮಹತ್ವ ಸಾರುವ ನಿಟ್ಟಿನಲ್ಲಿ ರೂಪಿಸಿರುವ ಸಿನಿಮಾ. ಕೃಷಿ ಓದಿಕೊಂಡವರು ವಿದೇಶಿ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ಅದೇ ಕೃಷಿ ಪದವೀಧರರು ಕೃಷಿಗಿಳಿದರೆ ಎಂಥ ಕ್ರಾಂತಿ ಮಾಡಕ್ಕೆ ಸಾಧ್ಯ ಎಂಬುದನ್ನು ಹೇಳುವ ಸಿನಿಮಾ ಇದು.

ನಟ ವಿಜಯ್ ರಾಘವೇಂದ್ರ ಅಭಿನಯದ ಕಾಸಿನಸರ ಚಿತ್ರ ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆ

2. ಹೆಚ್ಚಿನ ಇಳುವರಿ ಆಸೆಯಿಂದ ಭೂಮಿಗೆ ಕೆಮಿಕಲ್‌ ಹಾಕುತ್ತಿದ್ದೇವೆ. ಕ್ರಿಮಿನಾಶಕ ಬಳಸಿ ಭೂಮಿಯ ಫಲವತ್ತತೆ ಕೊಲ್ಲುತ್ತಿದ್ದೇವೆ. ಹೈಬ್ರಿಡ್‌ ತಳಿಗಳ ಬೆಳೆಗಳಿಗೆ ಮಾತ್ರ ಭೂಮಿ ಬಳಕೆಯಾಗುವಂತೆ ಮಾಡುತ್ತಿದ್ದಾರೆ. ಇದು ರೈತನನ್ನು ಕೃಷಿಯಿಂದ ದೂರ ಮಾಡುವ ಹುನ್ನಾರ. ಇಂಥ ಹುನ್ನಾರಗಳು ಹೇಗೆ ನಡೆಯುತ್ತವೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.

3. ಜನ ಮೆಚ್ಚಿಕೊಳ್ಳಬಹುದಾದ ಒಳ್ಳೆಯ ಸಿನಿಮಾ ಮಾಡಿರುವ ಖುಷಿ ಇದೆ. ಪ್ರೀಮಿಯರ್‌ ಶೋ ನೋಡಿದ ಬಹುತೇಕರು ಚಿತ್ರದ ಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಪೊಲೀಸ್‌ ಪಾತ್ರಕ್ಕೆ ಬ್ರಾಂಡ್‌ ಮಾಡಿದ್ರೆ ಖುಷಿನೇ: ವಿಜಯ ರಾಘವೇಂದ್ರ

4. ಕೃಷಿಯ ಮೂಲಕ ಕುಟುಂಬ ಹಾಗೂ ಸಂಬಂಧಗಳ ಮಹತ್ವ ಸಾರುವುದು ಈ ಚಿತ್ರದ ವಿಶೇಷತೆ ಮತ್ತು ಹೈಲೈಟ್‌. ಭೂಮಿಯನ್ನು ನಂಬುವ ಯಾವ ಕುಟುಂಬಗಳು ದೂರ ಆಗಲ್ಲ, ಯಾವ ಸಂಬಂಧಗಳು ಕೆಡುವುದಿಲ್ಲ ಎನ್ನುವ ಚಿತ್ರದ ಆಶಯವೇ ‘ಕಾಸಿನ ಸರ’ ಚಿತ್ರದ ಶಕ್ತಿ.

 

Follow Us:
Download App:
  • android
  • ios