Asianet Suvarna News Asianet Suvarna News

ನಟ ವಿಜಯ್ ರಾಘವೇಂದ್ರ ಅಭಿನಯದ ಕಾಸಿನಸರ ಚಿತ್ರ ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆ

ನಟ ವಿಜಯ್ ರಾಘವೇಂದ್ರ ಮತ್ತು ನಟಿ ಹರ್ಷಿಕಾ ಪೂಣಚ್ಚ ನಟಿಸಿರುವ ನೇಟಿವ್ ಕ್ರಿಯೇಷನ್ಸ್ ಬ್ಯಾನರ್ ಅಡಿ  ನಿರ್ಮಾಣವಾಗುತ್ತಿರುವ “ಕಾಸಿನಸರ” ಚಿತ್ರ  ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ 

actor vijay raghavendra and actress harshika poonacha acted  Kaasina Sara  released on march 3rd gow
Author
First Published Feb 24, 2023, 6:04 PM IST

ವರದಿ :ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಫೆ.24): ನಟ ವಿಜಯ್ ರಾಘವೇಂದ್ರ ಮತ್ತು ನಟಿ ಹರ್ಷಿಕಾ ಪೂಣಚ್ಚ ನಟಿಸಿರುವ ನೇಟಿವ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ “ಕಾಸಿನಸರ” ಚಿತ್ರ ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಎನ್.ಆರ್. ನಂಜುಂಡೇಗೌಡ  ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಚಿತ್ರ ಕಾಸಿನಸರ. ಇಲ್ಲಿ ಕಾಸಿನಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು ಇಲ್ಲಿ ಕೃಷಿಭೂಮಿಗೆ ಹೋಲಿಸಲಾಗಿದೆ. ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿದೆ. ಈ ಕುರಿತು ಚಿತ್ರ ಬೆಳಕು ಚೆಲ್ಲಲಿದೆ ಎಂದರು.

ನಾಯಕ ನಟ ವಿಜಯ್ ರಾಘವೇಂದ್ರ ಮಾತನಾಡಿ, ಮನರಂಜನೆಯ ಜೊತೆಯಲ್ಲಿ ಸಮಾಜಕ್ಕೆ ಗಂಭೀರ ವಿಚಾರವನ್ನು ತಿಳಿಸಿಕೊಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ತರಲಾಗಿದೆ ಎಂದರು. ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಜನ ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಹತ್ವವನ್ನು ಸಾರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೇ ಕಾಸಿನಸರ ಎಂದರು. ಕಾಸಿನಸರ ಚಿತ್ರದ ಮೂಲಕ ನಾನು ಗ್ರಾಮೀಣ ಬದುಕು, ಕೃಷಿ, ಹೈನುಗಾರಿಕೆ, ಜಾನಪದ  ಸೇರಿದಂತೆ ಸಾಕಷ್ಟು ಕಲಿತಂತಾಗಿದ್ದು, ಭೂತಾಯಿಯ ಒಡನಾಟವನ್ನು ಬೆಳೆಸಿಕೊಳ್ಳುವ ಅವಕಾಶ ದೊರೆಯಿತು ಎಂದು ತಿಳಿಸಿದರು.

 

ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ನನ್ನ ಕೆರಿಯರ್ ನ ವಿಶೇಷ ಚಿತ್ರ ಇದಾಗಿದೆ. ಇತ್ತೀಚಿನ ಚಿತ್ರಗಳಲ್ಲಿ ಸಂದೇಶ, ಮೌಲ್ಯಗಳು ಇಲ್ಲವಾಗಿದ್ದು, ಮನೋರಂಜನೆಯೇ ಮುಖ್ಯವಾಗಿದೆ. ನಮ್ಮ ಈ ಚಿತ್ರದಲ್ಲಿ ಮನೋರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವೂ ಇದೆ. ಸಾಂಪ್ರದಾಯಿಕ ಕೃಷಿಯ ಕುರಿತು ಬೆಳಕು ಚೆಲ್ಲಲಾಗಿದೆ ಎಂದರು. ಚಿತ್ರದ ನಿರ್ಮಾಪಕರು  ಈ. ದೊಡ್ಡನಾಗಯ್ಯ,  ಎನ್.ಆರ್. ನಂಜುಂಡೇಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದು,  ಚಿತ್ರದಲ್ಲಿ ಉಮಾಶ್ರೀ, ನೀನಾಸಂ ಅಶ್ವತ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೇಗೌಡ, ಮಂಡ್ಯ ರಮೇಶ್ ಅಭಿನಯಿಸಿದ್ದಾರೆ.

ನನಗೆ ನಟನೆ ಗೊತ್ತಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಎಸ್.ಜಿ. ಸಿದ್ಧರಾಮಯ್ಯ ಸಂಭಾಷಣೆ,ಛಾಯಗ್ರಾಹಣ : ಹೆಚ್.ಸಿ.ವೇಣು,
ಸಂಗೀತ: ಶ್ರೀಧರ್ ವಿ ಸಂಭ್ರಮ್
ಸಂಕಲನ: ಸುರೇಶ್ ಅರಸ್,
ನಿರ್ಮಾಣ ವಿನ್ಯಾಸ: ಬಿ.ರಾಮಮೂರ್ತಿ,
ಕಲೆ: ವಸಂತರಾವ್ ಕುಲಕರ್ಣಿ,
ಸಹ ನಿರ್ದೇಶನ: ಕೋಲಾರ ನಾಗೇಶ್,
ನಿರ್ಮಾಣ ನಿರ್ವಹಣೆ: ರವಿಶಂಕರ್  ಹಾಗೂ
ಪಿಆರ್ ಒ ಆಗಿ ನಾಗೇಂದ್ರ ಕಾರ್ಯನಿರ್ವಹಿಸಿದ್ದಾರೆ.

Follow Us:
Download App:
  • android
  • ios