ಆರ್‌ಜಿವಿ ಯಾಕೆ ಬೇಕಿತ್ತು?

ರಾಮ್‌ಗೋಪಾಲ್‌ ವರ್ಮಾ ಒಂದು ಭಾಷೆಗೆ ಸೀಮಿತವಾದ ನಿರ್ದೇಶಕ ಅಲ್ಲ. ಅವರ ಹೆಸರಿನ ಖ್ಯಾತಿಯಿಂದಲೇ ಸಿನಿಮಾ ನೋಡುವ ಪ್ರೇಕ್ಷಕರು ಅವರಿಗೆ ಇದ್ದಾರೆ. ಇನ್ನೂ ನಟ ಉಪೇಂದ್ರ ಅವರು ನಿರ್ದೇಶಕರಾಗಿ ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್‌ ಸೆಟ್‌ ಮಾಡಿದವರು. ಇಬ್ಬರು ಖ್ಯಾತನಾಮರ ಜತೆಗೂಡುವ ಅವಕಾಶ ಇದು. ಜತೆಗೆ ‘ಕಬ್ಜ’ ಪ್ಯಾನ್‌ ಇಂಡಿಯಾ ಸಿನಿಮಾ. ಆ ಕಾರಣಕ್ಕೆ ನಾನು ಅವರಿಂದ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿಸಿದೆ.

ಸ್ಕ್ರೀನ್‌ ಮೇಲೆ ಕಾಣೋದಕ್ಕಿಂತ ತದ್ವಿರುದ್ಧ ನನ್ನ ಉಪ್ಪಿ: ಪ್ರಿಯಾಂಕ ಉಪೇಂದ್ರ

ಆರ್‌ಜಿವಿ ಏನಂದ್ರು?

ಮೈಂಡ್‌ ಬ್ಲೋಯಿಂಗ್‌, ಸೂಪರ್‌. ಈ ಚಿತ್ರವನ್ನು ಎಷ್ಟುಎಷ್ಟುಭಾಷೆಗಳಿಗೆ ತಲುಪಿಸಲು ಸಾಧ್ಯವಾಗುತ್ತದೋ ಅಷ್ಟುಭಾಷೆಗಳಲ್ಲೂ ಬಿಡುಗಡೆ ಮಾಡಿ. ನಾವು ಯಾವ ಹಾಲಿವುಡ್‌ ಚಿತ್ರಗಳಿಗೂ ಕಡಿಮೆ ಇಲ್ಲ. ಮೇಕಿಂಗ್‌ ಅದ್ಭುತವಾಗಿದೆ. ಉಪೇಂದ್ರ ಅವರ ಲುಕ್ಕುಗಳು ಚೆನ್ನಾಗಿವೆ ಎಂದರು. ಜತೆಗೆ ಅವರು ತಮ್ಮ ಮುಂದಿನ ಚಿತ್ರಗಳ ದೃಶ್ಯಗಳನ್ನು ನನಗೆ ತೋರಿಸಿ ಅಭಿಪ್ರಾಯ ಕೇಳುವ ಮಟ್ಟಿಗೆ ನನ್ನ ‘ಕಬ್ಜ’ ಅವರನ್ನು ಪ್ರಭಾವಿಸಿತು. ಈ ಚಿತ್ರದಿಂದ ನನಗೆ ಆರ್‌ಜಿವಿ ಒಳ್ಳೆಯ ಫ್ರೆಂಡಾದ್ರು.

ಪ್ರೇಕ್ಷಕರ ಪ್ರತಿಕ್ರಿಯೆ ಏನು?

ನನ್ನದೇ ಹೆಸರಿನ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಿದ್ದು. ಬಿಡುಗಡೆಯಾದ 48 ಗಂಟೆಗಳಲ್ಲಿ 10 ಲಕ್ಷ ಹಿಟ್ಸ್‌ ಪಡೆದುಕೊಂಡಿದೆ. ಹೊಸ ಯೂಟ್ಯೂಬ್‌ ಚಾನಲ್‌ನಲ್ಲಿ ಇಷ್ಟುದೊಡ್ಡ ಪ್ರಮಾಣದ ವೀಕ್ಷಣೆ ಆಗಿದೆ ಎಂದರೆ ಎಲ್ಲರಿಗೂ ಇಷ್ಟಆಗಿದೆ ಎಂದರ್ಥ

ಸಿನಿಮಾ ಜಾದೂಗಾರ ಉಪೇಂದ್ರ; ಹ್ಯಾಪಿ ಬರ್ತಡೇ ಉಪ್ಪಿ 

ಶೂಟಿಂಗ್‌ ಯಾವಾಗ?

ಇನ್ನೇನು ಶೂಟಿಂಗ್‌ಗೆ ಹೊರಡುತ್ತಿದ್ದೇವೆ. ಬೆಂಗಳೂರಿನ ಕಂಠೀರವ ಹಾಗೂ ಮಿನರ್ವಮಿಲ್‌ನಲ್ಲಿ ಸೆಟ್‌ ಕೆಲಸಗಳು ಅಂತಿಮ ಹಂತದಲ್ಲಿವೆ. ಕಳೆದ ಒಂದು ತಿಂಗಳಿಂದ ಸೆಟ್‌ ವರ್ಕ್ ನಡೆಯುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ ಎರಡೂ ಕಡೆ ಸೆಟ್‌ ಕೆಲಸಗಳು ನಡೆಯುತ್ತಿವೆ. ಇದು ಮುಗಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.

ಇಲ್ಲಿವರೆಗೂ ಎಷ್ಟುಚಿತ್ರೀಕರಣ ಆಗಿದೆ?

ಶೇ.45 ಭಾಗ ಚಿತ್ರೀಕರಣ ಮುಗಿಸಿದ್ದೇನೆ. ಮೂರು ಶೆಡ್ಯೂಲ್‌ ಮುಗಿಸಿ, ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ. ಒಟ್ಟು 50 ದಿನಗಳ ಕಾಲ ಪ್ಲಾನ್‌ ಮಾಡಿಕೊಂಡಿದ್ದೇವೆ. ಪ್ರತಿ ದಿನ 300 ರಿಂದ 500 ಜನ ಚಿತ್ರೀಕರಣದ ಸೆಟ್‌ನಲ್ಲಿ ಇರುತ್ತಾರೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಶೂಟ್‌ ಆಗುತ್ತದೆ. ಉಳಿದಂತೆ ನಾಲ್ಕು ಭಾಷೆಗಳಿಗೆ ಡಬ್‌ ಆಗಲಿದೆ.

"

ಈಗ ಶೂಟಿಂಗ್‌ಗೆ ಯಾರೆಲ್ಲ ಬರಲಿದ್ದಾರೆ?

ಉಪೇಂದ್ರ ಅವರು ಇದ್ದೇ ಇರುತ್ತಾರೆ. ಜತೆಗೆ ಕಬೀರ್‌ಸಿಂಗ್‌ ದುಹಾನ್‌, ಕಾಮರಾಜ್‌, ಜಗಪತಿ ಬಾಬು, ಸುಬ್ಬರಾಜು ಮುಂತಾದವರು ಜತೆಯಾಗಲಿದ್ದಾರೆ. ಮುಂದಿನ ಹಂತದಲ್ಲಿ ಪ್ರಕಾಶ್‌ ರೈ ಅವರು ಜತೆಯಾಗುತ್ತಿದ್ದಾರೆ.

ಮುಂದಿನ ಚಿತ್ರೀಕರಣ ಎಲ್ಲೆಲ್ಲಿ ?

ಮಂಗಳೂರಿನ ಹಾರ್ಬರ್‌, ಪಾಂಡಿಚರಿ, ಮುಂಬಾಯಿನ ಗೇಟ್‌ ವೇ ಆಫ್‌ ಇಂಡಿಯಾ, ಉತ್ತರ ಪ್ರದೇಶ ಹಾಗೂ ಜಾರ್ಕ್ಖಾಂಡ್‌ನಲ್ಲಿ ಶೂಟಿಂಗ್‌ ಮಾಡಲಿದ್ದೇವೆ. ಜತೆಗೆ ಚಿತ್ರದ ಕ್ಲೈಮ್ಯಾಕ್ಸ್‌ ಸೌತ್‌ ಆಫ್ರಿಕಾದಲ್ಲಿ ಮಾಡುವ ಪ್ಲಾನ್‌ ಇದೆ.