- ಉಪೇಂದ್ರ ಅಂದ್ರೆ ಪ್ರಿಯಾಂಕಾಗೆ?

ಪ್ರೀತಿ, ಆತ ನನ್ನ ಆತ್ಮಸಂಗಾತಿ. 20 ವರ್ಷಗಳ ಗೆಳೆತನ ನಮ್ಮದು. ನನ್ನ ಉಪ್ಪಿ ಕೂಲ್‌. ಸದಾ ನಗು ನಗುತ್ತಾ ಇರುವ ಜೊತೆಗಾರ.

ಸಿನಿಮಾ ಜಾದೂಗಾರ ಉಪೇಂದ್ರ; ಹ್ಯಾಪಿ ಬರ್ತಡೇ ಉಪ್ಪಿ

- ಉಳಿದವರಿಗೆ ಗೊತ್ತಿಲ್ಲದ ನಿಮಗೆ ಮಾತ್ರ ಗೊತ್ತಿರುವ ಉಪೇಂದ್ರ ಅವರ ವಿಶೇಷತೆ?

ಅವರು ಸ್ಕ್ರೀನ್‌ ಮೇಲೆ ಜೋರ್‌ ಜೋರಾಗಿ ಡೈಲಾಗ್‌ ಹೊಡೆಯೋದನ್ನು, ರೋಷಾವೇಷದಲ್ಲಿ ಅಬ್ಬರಿಸೋದನ್ನು ನೋಡಿರ್ತೀರಿ. ಆದರೆ ಉಪ್ಪಿ ರಿಯಲ್‌ಲೈಫ್‌ನಲ್ಲಿ ತದ್ವಿರುದ್ಧ. ಬಹಳ ಮೃದು, ಸಂಕೋಚ ಸ್ವಭಾವ. ಏನೇ ಘಟನೆ ನಡೆದರೂ ಅದರ ಪಾಸಿಟಿವ್‌ ಗುಣಗಳನ್ನಷ್ಟೇ ನೋಡ್ತಾರೆ. ಸಿನಿಮಾ ವಿಷಯದಲ್ಲಿ ಅವರು ಪರ್ಫೆಕ್ಷನಿಸ್ಟ್‌. ಬದುಕಲ್ಲಿ ಎಲ್ಲದರೊಂದಿಗೆ ಹೊಂದಾಣಿಕೆ ಮಾಡುತ್ತಾ, ಸಣ್ಣಪುಟ್ಟತಪ್ಪುಗಳಾಗಿದ್ರೂ, ಏನಾಗಲ್ಲ ಅಂತ ಸಮಾಧಾನ ಮಾಡ್ತಾ ಇರೋದು ಅವರ ಸ್ವಭಾವ. ಕೋಪ ಅವರಿಂದ ದೂರ. ತುಂಬ ಫ್ಲೆಕ್ಸಿಬಲ್‌. ಬಹಳ ಸಪೋರ್ಟ್‌ ಮಾಡ್ತಾರೆ.

"

- ಮೆಮೋರೆಬಲ್‌ ಅನಿಸುವ ಘಟನೆ?

ಬಹಳ ಇವೆ. ತೆಲುಗಿನ ‘ರಾ’ ಸಿನಿಮಾಗಾಗಿ ಜೊತೆಯಾಗಿ ಕೆಲಸ ಮಾಡಿದ್ದು ಸ್ವೀಟ್‌ ಮೆಮೊರಿ. ರಾಜಸ್ತಾನ, ಊಟಿ ಮೊದಲಾದೆಡೆಗಳಲ್ಲಿ ಜೊತೆಯಾಗಿ ಶೂಟಿಂಗ್‌ನಲ್ಲಿ ಪಾಲ್ಗೊಂಡದ್ದು, ಮಕ್ಕಳು ಹುಟ್ಟಿದ್ದು ಹೀಗೆ..

- ನೀವು ಅವರನ್ನು ಮಿಸ್‌ ಮಾಡೋದು?

ಅವರು ಶೂಟ್‌ನಲ್ಲಿ ಬ್ಯುಸಿ ಇದ್ದಾಗ ಖಂಡಿತಾ ಮಿಸ್‌ ಮಾಡ್ತೀನಿ. ಮೊದಲಾದ್ರೆ ಶೂಟಿಂಗ್‌ನಲ್ಲಿ ಸಿಕ್ತಿದ್ವಿ. ಮಕ್ಕಳಾದ್ಮೇಲೆ ನಾನು ನನ್ನ ಕೆಲಸದಲ್ಲಿ ಬ್ಯುಸಿ, ಅವರು ಅವರ ಸಿನಿಮಾ ಕಾರ್ಯ, ಪ್ರಜಾಕೀಯ ಅಂತ ಬ್ಯುಸಿ ಮ್ಯಾನ್‌. ಮಿಸ್‌ ಮಾಡಿಯೇ ಮಾಡ್ತೀನಿ.

ಚಿತ್ರರಂಗದಲ್ಲಿ ಡ್ರಗ್ಸ್‌ ವಿಚಾರ ಕೇಳಿ ದಿಗ್ಬ್ರಮೆಯಾಯಿತು: ಉಪೇಂದ್ರ 

ಈ ಸಲದ ಬರ್ತಡೇ ಸ್ಪೆಷಲ್‌?

ಈ ಸಲ ನಾವು ಬೆಂಗಳೂರಿನಿಂದ ಆಚೆ ಕೊಡಗಿಗೆ ಬಂದಿದ್ದೀವಿ. ಇಲ್ಲೇ ಸಿಂಪಲ್‌ ಆಗಿ ಬರ್ತಡೇ ಸೆಲಬ್ರೇಶನ್‌. ಮಕ್ಕಳು ರೆಡ್‌ ವೆಲ್ವೆಟ್‌ ಕೇಕ್‌ಗೆ ಆರ್ಡರ್‌ ಮಾಡಿದ್ದಾರೆ. ನಾವು ಫ್ಯಾಮಿಲಿಯವರು ಮಾತ್ರ ಇಲ್ಲಿದ್ದೇವೆ. ಪ್ರತೀ ಸಲ ಎಲ್ಲೆಲ್ಲಿಂದಲೋ ಅಭಿಮಾನಿಗಳ ಸಾಗರ ಹರಿದು ಬಂದು ಬಹಳ ಸಂಭ್ರಮದಿಂದ ಅವರ ಬತ್‌ರ್‍ ಡೇ ಆಚರಣೆ ನಡೆಯುತ್ತಿತ್ತು. ಇದನ್ನೆಲ್ಲ ನೋಡಲೆಂದೇ ನನ್ನ ಅಪ್ಪ ಕೋಲ್ಕತ್ತಾದಿಂದ ಬರುತ್ತಿದ್ದರು. ಈ ಬಾರಿ ಕೊರೋನಾ ಕಾರಣಕ್ಕೆ ಅದೆಲ್ಲಾ ಇಲ್ಲ. ಆ ಸಂಭ್ರಮವನ್ನು ಮಿಸ್‌ ಮಾಡ್ತಿದ್ದೀವಿ.