ನಿಖಿಲ್ ಕುಮಾರ್ ನಟನೆಯ ವಿಜಯ್‌ಕುಮಾರ್ ಕೊಂಡ ನಿರ್ದೇಶನದ, ಲಹರಿ ಚಂದ್ರು ಮತ್ತು ಸುನೀಲ್ ಗೌಡ ನಿರ್ಮಾಣದ ‘ರೈಡರ್’ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರ್ ಜೊತೆ ಮಾತುಕತೆ.

- ಪ್ರಿಯಾ ಕೆರ್ವಾಶೆ

ರೈಡರ್ ಟೈಟಲ್‌ನಲ್ಲೇ ಜೋಶ್ ಇದೆ, ಹೀರೋ ಹೇಗಿರ್ತಾರೆ?

ಈರೈಡರ್ ಚಿತ್ರದ ಕಾನ್ಸೆಪ್‌ಟ್ ಹುಟ್ಟಿಕೊಂಡಿದ್ದು ವಿಶಿಷ್ಟ ಸನ್ನಿವೇಶದಲ್ಲಿ. ನಾನಾಗ ಊಟಿಯಲ್ಲಿ ‘ಸೀತಾರಾಮ ಕಲ್ಯಾಣ’ ಶೂಟಿಂಗ್‌ನಲ್ಲಿದ್ದೆ. ಆವಾಗ ಕಥೆಯ ಎಳೆ ಹೊಳೆಯಿತು. ಅದನ್ನೇ ಸಿನಿಮಾ ಮಾಡಿದ್ರೆ ಹೇಗೆ ಅಂತಲೂ ಯೋಚ್ನೆ ಮಾಡಿದೆ. ಅಲ್ಲಿದ್ದ
ಲಹರಿ ಸಂಸ್ಥೆಯ ಚಂದ್ರು ಬಳಿ ಹೇಳಿದಾಗ ಅವರು ಎಕ್ಸೈಟ್ ಆದರು. ಬಳಿಕ ನಿರ್ದೇಶಕ ವಿಜಯ್‌ಕುಮಾರ್ ಕೊಂಡ ಅವರನ್ನು
ಸಂಪರ್ಕಿಸಿದೆವು. ಅಲ್ಲಿಂದ ಪ್ರಾರಂಭವಾದ ಜರ್ನಿ ಈ ಚಿತ್ರದ್ದು. ಜೋಶ್‌ಫುಲ್ ಮೊಮೆಂಟ್‌ನಲ್ಲಿ ಹುಟ್ಟಿಕೊಂಡ ಕಥೆ. ಇಡೀ
ಸಿನಿಮಾದ ಬಗ್ಗೆ ಒನ್‌ಲೈನ್ ಹೇಳ್ಬೇಕು ಅಂದರೆ ‘ರೈಡಿಂಗ್ ಆನ್ ದ ಜರ್ನಿ ಆಫ್ ಲವ್’ ಅಂತ ಹೇಳಬಹುದು. ಪ್ರತಿಯೊಂದು
ವರ್ಗಕ್ಕೂ ಕನೆಕ್‌ಟ್ ಆಗುವ ಸಿನಿಮಾ. ನನ್ನ ಹೃದಯಕ್ಕೆ ಹತ್ತಿರ ಇರೋ ಪಾತ್ರ.

ರೈಡರ್‌ನ ಪಾತ್ರ ಈವರೆಗೆ ಮಾಡಿರೋ ಪಾತ್ರಗಳಿಗಿಂತ ಭಿನ್ನವಾಗಿದೆಯಾ ಅಥವಾ ಯಾವುದಾದರೂ ಪಾತ್ರವನ್ನು ಹೋಲುವ ಥರ ಇದೆಯಾ?

ನನ್ನ ಈವರೆಗಿನ ಸಿನಿಮಾ ಜರ್ನಿಯಲ್ಲೇ ಇದು ಹೊಸ ಬಗೆಯ ಪಾತ್ರ. ಪರ್ಫಾರ್ಮೆನ್‌ಸ್ ಮತ್ತು ಪಾತ್ರದ ವಿಷಯಕ್ಕೆ ಬಂದರೆ
ಇದು ನನ್ನ ಫೇವರಿಟ್ ಸಿನಿಮಾಗಳಲ್ಲೊಂದು ಅಂತ ಹೇಳಬಹುದು. ಹೀರೋಯಿನ್ ಕಾಶ್ಮೀರಾ ಅವರ ನಟನೆಯೂ ಚೆನ್ನಾಗಿದೆ. ಇತರ
ಪಾತ್ರವರ್ಗದವರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ.

ಸಿದ್ಧತೆ?

ನನ್ನ ಪಾತ್ರಕ್ಕೆ ಬಾಸ್ಕೆಟ್‌ಬಾಲ್ ದೃಶ್ಯ ಬ್ಯಾಕ್‌ಡ್ರಾಪ್‌ನಂತೆ ಬರುತ್ತೆ. ಇದರಲ್ಲಿ ನಾನೊಬ್ಬ ಬಾಸ್ಕೆಟ್‌ಬಾಲ್ ಪ್ಲೇಯರ್ ಆಗಿರ್ತೀನಿ. ಅದಕ್ಕೆ
ಸ್ವಲ್ಪ ಸಮಯ ಬಾಸ್ಕೆಟ್‌ಬಾಲ್ ಪ್ರಾಕ್ಟೀಸ್ ಮಾಡಿದ್ದೆ.

ರೈಡರ್‌ನಲ್ಲಿರೋ ಸರ್ಪ್ರೈಸ್ ಎಲಿಮೆಂಟ್‌ಗಳೇನು?

ಮುಕ್ತವಾಗಿ ಇದಕ್ಕೆ ಉತ್ತರಿಸಲು ಹೋದರೆ ಕಥೆ ಹೇಳ್ಬೇಕಾಗುತ್ತೆ. ಸಿನಿಮಾದ ಕಥೆ ಕೊಡುವ ಸಪೆರ್ರ್ಸ್ ದೊಡ್ಡದು. ಉಳಿದಂತೆ
ನಾನು ಈವರೆಗೆ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೊಡದೇ ಇರಬಹುದು, ಆದರೆ ಅಬೌವ್ ಆ್ಯವರೇಜ್ ಮಟ್ಟದಲ್ಲಾದರೂ ನನ್ನ ಸಿನಿಮಾಗಳಿವೆ. ಈ ಸಿನಿಮಾವೂ ಜನರ ನಿರೀಕ್ಷೆಯನ್ನು ಹುಸಿ ಮಾಡಲ್ಲ. ಲವ್ ಅನ್ನೋದು ಸಿನಿಮಾದಲ್ಲಿ ಮುಖ್ಯವಾಗಿ ಬರುತ್ತೆ. ಫ್ಯಾಮಿಲಿ ಎಂಟರ್
ಟೈನರ್ ಸಹ ಹೌದು. ಎಮೋಶನ್‌ಗಳನ್ನು ಬಹಳ ಚೆನ್ನಾಗಿ ತಂದಿದ್ದೀವಿ, ಸಂಬಂಧಗಳ ಬಗ್ಗೆ ಹೇಳಿದ್ದೀವಿ. ಫೀಲ್ ಗುಡ್ ಸಿನಿಮಾ ಅಂತ ಹೇಳಬಹುದು. ಪರಿಶುದ್ಧ ಪ್ರೀತಿಯನ್ನು ಈ ಸಿನಿಮಾದಲ್ಲಿ ಕಾಣಬಹುದು.

ಮುಂದಿನ ಸಿನಿಮಾ ಈ ಜಾನರ್‌ನಲ್ಲೇ ಬರುತ್ತಾ?

ಮುಂದಿನ ಸಿನಿಮಾ ಜನವರಿ 18ಕ್ಕೆ ಟೇಕಾಫ್ ಆಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾಡ್ತಿದ್ದೀನಿ. ಕಳೆದ ಆರು ತಿಂಗಳಿಂದ ನಿರ್ದೇಶಕರ ಜೊತೆಗೆ ಈ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಅದರ ಬಗ್ಗೆ ಮುಂದೆ ಮಾತಾಡೋಣ.

ರೈಡರ್‌ನಲ್ಲಿ ಬಹಳ ಇಷ್ಟವಾದ ದೃಶ್ಯ ಅಥವಾ ಹಾಡು?

ಢವಢವ ನನಗಿಷ್ಟದ ಹಾಡು. ಲಕ್ಷಾಂತರ ಜನ ಇದನ್ನು ಇಷ್ಟ ಪಟ್ಟಿದ್ದಾರೆ. 30 ಸಾವಿರ ಜನ ರೀಲ್‌ಸ್ ಮಾಡಿದ್ದಾರೆ.

ನೀವು ರೇವತಿ ಅವರ ಜೊತೆ ಈ ಹಾಡಿಗೆ ಸ್ಟೆಪ್ ಹಾಕಿದ್ರಿ. ಅವ್ರಿಗೂ ಈ ಹಾಡು ಇಷ್ಟನಾ?

ಖಂಡಿತಾ ರೇವತಿ ಅವರಿಗೂ ಈ ಹಾಡು ಬಹಳ ಇಷ್ಟ. ಅವತ್ತು ಪ್ರೊಮೋಶನ್‌ಗೆ ಅಂತ ಹೊರಟಿದ್ದೆ. ಆವಾಗ ಈ ಥರ ರೀಲ್ಸ್
ಮಾಡೋಣ್ವಾ ಅಂತ ಕೇಳಿದೆ, ಒಪ್ಕೊಂಡ್ರು. ಹಾಗಾಗಿ ಆಯ್ತು.

ಅಪ್ಪನಾಗಿ ಲೈಫು ಹೇಗಿದೆ?

ನಮ್ಮದೇ ಹೊಸ ಜೀವನ ಪ್ರಾರಂಭ ಆಗಿದೆ ಅನಿಸುತ್ತೆ. ನ್ಯೂ ಫೇಸ್ ಆಫ್ ಲೈಫ್. ಬಹಳ ಸಂತೋಷದ ದಿನಗಳಿವು. ಮಗು
ಹುಟ್ಟಿದಾಗ ಒಂದಿಡೀ ಕುಟುಂಬದಲ್ಲಿ ಖುಷಿ ಅನ್ನೋದು ಹೇಗೆ ಹಬ್ಬುತ್ತಾ ಹೋಗುತ್ತಲ್ವಾ, ನಮ್ಮನೆಯಲ್ಲೂ ಹಾಗೇ ಇದೆ.

ನಿಖಿಲ್ ಅವರನ್ನು ನೆಕ್‌ಸ್ಟ್ ಲೆವೆಲ್‌ಗೆ ಕೊಂಡೊಯ್ಯುವ ಸಿನಿಮಾ ಅನಿಸುತ್ತಾ?

ಚಿತ್ರದಲ್ಲಿ ಕಂಟೆಂಟ್ ಈಸ್ ದಿ ವಿನ್ನರ್ ಅನಿಸುತ್ತೆ. ಈವರೆಗಿನ ಜರ್ನಿಯಲ್ಲಿ ಇಷ್ಟು ಸ್ಟ್ರಾಂಗ್ ಕಂಟೆಂಟ್ ಇರುವ ಸಿನಿಮಾ ಮಾಡಿರೋದು ಇದೇ ಮೊದಲು. ಹಾಗಾಗಿ ಕಂಟೆಂಟ್ ಮೇಲೆ ಇರುವ ಸಿನಿಮಾ ಇದು.

ರಾಜಕೀಯಕ್ಕಿಂತ ಕಲಾವಿದ ಆಗಿರೋದೇ ನಂಗಿಷ್ಟ ಅಂದ್ರಿ, ರಾಜಕೀಯ ವ್ಯಕ್ತಿಯಾಗಿ ಇರೋದು ಇಷ್ಟ ಇಲ್ವಾ?

ನಾನು ರಾಜಕೀಯದಲ್ಲಿದ್ದಾಗ ಅದಕ್ಕೆ ನ್ಯಾಯ ಸಲ್ಲಿಸುತ್ತೀನಿ, ಸಿನಿಮಾದಲ್ಲಿದ್ದಾಗ ಕಲಾವಿದನಾಗಿ ಪಾತ್ರಕ್ಕೆ ನ್ಯಾಯ ಒದಗಿಸುತ್ತೀನಿ.
ಇಲ್ಲಿ ನೆಗೆಟಿವ್‌ಸ್ ಏನೂ ಇಲ್ಲ. ಈ ಎರಡೂ ಕ್ಷೇತ್ರಗಳಲ್ಲೂ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡ್ತೀನಿ.

ನಿರ್ದೇಶನ, ಸಿನಿಮಾ ನಿರ್ಮಾಣ?

ನಿರ್ದೇಶನ ಕಷ್ಟದ ಕೆಲಸ. ಯಾರ್ಯಾರು ಯಾವ್ಯಾವ ಕೆಲಸ ಮಾಡ್ಬೇಕೋ ಅವನ್ನೇ ಮಾಡಬೇಕು. ಕಂಟೆಂಟ್ ಬೇಸ್ ಇರುವ
ಸಿನಿಮಾ ನಿರ್ಮಾಣದ ಕನಸಿದೆ. ಪ್ರೊಡಕ್ಷನ್ ಹೌಸ್ ಸಹ ರಿಜಿಸ್ಟರ್ ಮಾಡಿಸಿಕೊಂಡಿದ್ದೀನಿ. ಇನ್ನೊಂದು ಸಿನಿಮಾ ಮುಗಿದ ಮೇಲೆ ಆ
ಕೆಲಸ ಕೈಗೆತ್ತಿಕೊಳ್ತೀನಿ.