ಅರೆ ಬಟ್ಟೆಹಾಕಲ್ಲ, ಒತ್ತಡಕ್ಕೆ ಮಣಿಯಲ್ಲ: ಸುಪ್ರೀತಾ ಸತ್ಯನಾರಾಯಣ್
ಪವನ್ ಭಟ್ ನಿರ್ದೇಶನದ, ಅಜಯ್ ರಾವ್ ನಟನೆಯ ಯುದ್ಧಕಾಂಡ ಚಿತ್ರಕ್ಕೆ ಮೈಸೂರಿನ ಹುಡುಗಿ ಸುಪ್ರೀತಾ ಸತ್ಯ ನಾರಾಯಣ್ ನಾಯಕಿ. 'ಲಾಂಗ್ ಡ್ರೈವ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಇದೀಗ ಟಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ.
ಪ್ರಿಯಾ ಕೆರ್ವಾಶೆ
- ಯುದ್ಧಕಾಂಡದಲ್ಲಿ ನಿಮ್ಮ ಪಾತ್ರ?
ಲಾಯರ್ ಪಾತ್ರ. ಅಜಯ್ ರಾವ್ ಅವರ ಪಾರ್ಚ್‌ನರ್, ನಾಯಕಿಯಾಗಿ ನಟಿಸುತ್ತಿದ್ದೇನೆ. ಈ ಕೋರ್ಚ್‌ರೂಮ್ ಡ್ರಾಮಾದ ಕಥೆ ಬಹಳ ಆಸಕ್ತಿಕರವಾಗಿದೆ.
- ಈ ಹಿಂದೆ ಚಿತ್ರತಂಡ ಅರ್ಚನಾ ಜೋಯಿಸ್ ಹೆಸರು ಪ್ರಕಟಿಸಿತ್ತು?
ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಚಿತ್ರೀಕರಣದ ಎರಡು ಶೆಡ್ಯೂಲ್ ಮುಗಿದಿದೆ.
‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!
- ಮೈಸೂರಿನ ಹುಡುಗಿ ಗಾಂಧಿನಗರಕ್ಕೆ ಬಂದಿದ್ದು ಹೇಗೆ?
ಓದಿದ್ದು ಸಾಫ್‌್ಟವೇರ್ ಇಂಜಿನಿಯರಿಂಗ್. ಕ್ಯಾಂಪಸ್ ಸೆಲೆಕ್ಷನ್ ಆಗಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಅದೇ ಟೈಮಲ್ಲಿ ಜನಪ್ರಿಯ ಚಾನೆಲ್ ಒಂದರಲ್ಲಿ ಸ್ಕಿ್ರಪ್‌್ಟರೈಟಿಂಗ್‌ಗೆ ಕಾಲ್‌ಫಾರ್ ಮಾಡಿದ್ದರು. ಅಲ್ಲಿ ನನ್ನ ನೋಡಿದ ಚಾನಲ್ ಮಂದಿ ಸ್ಕಿ್ರಪ್‌್ಟರೈಟಿಂಗ್ ಬದಲಿಗೆ ಆ್ಯಕ್ಟಿಂಗ್‌ಗೆ ಕರೆದರು. ‘ಸೀತಾ ವಲ್ಲಭ’ ಧಾರಾವಾಹಿಯ ನಾಯಕಿಯಾದೆ. ಮುಂದೆ ‘ಲಾಂಗ್ ಡ್ರೈವ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟೆ.
- ಯಾವ ಪಾತ್ರಕ್ಕೂ ಸೈ ಅನ್ನೋರಾ ನೀವು?
ಪಾತ್ರಗಳ ಆಯ್ಕೆ ಬಗ್ಗೆ ನನ್ನದೇ ಮಾನದಂಡಗಳಿವೆ. ಕಥೆ, ತಂಡ ಎಲ್ಲ ನೋಡಿ ನಿರ್ಧರಿಸುತ್ತೀನಿ. ಟೂ ಪೀಸ್, ಬಿಕಿನಿ ಹಾಕಲ್ಲ ಅಂತ ಶುರುವಲ್ಲೇ ಹೇಳ್ತೀನಿ. ಅದನ್ನು ಮೀರಿ ಒತ್ತಡ ಹಾಕಿದರೆ ಖಂಡಿತಾ ಒಪ್ಪಿಕೊಳ್ಳಲ್ಲ.
- ಬೋಲ್ಡ್ ಪಾತ್ರಗಳಾದರೆ?
ಬೋಲ್ಡ್‌ನೆಸ್ ಅನ್ನು ಕಣ್ಣಿನ ಸಣ್ಣ ಚಲನೆಯಲ್ಲಿ, ಮುಖಭಾವದಲ್ಲಿ ತೋರಿಸಬಹುದು. ಅರೆ ಬಟ್ಟೆಯಲ್ಲೇ ತೋರಿಸಬೇಕು ಅಂತಿಲ್ಲ ಅನ್ನೋದು ನನ್ನ ಅಭಿಪ್ರಾಯ. ಬಟ್ಟೆಯಲ್ಲಿ ಬೋಲ್ಡ್‌ನೆಸ್ ಇರಬೇಕು ಅಂದ್ರೆ ಅಂಥ ಪಾತ್ರಗಳಲ್ಲಿ ಮಾಡಲ್ಲ.
- ಸಿನಿಮಾ ರಂಗಕ್ಕೆ ಬಂದ ಹೊಸತರಲ್ಲಿ ನಾಯಕಿಯರಿಗೆ ಇರಿಸು ಮುರಿಸಿನ ಪ್ರಸಂಗಗಳು ಎದುರಾಗುತ್ತವಲ್ವಾ?
ಸ್ಟ್ರಿಕ್ಟ್ ಆಗಿರುತ್ತೇನೆ. ಏನೋ ಮಿಸ್ ಹೊಡೀತಿದೆ ಅಂತನಿಸಿದಾಗ ಸ್ಟ್ರಿಕ್ಟ್ ಆಗಿಯೇ ಪ್ರತಿಕ್ರಿಯೆ ನೀಡುತ್ತೇನೆ. ಹೀಗಾಗಿ ಯಾರೂ ದಾರಿ ತಪ್ಪಿಸುವ ಧೈರ್ಯ ಮಾಡಲ್ಲ.
ಕೊರೋನಾದಿಂದ ಚೇತರಿಕೆ: ಹೈದರಾಬಾದ್ ಚಿತ್ರೀಕರಣದಲ್ಲಿ ಭಾಗಿಯಾದ ನಟಿ ಸುಪ್ರೀತಾ ಸತ್ಯನಾರಾಯಣ್!
- ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದೀರಂತೆ?
ಹೌದು. ಕನ್ನಡಿಗ ನಿರ್ದೇಶಕ ಕೀರ್ತಿ ಅವರು ಅನುಷ್ ಶೆಟ್ಟಿಅವರ ‘ನೀನು ನಿನ್ನೊಳಗೆ ಖೈದಿ’ ಕಾದಂಬರಿ ಆಧರಿಸಿ ‘ಪಯಣಂ’ ಅನ್ನುವ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ನಾನು ನಾಯಕಿ.
- ಮಾಡಿದ್ರೆ ಇಂಥ ಪಾತ್ರ ಮಾಡ್ಬೇಕು ಅಂದುಕೊಂಡಿರೋದು?
ಪೌರಾಣಿಕ, ಐತಿಹಾಸಿಕ ಪಾತ್ರಗಳು. ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಬರುತ್ತವಲ್ಲಾ, ಅಂಥಾ ಪಾತ್ರ ಮಾಡುವ ಕನಸಿದೆ.