ಅರಮನೆ ನಗರಿ ಮೈಸೂರಿನ ಈ ಸುಂದರಿ ಜನರಿಗೆ ಅಚ್ಚುಮೆಚ್ಚು. ತನ್ನ ಚಿಕ್ಕ ವಯಸ್ಸಿನಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿಕೊಂಡು ಬೆಳೆದ ಚೆಲುವೆ ಈಕೆ. ಕಲಾ ಕ್ಷೇತ್ರವೆಂದರೆ ಅಷ್ಟೇ ಅಚ್ಚುಮೆಚ್ಚು.

ಬದುಕು ಬದಲಾಯಿಸಿದ ಬಣ್ಣದ ಲೋಕ:

 

ಓದಿದ್ದು ಇಂಜಿನಿಯರಿಂಗ್ ಆದರೂ ಇವರ ಗಮನ ಸೆಳೆದಿದ್ದು ಬಣ್ಣದ ಲೋಕ. ಕಲಾ ಕ್ಷೇತ್ರದಲ್ಲಿ ಬಾಲ್ಯದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡ ಸುಪ್ರಿತಾ ತಾನು ಬಣ್ಣದ ಜಗತ್ತಿನಲ್ಲಿ ಮಿಂಚುವ ಕನಸನ್ನೂ ಎಂದೂ ಕಂಡವರಲ್ಲ.

‘ಸೀತಾವಲ್ಲಭ’ ಗುಬ್ಬಿಯ ನೀವು ನೋಡಿರದ ಫೋಟೋಗಳಿವು

ಕಥೆ ಹೇಳುವುದು ಹಾಗೂ ಸ್ಕ್ರಿಪ್ಟ್ ಬರೆಯುವುದೆಂದರೆ ಸುಪ್ರಿತಾಗೆ ಸಿಕ್ಕಾಪಟ್ಟೆ ಇಷ್ಟ. ಒಮ್ಮೆ ಸ್ಪರ್ಧೆಯಲ್ಲಿ ಭಾಗವಹಿಸಲು ಹೋದಾಗ ನಿರ್ದೇಶಕರ ಸಲಹೆ ಮೇರೆಗೆ ಕಿರುತೆರೆಗೆ ಆಡಿಶನ್ ನೀಡಿದರು. ಹೇಳಿ ಕೇಳಿ ಕಲಾ ಕ್ಷೇತ್ರದಲ್ಲಿ ಪ್ರವೀಣೆಯಾಗಿರುವ ಸುಪ್ರಿತಾಗೇ ಬಣ್ಣ ಲೋಕದ ಪಯಣ ಸುಲಭವಾಗಿತ್ತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ಅಚ್ಚುವಿನ ಮನದರಸಿಯಾಗಿ ಗುಬ್ಬಿ ಅಲಿಯಾಸ್ ಮೈಥಿಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವಾರು ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಸುಪ್ರಿತಾಗೆ ಸಿನಿಮಾ ಆಫರ್ ಗಳು ಒಲಿದು ಬರುತ್ತಿದ್ದು ಚಾಲೆಂಜಿಂಗ್ ಪಾತ್ರ ಹಾಗೂ ಸೂಪರ್ ಸ್ಟೋರಿಗೆ ಕಾಯುತ್ತಿದ್ದಾರೆ.

ಸುಷ್ಮಾ ಸದಾಶಿವ್

ವಿವೇಕಾನಂದ ಕಾಲೇಜ್, ಪುತ್ತೂರು