ಕೊಲೊಂಬೊ(ಜ.24): ಕೊರೋನಾಗೆ ವಾಮಾಚಾರ ಮದ್ದು. ಈ ಹೇಳಿಕೆ ನೋಡಿದ ತಕ್ಷಣ ಇದು ಭಾರತದ ರಾಜಕಾರಣಿಗಳ ಹೇಳಿಕೆ ಎಂದುಕೊಂಡರೆ ತಪ್ಪು. ಈ ಹೇಳಿಕೆ ನೀಡಿ ಇದೀಗ ಕೊರೋನಾ ವೈರಸ್ ತಗುಲಿಸಿಕೊಂಡಿರುವುದು ಶ್ರೀಲಂಕಾದ ಆರೋಗ್ಯ ಸಚಿವೆ ಪವಿತ್ರ ವನ್ನಿಯಾರ್ಚಿ.

ಕೊರೋನಾ ಸೋಂಕಿತ ಕೆಲಸಕ್ಕೆ ಹಾಜರ್; 300 ನೌಕರರು ಕ್ವಾರಂಟೈನ್, 7 ಸಾವು !.

ಶ್ರೀಲಂಕಾ ಆರೋಗ್ಯ ಸಚಿವೆಯ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕೊರೋನಾ ವೈರಸ್ ಹೊಡೆದೋಡಿಸಲು ವಾಮಾಚಾರ ಹಾಗೂ ಮಾಯ ಜಲ ಮದ್ದು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲ ಕೊರೋನಾ ವಿರುದ್ಧ ವಾಮಾಚಾರ ಹಾಗೂ ಮಯಾಜಲ ಪ್ರಯೋಗಕ್ಕೆ ಅನುಮೋದನೆ ಕೂಡ ನೀಡಿದ್ದರು. ಆದರೆ ಹೇಳಿಕೆ ವಿವಾದಾ ಆಗುತ್ತಲೇ ತೇಪೆ ಹೆಚ್ಚುವ ಕಾರ್ಯ ಮಾಡಿದ್ದರು.

ಮಾಯ ಜಲದಲ್ಲಿ ಜೇನುತುಪ್ಪ ಹಾಗೂ ಜಾಯಿಕಾಯಿ ಇದೆ. ಇದು ಕೊರೋನಾಗೆ ಉತ್ತಮ ಔಷಧಿ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಹೇಳಿಕೆ ನೀಡಿ ನಗೆಪಾಟಲೀಗೀಡಾಗಿದ್ದ ಆರೋಗ್ಯ ಸಚಿವೆಗೆ ಕೊರೋನಾ ದೃಢಪಟ್ಟಿದೆ. ಇದೀಗ ಸಚಿವೆ ಸೆಲ್ಫ್ ಐಸೋಲೇಶನ್‌ಗೆ ಒಳಗಾಗಿದ್ದಾರೆ.

ಸಚಿವೆಯ ಈ ಜೀವ ಜಲ ಔಷಧವನ್ನು ಸ್ವಯಂ ಘೋಷಿದ ದೇವ ಮಾನವ ಹೇಳಿದ್ದಾರೆ. ಇದು ಅತ್ಯಂತ ಪರಿಣಾಮಕಾರಿ ಎಂದಿದ್ದರು. ಸಚಿವೆ ಹೇಳಿಕೆ ಬಳಿಕೆ ಕೆಲಸ ಶಾಸಕರು ಈ ಜೀವ ಜಲ ಪಡೆದು, ಪರಿಣಾಮಕಾರಿಯಾಗಿದೆ ಎಂದು ಒಲೈಕೆ ಮಾಡಿದ್ದರು. ಆದರೆ ಇದೀಗ ಇವರೆಲ್ಲರು ತಲೆತಗ್ಗಿಸುವಂತಾಗಿದೆ.

ಸಚಿವೆಯ ಹೇಳಿಕೆ ಬೆನ್ನಲ್ಲೇ ಶ್ರೀಲಂಕಾ ವೈದ್ಯರು ಈ ರೀತಿಯ ಯಾವುದೇ ಮಾಯ ಜಲ ಅಥವಾ ಜೇನುತಪ್ಪು ಜಾಯಿಕಾಯಿ ಮಿಶ್ರಣ ಕೊರೋನಾಗೆ ಪರಿಣಾಮಕಾರಿ ಅನ್ನೋದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.