ಲಾಕ್ಡೌನ್ ಮುಗಿದಾಕ್ಷಣ ಉಡುಪಿಗೆ ರಕ್ಷಿತ್ ಪಯಣ, ಏಕೀ ತರಾತುರಿ?
ರಕ್ಷಿತ್ ಶೆಟ್ಟಿ ಬೆಂಗಳೂರಲ್ಲಿದ್ದಾರೆ. ಅದು ಎಲ್ಲರಿಗೂ ಗೊತ್ತು. ಆದರೆ ಅವರು ಬೆಂಗಳೂರಲ್ಲಿರುವುದಕ್ಕಿಂತಲೂ ಚಿತ್ರೀಕರಣಕ್ಕೆಂದು ಸುತ್ತಾಡುತ್ತಿದ್ದುದೇ ಹೆಚ್ಚು. ಏನಿಲ್ಲವೆಂದೂ ತಮ್ಮ ತವರು ಉಡುಪಿ ಕಡೆಗೆ ಹೆಜ್ಜೆ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಅಂಥ ರಕ್ಷಿತ್ ಅವರನ್ನು ಕಳೆದ ಎರಡುವರೆ ತಿಂಗಳಿನಿಂದ ರಾಜರಾಜೇಶ್ವರಿ ನಗರದ ಮನೆಯಲ್ಲಿ ಕೂಡಿ ಹಾಕಿದಂತಾದಾಗ ನಿಜಕ್ಕೂ ಅವರ ಪ್ರತಿಕ್ರಿಯೆ ಏನಿತ್ತು? ಒಟಿಟಿ ಫ್ಲಾಟ್ಫಾರ್ಮ್ ಮೂಲಕ ನೇರವಾಗಿ ಚಿತ್ರ ಬಿಡುಗಡೆಗೊಳಿಸುವ ಬಗ್ಗೆ ರಕ್ಷಿತ್ ಅನಿಸಿಕೆ ಏನು ಮೊದಲಾದ ಪ್ರಶ್ನೆಗಳಿಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಸಿಂಪಲ್ ಸ್ಟಾರ್ ನೀಡಿರುವ ನೇರ, ಸ್ಪಷ್ಟ ಉತ್ತರಗಳ ಸಂಗಮ ಇದು.
ರಕ್ಷಿತ್ ಶೆಟ್ಟಿ ಬೆಂಗಳೂರಲ್ಲಿದ್ದಾರೆ. ಅದು ಎಲ್ಲರಿಗೂ ಗೊತ್ತು. ಆದರೆ ಅವರು ಬೆಂಗಳೂರಲ್ಲಿರುವುದಕ್ಕಿಂತಲೂ ಚಿತ್ರೀಕರಣಕ್ಕೆಂದು ಸುತ್ತಾಡುತ್ತಿದ್ದುದೇ ಹೆಚ್ಚು. ಏನಿಲ್ಲವೆಂದೂ ತಮ್ಮ ತವರು ಉಡುಪಿ ಕಡೆಗೆ ಹೆಜ್ಜೆ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಅಂಥ ರಕ್ಷಿತ್ ಅವರನ್ನು ಕಳೆದ ಎರಡುವರೆ ತಿಂಗಳಿನಿಂದ ರಾಜರಾಜೇಶ್ವರಿ ನಗರದ ಮನೆಯಲ್ಲಿ ಕೂಡಿ ಹಾಕಿದಂತಾದಾಗ ನಿಜಕ್ಕೂ ಅವರ ಪ್ರತಿಕ್ರಿಯೆ ಏನಿತ್ತು? ಒಟಿಟಿ ಫ್ಲಾಟ್ಫಾರ್ಮ್ ಮೂಲಕ ನೇರವಾಗಿ ಚಿತ್ರ ಬಿಡುಗಡೆಗೊಳಿಸುವ ಬಗ್ಗೆ ರಕ್ಷಿತ್ ಅನಿಸಿಕೆ ಏನು ಮೊದಲಾದ ಪ್ರಶ್ನೆಗಳಿಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಸಿಂಪಲ್ ಸ್ಟಾರ್ ನೀಡಿರುವ ನೇರ, ಸ್ಪಷ್ಟ ಉತ್ತರಗಳ ಸಂಗಮ ಇದು.
- ಶಶಿಕರ ಪಾತೂರು
ಕೊರೊನಾ ಸಮಸ್ಯೆ ದೂರಾದ ತಕ್ಷಣ ನೀವು ಮಾಡಲಿರುವ ಮೊದಲ ಕೆಲಸ ಯಾವುದು?
ಲಾಕ್ಡೌನ್ ಸಂಪೂರ್ಣವಾಗಿ ಫ್ರೀ ಬಿಟ್ಟೊಡನೆ ಮೊದಲು ನನಗೆ ಉಡುಪಿಗೆ ಹೋಗಬೇಕಿದೆ. ಯಾಕೆಂದರೆ ಊರು, ಮನೆ, ಅಮ್ಮ, ಅಣ್ಣ, ಅಣ್ಣನ ಮಕ್ಕಳು ಹೀಗೆ ತುಂಬ ಮಂದಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಲಾಕ್ಡೌನ್ ದಿನಗಳಿಂದಲು ಮೊದಲೇ ನಾನು ಬೆಂಗಳೂರಿನಲ್ಲಿದ್ದೇನೆ. ಹಾಗಾಗಿ ಊರ ಕಡೆಗೆ ಒಂದು ಸಹಜವಾದ ಭೇಟಿ ನೀಡಲೇಬೇಕಿದೆ. ಅದಕ್ಕೆ ಮೊದಲು ಉಡುಪಿ ಗ್ರೀನ್ ಜೋನ್ ಇದ್ದ ಕಾರಣ ಪ್ರವೇಶವಿಲ್ಲ ಎನ್ನುವವರು, ಬಂದರೆ ಕ್ವಾರಂಟೈನ್ ಮಾಡಬೇಕಾಗುತ್ತದೆ ಎನ್ನುವ ಸಮಸ್ಯೆಗಳು ಮುಗಿದಿರಬೇಕು. ಸದ್ಯಕ್ಕೆ ಇಲ್ಲಿ ಸ್ವಲ್ಪ ಮನೆಯ ರಿನೋವೇಶನ್ ಕೆಲಸಗಳೂ ಇವೆ. ಅದೆಲ್ಲ ಮುಗಿಯುವ ಹೊತ್ತಿಗೆ ಲಾಕ್ಡೌನ್ ಫ್ರೀಯಾಗಿರುತ್ತೆ ಅಂದುಕೊಂಡಿದ್ದೀನಿ.
ನೀವು ಲಾಕ್ಡೌನ್ ಸಮಯವನ್ನು ಹೇಗೆ ಕಳೆದಿರಿ?
ನನಗೆ ಮನೆಯೊಳಗೆ ಕುಳಿತುಕೊಂಡು ಕಾಲ ಕಳೆಯುವುದು ಹೊಸ ವಿಚಾರವೇನಲ್ಲ. `ಸಿಂಪಲಾಗಿ ಒಂದು ಲವ್ ಸ್ಟೋರಿ'ಗೆ ಮೊದಲು ನಾನು ಆ ರೀತಿ ಒಬ್ಬನೇ ಇದ್ದು ಓದುವ, ಬರೆಯುವ ಹವ್ಯಾಸ ಹೊಂದಿದ್ದೆ. ಆದರೆ ಆನಂತರ ಹಾಗೆ ಒಬ್ಬನೇ ಸ್ಕ್ರಿಪ್ಟ್ ಬರೆಯುವ ಕೆಲಸ ಮಾಡಿರಲಿಲ್ಲ. ನನಗೆ ಜತೆಗೆ ತಂಡವಿರುತ್ತಿತ್ತು. ಈ ಕೊರೊನಾ ಲಾಕ್ಡೌನ್ ನನ್ನನ್ನು ಮತ್ತೆ ಆ ಹಳೆಯ ದಿನಗಳತ್ತ ಕರೆದೊಯ್ದಿತು. ಮುಂದೆ ನಾನೇ ನಿರ್ದೇಶಿಸುವ ಯೋಜನೆ ಹಾಕಿರುವಂಥ `ಪುಣ್ಯಕೋಟಿ'ಯ ಚಿತ್ರಕತೆ ಬರೆಯುತ್ತಿದ್ದೆ. ಓದುವುದು ಮತ್ತು ಬರೆಯುವುದರಲ್ಲಿ ತೊಡಗಿಸಿಕೊಂಡಾಗ ನನಗೆ ಸಮಯ ಹೋಗಿದ್ದೇ ಅರಿವಾಗುವುದಿಲ್ಲ. ನಿಮಗೆ ವಿಚಿತ್ರ ಅನಿಸಿದರೂ ಇದು ಸತ್ಯ.
ಹಾಗಾದರೆ ನೀವು ಸಿನಿಮಾ ನೋಡಿ ಕಾಲ ಕಳೆದಿಲ್ಲ ಎಂದಾಯಿತು?
ಹಾಗಂತ ಯಾರು ಹೇಳಿದ್ದು? ಸಿನಿಮಾ, ಮ್ಯೂಸಿಕ್ ಎರಡನ್ನು ಬಿಟ್ಟು ಲೈಫ್ ಕಲ್ಪನೆಯೇ ನನಗೆ ಕಷ್ಟ. ನಿಜ ಹೇಳಬೇಕೆಂದರೆ ಸ್ಕ್ರಿಪ್ಟ್ ಬರೆಯುವಾಗ ಕೂಡ ನಾನು ಮ್ಯೂಸಿಕ್ ಹಾಕಿಕೊಂಡು ಬರೆಯುತ್ತೇನೆ. ಸಿನಿಮಾ ಹೊಸದೇನೂ ನೋಡಿಲ್ಲ. ಈ ಹಿಂದೆ ನೋಡಿದ್ದ ಒಂದಷ್ಟು ಚಿತ್ರಗಳನ್ನೇ ಮತ್ತೊಮ್ಮೆ ನೋಡಿದೆ. ಅವುಗಳಲ್ಲಿ `ಪ್ರೆಸ್ಟೀಜ್', `ಗಾಡ್ ಫಾದರ್' ಮೊದಲಾದ ಹಳೆಯ ಸಿನಿಮಾಗಳು ಮೊದಲ ಬಾರಿ ನಾನು ನೋಡಿದಾಗ ಇದ್ದ ಖುಷಿಯನ್ನೇ ನೀಡಿತು ಎನ್ನುವುದು ವಿಶೇಷ. ಹಾಗೆ ಜನಪ್ರಿಯ ಚಿತ್ರ `ಪಾರಾಸೈಟ್' ಕೂಡ ಇಷ್ಟವಾಯಿತು. ಇನ್ನು ಕೆಲವು ಸ್ನೇಹಿತರು ಒಂದಷ್ಟು ವೆಬ್ ಸೀರೀಸ್ ನೋಡಲು ಸಲಹೆ ನೀಡಿದ್ದರು. ಆದರೆ ನನಗೆ ಅವುಗಳನ್ನು ನಿರಂತರವಾಗಿ ನೋಡಲು ಕಷ್ಟವಾದ ಕಾರಣ ನೋಡಿಲ್ಲ ಅಷ್ಟೇ.
ಓಂ ನೋಡಿ ಬೇಜಾರಾಗಿದ್ದು ಈ ಕಾರಣಕ್ಕೆ
ಥಿಯೇಟರ್ ತೆರೆದೊಡನೆ ಬರಲಿರುವ ನಿಮ್ಮ ಚಿತ್ರ ಯಾವುದು?
ಥಿಯೇಟರ್ ಓಪನಾದೊಡನೆ ನಮ್ಮ ಕಡೆಯಿಂದ `ಭೀಮಸೇನ ನಳಮಹಾರಾಜ' ಸಿನಿಮಾ ಬಿಡುಗಡೆಗೆ ತಯಾರಿದೆ. ಇನ್ನು ನನ್ನ ನಟನೆಯ `ಚಾರ್ಲಿ 777' ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಸಂಪೂರ್ಣವಾಗಿದೆ. ಅದಕ್ಕೆ ಸಂಪೂರ್ಣವಾಗಿ ಕಿರಣ್ ರಾಜ್ ಅವರೇ ಪೂರ್ತಿ ಕತೆ ತಯಾರು ಮಾಡಿದ್ದಾರೆ. ನನಗಂತೂ ತುಂಬಾನೇ ಇಷ್ಟವಾಗಿದೆ. ಅದರದ್ದು ಇನ್ನು 25 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೇರೆ ರಾಜ್ಯದಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಮೇಲೆ ಅದನ್ನು ಶುರು ಮಾಡಬೇಕು. ಅದರ ಬಳಿಕ `ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಹೇಮಂತ್ ರಾವ್ ನಿರ್ದೇಶನ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿದ್ದಗೊಳ್ಳಲಿದೆ. ಅದರ ಬಳಿಕ ತೆನಾಲಿ ಎನ್ನುವ ಡಿಟೆಕ್ಟಿವ್ ಸಿನಿಮಾದ ಪ್ಲ್ಯಾನ್ ಕೂಡ ನಡೆದಿದೆ.
ದರ್ಶನ್ ಜೊತೆ ಸಿನಿಮಾ ಮಾಡುತ್ತೇವೆ: ಶಿವಣ್ಣ
ಸಿನಿಮಾಗಳನ್ನು ನೇರವಾಗಿ ಒಟಿಟಿ ಮೂಲಕ ಬಿಡುಗಡೆಗೊಳಿಸುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು?
ನನಗೆ ಸದ್ಯಕ್ಕೆ ಅಂಥ ಐಡಿಯಾ ಇಲ್ಲ. ಆದರೆ ಥಿಯೇಟರ್ ತೆರೆಯಲು ಇನ್ನಷ್ಟು ಸಮಯ ಇರುವ ಕಾರಣ ನೇರವಾಗಿ ಪ್ರೈಮ್‌ಗೆ ಅಥವಾ ಇನ್ನೊಂದು ಕಡೆ ಕೊಡುವುದು ಅನಿವಾರ್ಯವಾಗುತ್ತದೆ. ಬಡ್ಡಿಗೆ ಸಾಲ ತಂದು ಚಿತ್ರ ಮಾಡುವ ನಿರ್ಮಾಪಕರು ನಾಲ್ಕೈದು ತಿಂಗಳು ಕಾಲ ಕಾಯುವುದು ಕಷ್ಟ. ಇದರ ಬಗ್ಗೆ ಮಲ್ಟಿಪ್ಲೆಕ್ಸ್ ಮಂದಿ ದುಃಖ ವ್ಯಕ್ತಪಡಿಸಿದ್ದು ನೋಡಿದೆ. ಆದರೆ ಅದರಲ್ಲಿ ಅರ್ಥವಿಲ್ಲ. ಯಾಕೆಂದರೆ ಅವರು ಕೂಡ ವ್ಯಾಪಾರವನ್ನೇ ಮಾಡುತ್ತಾ ಬಂದಿದ್ದಾರೆ. ಮೊದಲ ವಾರ ಜನ ಬರದಿದ್ದರೂ, ಇದೊಂದು ಒಳ್ಳೆಯ ಸಿನಿಮಾ ಎನ್ನುವ ಸದಾಶಯದಿಂದ ಎರಡನೇ ವಾರವೂ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಅವರ ಇತಿಸಹಾಸದಲ್ಲಿ ಇಲ್ಲ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಜನ ಬರುತ್ತಿಲ್ಲ ಎನ್ನುವ ಕಾರಣ ನೀಡಿ ಮುಲಾಜಿಲ್ಲದೆ ಥಿಯೇಟರ್‌ನಿಂದ ಕಿತ್ತುಹಾಕುವಾಗ ಅವರ ಇಂಥ ಥಿಂಕಿಂಗ್ ಎಲ್ಲಿ ಹೋಗಿರುತ್ತದೆ? ಪ್ರೇಕ್ಷಕರು ಥಿಯೇಟರಲ್ಲಿ ನೋಡಲು ಬಯಸುವ ಚಿತ್ರಗಳು ಖಂಡಿತವಾಗಿ ಮುಂದೆಯೂ ಚಿತ್ರಮಂದಿರದಲ್ಲೇ ತೆರೆಕಾಣುತ್ತವೆ. ಅದರಲ್ಲಿ ಸಂದೇಹ ಬೇಡ.