ಪ್ರಿಯಾಂಕಾ ಉಪೇಂದ್ರ ಪಶ್ಚಿಮ ಬಂಗಾಲದ ಹುಡುಗಿ. ಕೊಲ್ಕೊತ್ತಾ ಮೂಲದವರು. ಕನ್ನಡದ ಸ್ಟಾರ್ ನಟ ರಿಯಲ್ ಸ್ಟಾರ್ ಉಪೇಂದ್ರ ಕೈ ಹಿಡಿದ ಮೇಲೆ ಕನ್ನಡದವರೇ ಆಗಿಬಿಟ್ಟಿದ್ದಾರೆ. ಕನ್ನಡಿಗರ ಮನೆ ಸೊಸೆಯಾಗಿ ಅವರು ಇಲ್ಲಿನ ಹಬ್ಬಗಳನ್ನು ಖುಷಿಯಿಂದಲೇ ಆಚರಣೆ ಮಾಡುತ್ತಾರೆ. ಹಾಗೆಂದು ಅವರ ಮೂಲ ಸಂಸ್ಕೃತಿಯನ್ನು ಸಂಪೂರ್ಣ ಮರೆತಿದ್ದಾರೆ ಅಂತಲ್ಲ. ಅಲ್ಲಿನ ಹಬ್ಬಗಳನ್ನೂ ಇಷ್ಟೇ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ತನ್ನ ತಂದೆ ತಾಯಿ ಜೊತೆಗೆ ಉಪ್ಪಿ ಫ್ಯಾಮಿಲಿಯನ್ನೂ ಒಳಗೊಳಿಸಿ ಹಬ್ಬದ ಆಚರಣೆ ಮಾಡುತ್ತಾರೆ. 

- ಉಪ್ಪಿ ಅವರನ್ನು ಮದ್ವೆ ಆಗೋ ಮೊದಲು ಯುಗಾದಿ ಹಬ್ಬದ ಬಗ್ಗೆ ಗೊತ್ತಿತ್ತಾ?
ಇಲ್ಲಿ ಯುಗಾದಿ ಅಂತ ಆಚರಿಸೋ ಹಬ್ಬವನ್ನು ನಮ್ಮೂರಲ್ಲಿ ಬೇರೆ ಹೆಸರಲ್ಲಿ ಆಚರಣೆ ಮಾಡ್ತೀವಿ. ನಮ್ಮಲ್ಲಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಪರಂಪರೆ ಇದೆ. ಇದು ಚೈತ್ರಮಾಸದ ಆರಂಭದ ದಿನ. ನಾವು ಚೈತ್ರಮಾಸದ ನವರಾತ್ರಿ ಅಂತ ಆಚರಣೆ ಮಾಡ್ತೀವಿ. ಒಂಭತ್ತು ದಿನಗಳ ಆಚರಣೆ ಅದು. ಒಂಭತ್ತೂ ದಿನಗಳ ಇಡೀ ದಿನ ಉಪವಾಸ ಮಾಡಿ ದೇವಿಯ ಆರಾಧನೆ ಮಾಡುತ್ತಾ ಕಳೆಯುತ್ತೀವಿ. ದುರ್ಗೆಯ ಒಂಭತ್ತು ಅವತಾರಗಳನ್ನು ವಿಶೇಷವಾಗಿ ಪೂಜಿಸುತ್ತೀವಿ. ಹಾಗೆ ನೋಡಿದ್ರೆ ನವರಾತ್ರಿ ವರ್ಷದಲ್ಲಿ ನಾಲ್ಕು ಸಲ ಬರುತ್ತೆ. ಕೊಲ್ಕತ್ತಾದಲ್ಲಿ ವರ್ಷದ ನಾಲ್ಕೂ ನವರಾತ್ರಿಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತೆ. 

- ಯುಗಾದಿ ಹಬ್ಬವನ್ನು ಆಚರಣೆ ಮಾಡಲ್ವಾ?
 ಹೊಸ ವರ್ಷದ ಆರಂಭ ಅದು. ಆಚರಣೆ ಮಾಡದೇ ಇರಕ್ಕಾಗುತ್ತಾ? ಬೆಲ್ಲ ಬೇವು ಹಂಚೋದು ತುಂಬ ಅರ್ಥಪೂರ್ಣ ಅಲ್ವಾ. ಬದುಕಲ್ಲಿ ಕಷ್ಟ ಸುಖ ಎರಡನ್ನೂ ಬೇವು ಬೆಲ್ಲ ಸಂಕೇತಿಸುತ್ತೆ. ಈ ಸಲ ಬೆಲ್ಲವೇ ಹೆಚ್ಚಿರಲಪ್ಪ ಅಂತ ನಾನಂತೂ ಹಾರೈಸ್ತೀನಿ. ಕಳೆದ ಸಲ ಎಷ್ಟು ಕಷ್ಟ ಅನುಭವಿಸಿದ್ವಿ. ಈ ಸಲ ಮನಸ್ಸಿಗೆ ನೆಮ್ಮದಿ ಕೊಡುವಷ್ಟು ಸುಖ ಇರಲಿ. ಆದರೆ ಇನ್ನೊಂದು ಮಾತು, ಬೇವು ಬಾಯಿಗೆ ಕಹಿ ದೇಹಕ್ಕೆ ಉತ್ತಮ ಅಂತಾರಲ್ಲ, ಹಾಗಂತ ಬೇವನ್ನೇ ತಿನ್ನೋಕ್ಕಾಗಲ್ಲ. ಕಷ್ಟಗಳು ಬಂದರೂ ನಮ್ಮ ಮುಂದಿನ ಬದುಕಿಗೆ ಒಳ್ಳೆಯದಾಗುವ ಹಾಗೆ ಇರಬೇಕು. ಬರೀ ಕಷ್ಟದ ಮೇಲೆ ಕಷ್ಟ ಬಂದರೆ ಮನುಷ್ಯ ಮೇಲೇಳೋಕ್ಕಾಗಲ್ಲ. ಒಂಚೂರು ಚೂರೇ ಕಷ್ಟ, ಉಳಿದಂತೆ ಸುಖ ಬರಲಿ ಅಂತ ನಾನು ಹಾರೈಸುತ್ತೀನಿ. 

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಈಕೆ! ...

- ನಿಮ್ಮನೆಯಲ್ಲಿ ಆಚರಣೆ ಇರುತ್ತಾ?
ಹೌದು. ಹಬ್ಬಕ್ಕೂ ಮೊದಲೇ ದೇವರ ಮನೆಯನ್ನು, ಇಡೀ ಮನೆಯನ್ನು ತೊಳೆದು ಕ್ಲೀನ್ ಮಾಡುತ್ತೀವಿ. ದೇವರ ಪೂಜೆ ಮಾಡಿ ನೈವೇದ್ಯ ಮಾಡುತ್ತೀವಿ. ಮನೆಯವರೆಲ್ಲ ಬೇವು ಬೆಲ್ಲ ಹಂಚಿ ಇಂತೀವಿ. ನನ್ನ ಅಪ್ಪ ಅಮ್ಮ ಜೊತೆಗೆ ನಮ್ಮ ಅತ್ತೆ, ಉಪ್ಪಿ ಅವರ ಕ್ಲೋಸ್ ಸರ್ಕಲ್ ಒಂದು ಹತ್ತು ಜನ ಮನೆಯಲ್ಲಿ ಸೇರ್ತೀವಿ. ಸೋ, ತುಂಬ ಖುಷಿ ಇರುತ್ತೆ. ಹೊಸ ಬಟ್ಟೆ ಹಾಕ್ಕೊಂದು ಮನೆಗೂ ನಮಗೂ ಅಲಂಕಾರ ಮಾಡ್ಕೊಂಡು, ಒಳ್ಳೊಳ್ಳೆ ಅಡುಗೆ ಮಾಡ್ಕೊಂಡು ಒಟ್ಟಿಗೇ ಊಟ ಮಾಡೋದು. ಹೌದು, ಈ ದಿನ ಜೊತೆಗೇ ಊಟ ಮಾಡೋದನ್ನು ನಮ್ಮಲ್ಲಿ ಯಾರೂ ಮಿಸ್ ಮಾಡಲ್ಲ. ಎಷ್ಟೋ ವರ್ಷಗಳಿಂದ ನಡ್ಕೊಂಡು ಬಂದಿದೆ. 

ದುರ್ಗೆಯ ಶಕ್ತಿ ವಿಜೃಂಭಿಸಿದೆ : ಪ್ರಿಯಾಂಕಾ ಉಪೇಂದ್ರ 'ಉಗ್ರ ಅವತಾರ' ಚಿತ್ರದ ಹೊಸ ಫೋಟೋ ರಿವೀಲ್‌! ...

- ನಿಮ್ಮ ಫೇವರಿಟ್ ಹಬ್ಬದಡುಗೆ?
ನಿಜ ಹೇಳ್ಬೇಕು ಅಂದ್ರೆ ಹಬ್ಬದ ದಿನ ಅಲಂಕಾರ, ದೇವರ ಪೂಜೆ ಅಂತೆಲ್ಲ ಕೆಲಸದಲ್ಲಿ ಮುಳುಗಿರುತ್ತೀವಲ್ಲ. ಊಟದ ಬಗ್ಗೆ ಹೆಚ್ಚು ಗಮನ ಇರೋದಿಲ್ಲ. ಆದರೂ ನಂಗೆ ಹಬ್ಬದ ದಿನ ಮಾಡೋ ಹೋಳಿಗೆ, ಹೊಸ ಅಕ್ಕಿ ಅನ್ನದ ಊಟ ಎಲ್ಲ ತುಂಬಾ ಇಷ್ಟ. ಮಕ್ಕಳೂ ಬಹಳ ಎನ್‌ಜಾಯ್‌ ಮಾಡ್ತಾರೆ. 
  ಎಲ್ಲ ಕನ್ನಡದ ಜನರಿಗೂ ಹ್ಯಾಪಿ ಯುಗಾದಿ. ಈ ಸಲದ ಯುಗಾದಿ ನಿಮ್ಮ ಬದುಕಲ್ಲಿ ಸಿಹಿಯನ್ನೇ ಹೆಚ್ಚಿಸಲಿ. ಕಹಿ ಇರದೇ ನಿರ್ವಾಹ ಇಲ್ಲ. ಆದರೂ ಕಹಿ ಕಡಿಮೆ ಇರಲಿ ಅಂತ ಆಶಿಸ್ತೀನಿ. 

ಎಲಿಮಿನೇಟ್‌ ಆಗಿದ್ದು ಶಮಂತ್, ಹೊರ ಬರೋದು ವೈಜಯಂತಿ ಅಡಿಗ; ಏನಿದೆ ಗೇಮ್ ಪ್ಲಾನ್? ...