ಇಸ್ಲಮಾಬಾದ್(ಜೂ.29): ಪಾಕಿಸ್ತಾನದ ಸಿಂಧ್‌ ಪ್ರಾಂತ್ಯ ಪಾಕಿಸ್ತಾನ ನಡೆಸುತ್ತಿರುವ ಮತಾಂತರಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಬದಿನ್ ಜಿಲ್ಲೆಯಲ್ಲಿ 102 ಮಂದಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. 

ಟೈಮ್ಸ್ ನೌ ಈ ಸಂಬಂಧ ವರದಿ ಪ್ರಕಟಿಸಿದ್ದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಬದಿನ್ ಜಿಲ್ಲೆಯ ಗೊಲಾರ್ಚಿಯಲ್ಲಿ 102 ಮಂದಿ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡಿದ್ದಾರೆಂದು ತಿಳಿಸಿದೆ. ಅಲ್ಲದೇ ಇಲ್ಲಿನ ದೇವಸ್ಥಾನವೊಂದರಲ್ಲಿದ್ದ ಎಲ್ಲಾ ಪ್ರತಿಮೆಗಳನ್ನು ನಾಶಪಡಿಸಿ, ಇದನ್ನು ಮಸೀದಿಯಾಗಿ ಮಾರ್ಪಾಡು ಮಾಡಲಾಗಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಇಸ್ಲಾಂ ಧರ್ಮಕ್ಕೆ ಗುಡ್‌ ಬೈ ಎಂದ ಮಗಳನ್ನು ಜೀವಂತವಾಗಿ ಸುಟ್ಟಾಕಿದ ಅಪ್ಪ!

ಏನಾಗಿತ್ತು?

ಮೇ 17ರಂದು ತಬ್ಲೀಘಿ ಜಮಾತ್ ತಮಗೆ ಹಿಂಸೆ ಕೊಟ್ಟಿತ್ತು. ತಮ್ಮ ಮನೆಗಳನ್ನು ನಾಶ ಮಾಡಿದ್ದಲ್ಲದೇ ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ ಹಿಂದೂ ಬಾಲಕನನ್ನು ಅಪಹರಿಸಿತ್ತು ಎಂದು ಸಿಂಧ್ ಪ್ರಾಂತ್ಯದ ಹಿಂದೂಗಳು ಆರೋಪಿಸಿದ್ದರು. ಅಲ್ಲದೇ ನುಸುರ್‌ಪುರ, ಮತಿಯಾರ್‌ನಲ್ಲಿ ಭೀಮ್ ಹಿಂದೂಗಳು ಬಲವಂತವಾಗಿ ನಡೆಯುತ್ತಿರುವ ಮತಾಂತರದ ವಿರುದ್ಧ ಪ್ರತಿಭಟಿಸಿದ್ದ ಒಂದು ವಿಡಿಯೋ ಕೂಡಾ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಕೈಯ್ಯಲ್ಲಿ ನಾವು ಸಾಯಲು ಸಿದ್ಧರಿದ್ದೇವೆ ಆದರೆ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ ಎಂಬ ಬೋರ್ಡ್‌ಗಳೂ ಇದ್ದವು. 

ಪಾಕ್ ರಾಜಧಾನಿಯಲ್ಲಿ ನಿರ್ಮಾಣವಾಗಲಿದೆ ಬೃಹತ್ ಕೃಷ್ಣ ದೇವಾಲಯ

ಇನ್ನು ಇಸ್ಲಲಾಂಗೆ ಮತಾಂತರಗೊಳ್ಳದಿದ್ದರೆ ಮನೆ ಕೊಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆಂದು ಈ ಪ್ರತಿಭಟನೆಯಲ್ಲಿ ಪಾಲ್ಗಂಡಿದ್ದ ಮಹಿಳೆ ಕಣ್ಣೀರಿಡುತ್ತಾ ವಿವರಿಸಿದ್ದರು. ಆದರೀಗ ಇದರ ಬೆನ್ನಲ್ಲೇ ಮತಾಂತರಗೊಳಿಸಿರುವ ಸುದ್ದಿ ಸದ್ದು ಮಾಡಿದೆ.

ಇನ್ನು ಪಾಕಿಸ್ತಾನದ ಸಿಂಧ್ ಹಾಗೂ ಪಂಜಾಬ್‌ ಪ್ರಾಂತ್ಯದಲ್ಲಿ ಹಿಂದೂ ಹಾಗೂ ಕ್ರಿಚಶ್ಚಿಯನ್ನರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸುವ ಸುದ್ದಿ ಯಾವತ್ತೂ ಕೇಳಿ ಬರುತ್ತವೆ.