ನಾನು ಈಗ ನಟಿಸಿರುವ ‘ಮನದ ಕಡಲು’ ರೀತಿಯ ಪಾತ್ರ ಮಾಡುವಾಸೆ ಇತ್ತು. ಅದು ಈಡೇರಿದೆ. ಸಿನಿಮಾ ಪೂರ್ತಿ ಸ್ಟೋರಿ ಕ್ಯಾರಿ ಮಾಡುವ ಪಾತ್ರ ಮಾಡಬೇಕು. ಚಿತ್ರರಂಗದ ದಿಕ್ಕನ್ನೇ ಬದಲಾಯಿಸುವ ಸಿನಿಮಾಗಳಲ್ಲಿ ನಟಿಸುವಾಸೆ ಎಂದರು ನಟಿ ಅಂಜಲಿ ಅನೀಶ್.

ಆರ್‌.ಕೇಶವಮೂರ್ತಿ

* ನಿಮ್ಮ ಪರಿಚಯ
ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ನಮ್ಮದು ವಕೀಲರ ಕುಟುಂಬ. ಅಂದರೆ ನನ್ನ ಅಮ್ಮ, ಅಪ್ಪ, ಅಣ್ಣ ಲಾಯರ್‌ಗಳೇ. ನಾನೂ ಕೂಡ ಲಾ ಓದಿದ್ದೇನೆ. ನಾನು ಚಿತ್ರರಂಗಕ್ಕೆ ಬಂದಿದ್ದು ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ.

* ಮೊದಲ ಚಿತ್ರದ ನಂತರ ಹೆಚ್ಚು ಕಾಣಿಸಿಕೊಂಡಿಲ್ಲವಲ್ಲಾ?
‘ಪದವಿ ಪೂರ್ವ’ ಚಿತ್ರದಲ್ಲಿ ನಟಿಸುವಾಗ ನಾನು ಓದುತ್ತಿದ್ದೆ. ಆ ಸಿನಿಮಾ ಮುಗಿದ ಮೇಲೆ ಓದು ಕಂಪ್ಲೀಟ್‌ ಮಾಡಬೇಕಿತ್ತು. ಹೀಗಾಗಿ ನಟನೆಯಿಂದ ಗ್ಯಾಪ್‌ ತೆಗೆದುಕೊಂಡೆ. ಲಾ ಪದವಿ ಮುಗಿಸಿಕೊಂಡ ಮೇಲೆ ‘ಮನದ ಕಡಲು’ ಚಿತ್ರದ ಬಂದಿದ್ದೇನೆ.

ಅಂದು 'ಮುಂಗಾರು ಮಳೆ'.. ಇಂದು 'ಮನದ ಕಡಲು': ಮಾ.7ಕ್ಕೆ ಯೋಗರಾಜ ಭಟ್ಟರ ಸಿನಿಮಾದ ಟೈಟಲ್‌ ಟ್ರ್ಯಾಕ್‌ ರಿಲೀಸ್

* ‘ಮನದ ಕಡಲು’ ಚಿತ್ರಕ್ಕೆ ನಾಯಕಿ ಹೇಗೆ?
ಯೋಗರಾಜ್‌ ಭಟ್‌ ಅವರು ಸಿನಿಮಾ ಮಾಡುತ್ತಿದ್ದಾರೆಂದು ಗೊತ್ತಾಗಿ ನಾನೇ ಕೇಳಿಕೊಂಡು ಹೋಗಿ ಆಡಿಷನ್‌ ಕೊಟ್ಟೆ. ಎರಡು ಬಾರಿ ರಿಜೆಕ್ಟ್‌ ಕೂಡ ಆದೆ. ಯಾಕೆಂದರೆ ಪಾತ್ರ ಅಷ್ಟು ಡಿಫರೆಂಟ್‌ ಆಗಿತ್ತು. ದೊಡ್ಡ ದೊಡ್ಡ ನಟಿಯರು ಆಡಿಷನ್‌ ಕೊಟ್ಟು ಹೋಗಿದ್ದರು. ಯಾರೂ ಸೆಲೆಕ್ಟ್‌ ಆಗಿರಲಿಲ್ಲ. ಕೊನೆಗೆ ನಮ್ಮ ಚಿತ್ರದ ನಾಯಕ ಸುಮುಖ್‌ ಸೇರಿದಂತೆ ಇಡೀ ಚಿತ್ರತಂಡ ಹೇಳಿದ ಮೇಲೆ ಮತ್ತೊಮ್ಮೆ ಆಡಿಷನ್‌ ಮಾಡಿದ ನಂತರ ಯೋಗರಾಜ್‌ ಭಟ್‌ ಅವರು ಕನ್ವಿನ್ಸ್‌ ಆಗಿ ನನ್ನ ನಾಯಕಿನ್ನಾಗಿ ಸೆಲೆಕ್ಟ್‌ ಮಾಡಿಕೊಂಡರು.

* ಈ ಚಿತ್ರದಲ್ಲಿ ಯಾವ ರೀತಿಯ ಪಾತ್ರ ನಿಮ್ಮದು?
ಆರ್ಕಾಲಜಿಸ್ಟ್ ಆಗಿರುತ್ತೇನೆ. ತುಂಬಾ ಯೂನಿಕ್‌ ಆಗಿರುವ ಕ್ಯಾರೆಕ್ಟರ್‌. ಕೆಲಸದ ಬಗ್ಗೆ ಆಸೆ, ವಿಶ್ವಾಸ, ಪ್ರೀತಿ ಇರುವ ಪಾತ್ರ. ಸ್ಟ್ರಾಂಗ್‌ ಹಾಗೂ ಎಮೋಷನ್‌ನಿಂದ ಕೂಡಿರುತ್ತದೆ. ಸೆಕೆಂಡ್‌ ಹಾಫ್‌ ಬೇರೆ ರೀತಿ ಜರ್ನಿ ಇದೆ.

* ಚಿತ್ರದ ಕತೆ ಬಗ್ಗೆ ಹೇಳುವುದಾದರೆ?
ಇಟ್ಸ್‌ ನಾಟ್‌ ಲವ್‌ ಸ್ಟೋರಿ ಸಿನಿಮಾ. ಇಟ್ಸ್‌ ಎಬೌಟ್‌ ಲವ್‌. ಆಗಿನ ಜನರೇಷನ್‌ಗೆ ‘ಮುಂಗಾರು ಮಳೆ’ ಸಿನಿಮಾ ಇದ್ದಂತೆ, ಈಗಿನ ಜನರೇಷನ್‌ಗೆ ‘ಮನದ ಕಡಲು’ ಸಿನಿಮಾ.

* ನಿಮಗೆ ಯಾವ ರೀತಿಯ ಸಿನಿಮಾಗಳು ಇಷ್ಟ?
ಕಮರ್ಷಿಯಲ್‌ ಎಂಟರ್‌ಟೈನ್‌ಮೆಂಟ್‌ ಹಾಗೂ ಎಮೋಷನ್‌ ಸಿನಿಮಾಗಳು ಇಷ್ಟ. ನಾವು ಸಿನಿಮಾ ನೋಡೋದೇ ನಮ್ಮ ಲೈಫ್‌ನಿಂದ ಒಂದಿಷ್ಟು ಸಮಯ ಎಸ್ಕೇಪ್‌ ಆಗಲು. ಹೀಗಾಗಿ ಮನರಂಜನೆ ಮುಖ್ಯ. ನಾನು ಇತ್ತೀಚೆಗೆ ನೋಡಿ ಇಷ್ಟಪಟ್ಟಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ನನ್ನದೇ ನಟನೆಯ ‘ಮನದ ಕಡಲು’ ಚಿತ್ರಗಳು.

* ಎಂಥ ಪಾತ್ರಗಳನ್ನು ಮಾಡುವಾಸೆ?
ನಾನು ಈಗ ನಟಿಸಿರುವ ‘ಮನದ ಕಡಲು’ ರೀತಿಯ ಪಾತ್ರ ಮಾಡುವಾಸೆ ಇತ್ತು. ಅದು ಈಡೇರಿದೆ. ಸಿನಿಮಾ ಪೂರ್ತಿ ಸ್ಟೋರಿ ಕ್ಯಾರಿ ಮಾಡುವ ಪಾತ್ರ ಮಾಡಬೇಕು. ಚಿತ್ರರಂಗದ ದಿಕ್ಕನ್ನೇ ಬದಲಾಯಿಸುವ ಸಿನಿಮಾಗಳಲ್ಲಿ ನಟಿಸುವಾಸೆ.

* ಯಾವ ನಿರ್ದೇಶಕರ ಚಿತ್ರಗಳಲ್ಲಿ ನಟಿಸುವ ಕನಸು ಇದೆ?
ಹೇಮಂತ್‌ ರಾವ್‌, ಶಶಾಂಕ್‌, ಎ ಪಿ ಅರ್ಜುನ್‌, ಪ್ರಶಾಂತ್‌ ನೀಲ್‌, ರಿಷಭ್‌ ಶೆಟ್ಟಿ.... ಹೀಗೆ ಹಲವು ನಿರ್ದೇಶಕರ ಜತೆಗೆ ಕೆಲಸ ಮಾಡುವ ಕನಸು ಇದೆ.

* ಯೋಗರಾಜ್‌ ಭಟ್‌ ಅವರ ಜತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ತುಂಬಾ ಚೆನ್ನಾಗಿತ್ತು. ಮತ್ತೆ ಇಂಥ ಒಳ್ಳೆಯ ಡೈರೆಕ್ಟರ್‌ ಸಿಕ್ತಾರೆ ಇಲ್ವೋ ಎನ್ನುವಷ್ಟು ಕಂಫೋರ್ಟ್‌ ಮೂಡಿಸಿದ ನಿರ್ದೇಶಕರು. ಮಕ್ಕಳ ರೀತಿ ನಮ್ಮನ್ನು ನೋಡಿಕೊಂಡರು. ಯಾವುದಕ್ಕೂ ಕಡಿಮೆ ಮಾಡಿಲ್ಲ.

ಮಾ.23ರಂದು ಈ ಒಂದು ಕಾರಣಕ್ಕೆ ಬೆಂಗಳೂರಿನ ಲುಲ್ ಮಾಲ್‌ಗೆ ಬರ್ತಾರೆ ರಾಕಿಂಗ್‌ ಸ್ಟಾರ್‌ ಯಶ್‌!

* ಹೀರೋಗಳ ಮೇಲೆ ನಿಮಗೆ ಕ್ರಶ್‌ ಆಗಿದುಂಟಾ?
ಹೌದು. ಚಿತ್ರರಂಗಕ್ಕೆ ಬರುವ ಮೊದಲು ನನ್ನ ಕ್ರಶ್‌ ನಟ ಯಶ್‌ ಅವರು. ಈಗ ಕ್ರಶ್‌ ಜತೆಗೆ ನಾನು ಅವರ ಅಭಿಮಾನಿ ಕೂಡ.