ಯೋಗರಾಜ್ ಭಟ್‌ ನಿರ್ದೇಶನದ ‘ಮನದ ಕಡಲು’ ಚಿತ್ರದ ಶೀರ್ಷಿಕೆ ಗೀತೆ ಮಾ.7ರಂದು ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ಸೋನು ನಿಗಮ್‌ ಹಾಡಿದ್ದಾರೆ. 

ಯೋಗರಾಜ್ ಭಟ್‌ ನಿರ್ದೇಶನದ ‘ಮನದ ಕಡಲು’ ಚಿತ್ರದ ಶೀರ್ಷಿಕೆ ಗೀತೆ ಮಾ.7ರಂದು ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು ಸೋನು ನಿಗಮ್‌ ಹಾಡಿದ್ದಾರೆ. ಈ ಸಿನಿಮಾ ಮೂಲಕ ಯೋಗರಾಜ ಭಟ್ಟರು ಕಡಲನ್ನು ಒಂದು ರೂಪಕವಾಗಿ ಇಟ್ಟುಕೊಂಡು ಹೊಸ ಕಾಲದ ತರುಣ, ತರುಣಿಯರ ಕತೆ ಹೇಳುತ್ತಿದ್ದಾರೆ. ರಂಗಾಯಣ ರಘು, ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮುಖ, ರಾಶಿಕಾ ಶೆಟ್ಟಿ ಹಾಗೂ ಅಂಜಲಿ ನಾಯಕ, ನಾಯಕಿಯರಾಗಿ ನಟಿಸಿರುವ ಈ ಸಿನಿಮಾ ಮಾ.28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಚಿತ್ರತಂಡ ಪ್ರಚಾರದಲ್ಲಿ ನಿರತವಾಗಿದೆ. ಈ. ಕೃಷ್ಣಪ್ಪ ನಿರ್ಮಾಪಕರಾಗಿರುವ ಈ ಚಿತ್ರದ ನಿರ್ಮಾಣದಲ್ಲಿ ಜಿ.ಗಂಗಾಧರ್ ಕೂಡಾ ಸಾಥ್ ನೀಡಿದ್ದಾರೆ.

ಭಟ್ಟರ ಗರಡಿಯಲ್ಲಿ ಹೊಸ ಹುಡುಗಿ: ಸಿನಿಮಾ ಕನಸು ಬಹಳ ಮಂದಿಗೆ ಇರುತ್ತದೆ. ಆದರೆ ಸೂಕ್ತ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಅಂಥಾ ಒಂದು ಉತ್ತಮ ಅವಕಾಶ ಗಳಿಸಿರುವುದು ಚಿಕ್ಕಮಗಳೂರು ಹುಡುಗಿ ರಾಶಿಕಾ ಶೆಟ್ಟಿ. ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ. ಕೃಷ್ಣಪ್ಪ ಬಹು ವರ್ಷಗಳ ನಂತರ ಜೊತೆಗೂಡಿ ಮಾಡುತ್ತಿರುವ ‘ಮನದ ಕಡಲು’ ಚಿತ್ರದಲ್ಲಿ ರಾಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿಯೇ ಒಂದು ಉತ್ತಮ ವೇದಿಕೆಯನ್ನು ಗಳಿಸಿದ್ದಾರೆ.ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರುವ ರಾಶಿಕಾ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ನಂತರ ಚಿತ್ರರಂಗಕ್ಕೆ ಆಗಮಿಸಬೇಕು ಎಂದು ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ‘ಮನದ ಕಡಲು’ ಅವಕಾಶ ದೊರೆತಿದೆ.

ನಮ್ಮೂರ ಹುಚ್ಚ ಅಲೀಮನಿಂದ ಹುಟ್ಟಿದ ಹಾಡು 'ತುರ್ರಾ': ನಿರ್ದೇಶಕ ಯೋಗರಾಜ ಭಟ್‌

‍‘ಈ ಸಿನಿಮಾದಲ್ಲಿ ಕ್ರಿಕೆಟ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಚಿತ್ರದಲ್ಲಿಯೇ ಯೋಗರಾಜ ಭಟ್ ಸರ್ ಜೊತೆ ಕೆಲಸ ಮಾಡುವ ಅವಕಾಶ ದೊರೆತಿದ್ದು ನನ್ನ ಅದೃಷ್ಟ. ಚಿಕ್ಕಂದಿನಲ್ಲಿ ತನನಂ ತನನಂ ಚಿತ್ರದ ಡಾನ್ಸೊಂದರಲ್ಲಿ ನಾನೂ ಡಾನ್ಸ್ ಮಾಡಿದ್ದೆ. ಈಗ ಈ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ಸಂತಸ ತಂದಿದೆ’ ಎನ್ನುತ್ತಾರೆ ರಾಶಿಕಾ. ಈ ಮಧ್ಯೆ ಮತ್ತೊಂದು ಹೊಸಬರ ಸಿನಿಮಾವನ್ನೂ ಒಪ್ಪಿಕೊಂಡಿರುವ ಈ ಚಿಕ್ಕಮಗಳೂರಿನ ಹುಡುಗಿ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಇಟ್ಟುಕೊಂಡಿದ್ದಾರೆ.

ಕಡಲ ಮುಂದೆ ನಿಂತರೆ ಕುಗ್ಗಿದಂಥಾ ಭಾವ: ‘ಮುಂಗಾರು ಮಳೆ ಸಿನಿಮಾ ಬಳಿಕ ನಿರ್ಮಾಪಕ ಕೃಷ್ಣಪ್ಪ ಆಗಾಗ ಸಿಕ್ತಾ ಇದ್ರು. ಸಿನಿಮಾ ಮಾಡುವ ಮಾತು ಬಂದು ಹೋಗ್ತಿತ್ತು. ಕೋವಿಡ್‌ ನಂತರ ಸಿಕ್ಕಾಗಲೊಮ್ಮೆ, ಒಮ್ಮೆ ನಾವು ತಿರಗಾ ಹೊಡೀಬೇಕು. ನಂಗೆ ಹೊಸ ಕುದುರೆ ಮೇಲೆ ಬಾಜಿ ಕಟ್ಟೋದು ಇಷ್ಟ ಅಂದ್ರು. ಅದು ಮಜಾ ಇರುತ್ತೆ ಅಂತ ನಂಗೂ ಅನಿಸಿತು.’ ಹೀಗಂದಿದ್ದು ನಿರ್ದೇಶಕ ಯೋಗರಾಜ ಭಟ್‌ .

ದೀರ್ಘ ಬ್ರೇಕ್‌ ಬಳಿಕ ಶಿವಣ್ಣ ಶೂಟಿಂಗ್‌ಗೆ ಹಾಜರ್‌: ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಟ್ರೆಂಡಿಂಗ್‌

ಈ ವೇಳೆ ಭಟ್ಟರು, ‘ಹೊಸಬರ ಜೊತೆ ಜರ್ನಿ ಮಾಡುವಾಗ ಹೊಸ ಜನರೇಶನ್‌ನ ನಾಡಿಮಿಡಿತ ತಿಳಿಯೋ ಪ್ರಯತ್ನ ಮಾಡ್ತೀನಿ. ಅವರ ಅವಶ್ಯಕತೆಗಳೇನು, ಅವರು ಯಾಕೆ ನಗ್ತಾರೆ, ಯಾವುದು ಅವರಿಗೆ ಬೋರ್‌ ಹೊಡೆಸುತ್ತೆ, ಅವರ ಲಿಬಿಡೋ, ಅವರಿಗೆ ಕಿಕ್‌ ಕೊಡೋ ವಿಚಾರಗಳೇನು ಅನ್ನೋದನ್ನೆಲ್ಲ ಅರಿಯೋ ಪ್ರಯತ್ನ ಮಾಡ್ತೀನಿ. ಈ ವಿಚಾರದಲ್ಲಿ ನಮ್ಮ ಸಿನಿಮಾದ ನಾಯಕ, ನಾಯಕಿಯರಿಂದ ಸಾಕಷ್ಟು ಕಲಿತಿದ್ದೇನೆ. ಅವರು ರೊಚ್ಚಿನಿಂದ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಆದಿವಾಸಿ ಭಾಷೆ ಕ್ರಿಯೇಟ್‌ ಮಾಡಿದ್ದೀವಿ. ಇದು ನಾವೇ ರೀಸರ್ಚ್‌ ಮಾಡಿ ತಯಾರಿಸಿರೋ ಭಾಷೆ. ರಂಗಾಯಣ ರಘು ಅದ್ಭುತವಾಗಿ ಆದಿವಾಸಿ ಪಾತ್ರದಲ್ಲಿ ನಟಿಸಿದ್ದಾರೆ’ ಎಂದರು.