ಕಸ್ತೂರಿ ಮಹಲ್‌ನಲ್ಲಿ ಸೈಲೆಂಟಾಗಿ ಬಂದು ಬೆಚ್ಚಿ ಬೀಳಿಸ್ತೀನಿ : ಶಾನ್ವಿ ಶ್ರೀವಾಸ್ತವ
ಶಾನ್ವಿ ಶ್ರೀವಾಸ್ತವ ಮುಖ್ಯಪಾತ್ರದಲ್ಲಿರುವ ‘ಕಸ್ತೂರಿ ಮಹಲ್’ ಚಿತ್ರ ಇಂದು ತೆರೆ ಕಾಣುತ್ತಿದೆ. ದಿನೇಶ್ ಬಾಬು ನಿರ್ದೇಶನದ ಈ ಹಾರರ್ ಚಿತ್ರದ ನಿರ್ಮಾಪಕರು ರವೀಶ್ ಆರ್ ಸಿ. ಬಾಂಬೆಯಲ್ಲಿ ಜ್ವರದಲ್ಲಿ ಮಲಗಿದ್ರೂ ಶಾನ್ವಿ ಲವಲವಿಕೆಯಿಂದಲೇ ಚಿತ್ರದ ಬಗ್ಗೆ ಮಾತಾಡಿದ್ದಾರೆ.
ಪ್ರಿಯಾ ಕೆರ್ವಾಶೆ
ಈ ಸಿನಿಮಾದಲ್ಲಿ ನೀವು ದೆವ್ವವಾಗಿ ಹೆದರಿಸ್ತೀರಂತೆ ಹೌದಾ?
ಹೌದು, ಸೈಲೆಂಟಾಗಿ ಬಂದು ಬೆಚ್ಚಿ ಬೀಳೋ ಹಾಗೆ ಮಾಡ್ತೀನಿ. ‘ಕಸ್ತೂರಿ ಮಹಲ್’ ನನ್ನ ಎರಡನೇ ಹಾರರ್ ಸಿನಿಮಾ. ಮೊದಲೇ ಚಿತ್ರ ‘ಚಂದ್ರಲೇಖಾ’. ಎರಡೂ ಹಾರರ್ ಜಾನರ್ ಚಿತ್ರಗಳೇ ಆದರೂ ಆ ಪಾತ್ರಕ್ಕೂ ಈ ಪಾತ್ರಕ್ಕೂ ಸಾಕಷ್ಟುಡಿಫರೆನ್ಸ್ ಇದೆ. ಅಲ್ಲಿ ಸಿಕ್ಕಾಪಟ್ಟೆಮಾತು, ಕಿರುಚಾಟ ಎಲ್ಲ ಇದೆ. ಇದರಲ್ಲಿ ಮಾತು ಕಡಿಮೆ. ಲುಕ್, ಮೌನದಲ್ಲೇ ಎಲ್ಲವನ್ನೂ ಕನ್ವೇ ಮಾಡುವಂಥಾ ಆ್ಯಕ್ಟಿಂಗ್‌ಗೆ ಪ್ರಾಧಾನ್ಯತೆ.
ದಿನೇಶ್ ಬಾಬು ಅವರಂಥ ಹಿರಿಯ ನಿರ್ಮಾಪಕರ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಅವರ ಡೈರೆಕ್ಷನ್ ರೀತಿಯೇ ಭಿನ್ನ. ಒಂದು ನಿಮಿಷವೂ ಟೈಮ್ ವೇಸ್ಟ್ ಮಾಡಲ್ಲ. ನನ್ನಿಂದ ಏನು ಆ್ಯಕ್ಟಿಂಗ್ ತೆಗೆಸಬೇಕು ಅನ್ನೋದರ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಅವರು ನನ್ನಿಂದ ಯಾವ ರೀತಿಯ ಎಕ್ಸ್‌ಪ್ರೆಶನ್ ಬಯಸುತ್ತಿದ್ದಾರೆ ಅನ್ನೋದು ನನಗೂ ಗೊತ್ತಿತ್ತು. ಹೀಗಾಗಿ ಹೆಚ್ಚು ಟೇಕ್ ತಗೊಳ್ಳದೇ ಆ್ಯಕ್ಟ್ ಮಾಡೋದು ಸಾಧ್ಯವಾಯ್ತು. ಅವರಂಥಾ ಸೀನಿಯರ್ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದು ಬಹಳ ತೃಪ್ತಿ ಕೊಟ್ಟಿದೆ.
ಈ ಸಿನಿಮಾದಲ್ಲಿ ಬಹಳ ಖುಷಿ ಕೊಟ್ಟಸೀನ್?
ನನ್ ಸಿನಿಮಾ ಇದು. ಎಲ್ಲ ಸೀನ್ ನಂಗಿಷ್ಟನೇ. ಸಿನಿಮಾ ನೋಡಿ ನೀವು ಹೇಳ್ಬೇಕು, ಯಾವ ಸೀನ್ ಹೆಚ್ಚು ಇಷ್ಟಆಯ್ತು ಅಂತ.
'ಕಸ್ತೂರಿ ಮಹಲ್'ನಲ್ಲಿ ದೆವ್ವವಾಗಿ ಹೆದರಿಸುತ್ತಿದ್ದಾರೆ ಕ್ಯೂಟಿ ಶಾನ್ವಿ ಶ್ರೀವತ್ಸವ್.!
ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ನೀವೇ ಡಬ್ ಮಾಡಿದ್ರಿ. ಈ ಚಿತ್ರಕ್ಕೆ?
ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮೆಚ್ಯೂರ್‌್ಡ ವಾಯ್‌್ಸ ಬೇಕಿತ್ತು. ಹೀಗಾಗಿ ಬೇರೆಯವರು ಡಬ್ ಮಾಡಿದ್ರು. ‘ಅವನೇ ಶ್ರೀಮನ್ನಾರಾಯಣ’ದಲ್ಲಿ ನಾನೇ ಡಬ್ ಮಾಡಿದ್ದೆ. ಇದರಲ್ಲಿ ಮಾಡಿಲ್ಲ ಅಂತ ಬೇಸರ ಏನೂ ಇಲ್ಲ.
ಉತ್ತರ ಭಾರತದಿಂದ ಟಾಲಿವುಡ್, ಅಲ್ಲಿಂದ ಸ್ಯಾಂಡಲ್‌ವುಡ್, ಈಗ ಮಾಲಿವುಡ್‌ಗೂ ಹೋಗ್ತಿದ್ದೀರಿ? ಮಲಯಾಳಂ ಕಲಿತ್ರಾ?
ಹೌದು. ಇಂಡಿಯನ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಗಳ ಚಿತ್ರದಲ್ಲಿ ನಟಿಸಿರೋ ಬಗ್ಗೆ ಬಹಳ ಖುಷಿ ಇದೆ. ಮಲಯಾಳಂ ಕಲಿಯೋಕೆ ಟ್ರೈ ಮಾಡ್ತಿದ್ದೀನಿ. ಆದರೆ ಡಬ್ ಮಾಡುವಷ್ಟೆಲ್ಲ ಮಲಯಾಳಂ ಸ್ಲಾಂಗ್ ಕಲಿಯೋದು ಬಹಳ ಕಷ್ಟಅನಿಸುತ್ತೆ.
Kasturi Mahal: ದೆವ್ವದ ಹಿಂದೆ ಶಾನ್ವಿ ಶ್ರೀವಾತ್ಸವ್: ಚಿತ್ರದ ಪ್ರೋಮೋ ಬಿಡುಗಡೆ
ಟ್ರಾವೆಲ್ ಮಾಡ್ತೀರಿ, ಕಾಂಸೆಪ್‌್ಟಫೋಟೋಶೂಟ್ ಮಾಡ್ತಿದ್ದೀರಿ?
ನಾನು ಇತ್ತೀಚೆಗೆ ಹಿಮಾಚಲ ಪ್ರದೇಶದ ಕಡೆ ಹೋದೆ. ಅಲ್ಲಿ ಕಸೋಲ್ ಎಂಬಲ್ಲಿ ಐದು ದಿನ ಟ್ರೆಕಿಂಗ್ ಮಾಡಿದೆ. ಆಮೇಲೆ ಬೆಂಗಳೂರಿಗೆ ಬಂದೆ. ಈಗ ವಾಪಾಸ್ ಬಾಂಬೆಯಲ್ಲಿದ್ದೀನಿ. ಹಿಮಾಚಲದಲ್ಲಿ ವಿಪರೀತ ಚಳಿ, ಬೆಂಗಳೂರಲ್ಲಿ ಮಳೆ, ಬಾಂಬೆಯಲ್ಲಿ ಬಿಸಿಲು.
ಇಲ್ಲಿ ಸಿನಿಮಾ ನೋಡ್ರೀರಾ?
ಇಲ್ಲ, ನಾನೀಗ ಬಾಂಬೆಯಲ್ಲಿದ್ದೇನೆ. ಜ್ವರ ಇದೆ. ಈಗ ತಾನೇ ಡಾಕ್ಟರ್ ಕ್ಲಿನಿಕ್‌ನಿಂದ ಮನೆಗೆ ಹೋಗ್ತಿದ್ದೀನಿ. ಟೀಮ್ ಜೊತೆಗೆ ಫಸ್ಟ್ ಡೇ ಶೋ ನೋಡಬೇಕು ಅಂತ ಆಸೆ ಇತ್ತು. ಆದರೆ ಡಾಕ್ಟರ್ ಇನ್ನೂ ಮೂರು ದಿನ ರೆಸ್ಟ್ ಮಾಡಬೇಕು ಅಂದಿದ್ದಾರೆ. ಸೋಮವಾರ ಬೆಂಗಳೂರಿಗೆ ಬಂದು ಸಿನಿಮಾ ನೋಡೋ ಪ್ಲಾನ್ ಇದೆ.
"