ದರ್ಶನ್ ಸಿನಿಮಾ ರಾಬರ್ಟ್ ಬರಲಿ: ರವಿಚಂದ್ರನ್
ಎಲ್ಲೇ ಸಿಕ್ಕರೂ ನೇರ, ದಿಟ್ಟಮತ್ತು ಸ್ಪಷ್ಟವಾಗಿ ಮಾತನಾಡುವ ರವಿಚಂದ್ರನ್ ನಟನೆಯ ‘ಕನ್ನಡಿಗ’ ಚಿತ್ರದ ಮುಹೂರ್ತ ನಡೆದಿದೆ. ಬಿಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದ ಮುಹೂರ್ತದಲ್ಲಿ ಸಿಕ್ಕ ರವಿಚಂದ್ರನ್ ಮಾತಲ್ಲಿ ಸಿಕ್ಕ ಹೊಳಹುಗಳು ಇಲ್ಲಿವೆ.
ದರ್ಶನ್ ರಾಬರ್ಟ್ ಬರಲಿ
ಚಿತ್ರಮಂದಿರಗಳಿಂದ ದೂರ ಉಳಿದಿರುವ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯಲು ದೊಡ್ಡ ನಟರ ಹೊಸ ಚಿತ್ರಗಳು ಥಿಯೇಟರ್‌ಗಳಿಗೆ ಬರಬೇಕು. ಹಳೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡಿದರೆ ಪ್ರಯೋಜನ ಇಲ್ಲ. ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡಲಿ. ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ರೆಡಿ ಇರುವ ಸಿನಿಮಾ ಅದು.
ಚಿತ್ರಮಂದಿರಕ್ಕೆ ಬರಲು ನಾನು ರೆಡಿ
ನನ್ನ ಅಭಿನಯದ ‘ರವಿ ಬೋಪಣ್ಣ’ ಸಿನಿಮಾ ಸಿದ್ಧವಾಗಿದೆ. ಯಾವ ಚಿತ್ರವೂ ಬರಲ್ಲ ಎಂದರೆ ನಾನು, ನನ್ನ ಚಿತ್ರದ ಜತೆ ಥಿಯೇಟರ್‌ಗೆ ಬರಲು ರೆಡಿ ಇದ್ದೇನೆ. ಸಿನಿಮಾ ಎನ್ನುವುದು ಫೆä್ಲೕಟಿಂಗ್ ಕ್ಷೇತ್ರ. ಇವತ್ತಲ್ಲ, ನಾಳೆ ಜನ ಬಂದೇ ಬರುತ್ತಾರೆ. ಆ ನಂಬಿಕೆ ನನಗೆ ಇದೆ.
ಫರ್ಡಿನೆಂಡ್ ಕಿಟೆಲ್ ಕತೆಗೆ ರವಿಚಂದ್ರನ್ ಹೀರೋ
ಕನ್ನಡಿಗ ನನ್ನ ಜಾನರ್ ಚಿತ್ರವಲ್ಲ
ಬಿಎಂ ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಸಿನಿಮಾ ನನ್ನ ಜಾನರ್ ಅಲ್ಲ. ಆದರೆ, ಕಲಾವಿದ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಬೇಕು. ಹೀಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಕತೆ ನಾನು ಪೂರ್ತಿ ಕೇಳಿಲ್ಲ. ಆದರೆ, ನಿರ್ದೇಶಕರ ಕನಸು ಮತ್ತು ಯೋಚನೆ ನನಗೆ ಗೊತ್ತು. ಅದಕ್ಕೆ ನ್ಯಾಯ ಸಲ್ಲಿಸುವೆ. ‘ಕನ್ನಡಿಗ’ ಎನ್ನುವ ಟೈಟಲ್ ನನ್ನದೇ. ಈ ಹೆಸರಿನಲ್ಲಿ ಸಿನಿಮಾ ಮಾಡುವ ಆಸೆ ಇತ್ತು. ಆ ನಡುವೆ ಪುನೀತ್ ರಾಜ್‌ಕುಮಾರ್ ‘ವೀರ ಕನ್ನಡಿಗ’ ಹೆಸರಿನಲ್ಲಿ ಸಿನಿಮಾ ಮಾಡಿದರು.
ದಿನಾ ಸಾಯಬೇಕಿತ್ತಾ?
ನನಗೆ ಯಾವತ್ತಿಗೂ ಕೊರೋನಾ ಭಯ ಕಾಡಲಿಲ್ಲ. ಕೊರೋನಾ ನೆನಪಿಸಿಕೊಂಡು ದಿನಾ ಸಾಯೋದು ನನಗೆ ಬೇಕಿರಲಿಲ್ಲ. ಆದರೆ, ಒಂದಿಷ್ಟುಎಚ್ಚರಿಕೆಗಳನ್ನು ತೆಗೆದುಕೊಂಡಿದ್ದೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆ. ಅನಗತ್ಯ ತಿರುಗಾಡುವುದನ್ನು ನಿಲ್ಲಿಸಿದ್ದೆ. ಮಾಸ್ಕ್ ಹಾಕಿದರೆ ಕೊರೋನಾ ಬರಲ್ಲ ಅನ್ನೋದು ಸುಳ್ಳು.
ಜನರ ಭಯ ವ್ಯಾಪಾರಕ್ಕೆ ದಾರಿ
ಇಂಥ ವಿಕೋಪಗಳು ಬಂದಾಗ ಜನ ಎದುರಿಸುವ ಆರೋಗ್ಯ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ವ್ಯಾಪಾರ ಮಾಡುವುದು ತೀರಾ ಅನ್ಯಾಯ. ಕೊರೋನಾ ಒಂದು ಕಾಯಿಲೆ ಎನ್ನುವುದಕ್ಕಿಂತ ಅದೊಂದು ಸ್ಕಾ್ಯಮ್ ಆಯಿತು. ಈ ಸ್ಕಾ್ಯಮ್ ಕೆಲವರು ಹಣ ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿತು.
ಕ್ರೇಜಿಸ್ಟಾರ್ ಹುಟ್ಟು ಹಬ್ಬ; ಈ ಸ್ಪೇಷಲ್ ವಿಡಿಯೋ ಅವರ ಅಭಿಮಾನಿಗಳಿಗೆ!
ಸಿನಿಮಾ ವ್ಯಸನ ಬಿಟ್ರೆ ಬೇರೆ ಗೊತ್ತಿಲ್ಲ
ನನಗೆ ಸಿನಿಮಾ ಅಡಿಕ್ಷನ್ ಬಿಟ್ಟರೆ ಬೇರೆ ವ್ಯಸನ ಗೊತ್ತಿಲ್ಲ. ಡ್ರಗ್ಸ್ ‘ಶಾಂತಿ ಕ್ರಾಂತಿ’ ಚಿತ್ರದಿಂದಲೂ ಇದೆ. ಯಾಕೆಂದರೆ ಆಗ ನಾವು ಕತೆಗಾಗಿ ರಿಸಚ್‌ರ್ ಮಾಡುವಾಗ ಕಾಲೇಜುಗಳಲ್ಲಿ ಡ್ರಗ್ ಇರುವ ಸಂಗತಿ ತಿಳಿಯಿತು. ಅನೇಕ ಪ್ರತಿಷ್ಠಿತ ಕಾಲೇಜು ಅಂಗಳದಲ್ಲಿ ಡ್ರಗ್ ಆಗಲೇ ಇತ್ತು. ಈಗ ಅದೊಂದು ಇಶ್ಯೂ ಆಗಿ ಹೆಚ್ಚು ಪ್ರಚಾರ ಪಡೆಯುತ್ತಿರುವುದಕ್ಕೆ ಕಾರಣ ಸಿನಿಮಾದವರು ಇದರಲ್ಲಿ ಇದ್ದಾರೆ ಎನ್ನುವ ಸುದ್ದಿಗಳಿಂದ. ಮಾಧ್ಯಮಗಳು ಆ ನೆಗೆಟಿವ್ ಅಂಶಗಳನ್ನೇ ಯಾಕೆ ಹೆಚ್ಚು ಪ್ರಚಾರ ಮಾಡಿ ಪ್ರೊವೋಕ್ ಮಾಡುತ್ತಾರೋ ಗೊತ್ತಿಲ್ಲ.
"
ಯಂಗ್ ಸ್ಟಾರ್‌ಗಳಿಗೆ ಇಮ್ಯೂನಿಟಿ ಪವರ್ ಇಲ್ಲ
ಈಗಿನ ಯಂಗ್ ಸ್ಟಾರ್‌ಗಳಿಗೆ ಇಮ್ಯೂನಿಟಿ ಪವರ್ ಇಲ್ಲ. ಒಂದೆರಡು ಚಿತ್ರ ಸೋತ ಕೂಡಲೇ ಕುಸಿದು ಬೀಳುತ್ತಾರೆ. ನಾವೆಲ್ಲ ಹತ್ತು ಹನ್ನೆರಡು ಚಿತ್ರಗಳು ಸೋತರೂ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿದ್ವಿ. ಹೊಸ ಆಲೋಚನೆಗಳಿಂದ ಕತೆಗಳನ್ನು ಬರೆಯಲು ಶುರು ಮಾಡುತ್ತಿದ್ವಿ. ನನ್ನ ಮಕ್ಕಳು ಅವರ ಲೋಕದಲ್ಲಿ ಅವರು ಇದ್ದಾರೆ. ನಾನು ಅವರ ವಿಚಾರಕ್ಕೆ ಹೋಗಲ್ಲ. ನಾನು ನನ್ನದು ಅಂತ ಒಂದು ಇದೆ. ಈ ನನ್ನದಕ್ಕೆ ಬಂದರೆ ನಾನು ಅವರ ಜತೆ ಸಿನಿಮಾ ಮಾಡಬಹುದು.
ನನ್ನ ಹೊಸ ಆ್ಯಪ್ ಮಲ್ಟಿಪ್ಲೆಕ್ಸ್ ಇದ್ದಂತೆ
ನಾನು ಒಂದು ಆ್ಯಪ್ ಮಾಡುತ್ತಿದ್ದೇನೆ. ಅದರ ಅಂತಿಮ ತಯಾರಿ ನಡೆಯುತ್ತಿದೆ. ಈ ಆ್ಯಪ್ ನನ್ನ ಪ್ರಕಾರ ಮಲ್ಟಿಪ್ಲೆಕ್ಸ್‌ನಂತೆ ಪ್ರೇಕ್ಷಕರ ಮುಂದೆ ಬರಲಿದೆ. ಹೊಸ ಕತೆ, ಹೊಸ ಸಿನಿಮಾಗಳು ಈ ಆ್ಯಪ್‌ನಲ್ಲಿ ನೋಡಬಹುದು.