Asianet Suvarna News Asianet Suvarna News

ಫರ್ಡಿನೆಂಡ್‌ ಕಿಟೆಲ್‌ ಕತೆಗೆ ರವಿಚಂದ್ರನ್‌ ಹೀರೋ

ಕನ್ನಡದ ಮೊದಲ ನಿಘಂಟು ತಜ್ಞ ಎಂದು ಖ್ಯಾತರಾಗಿರುವ ಫರ್ಡಿನೆಂಡ್‌ ಕಿಟೆಲ್‌ ಅವರ ಜೀವನ ಪುಟಗಳ ಹಿನ್ನೆಲೆಯಲ್ಲಿ ಜಟ್ಟಗಿರಿರಾಜ್‌ ಸಿನಿಮಾ ಮಾಡುತ್ತಿದ್ದಾರೆ. ಚರಿತ್ರೆಯನ್ನು ಆಧರಿಸಿ ನೈಜ ಹೆಜ್ಜೆ ಗುರುತುಗಳ ಈ ಚಿತ್ರವನ್ನು ಕಮರ್ಷಿಯಲ್ಲಾಗಿಯೂ ರೂಪಿಸಬೇಕು ಎನ್ನುವುದು ಗಿರಿರಾಜ್‌ ಆಲೋಚನೆ. ಈ ಚಿತ್ರಕ್ಕೆ ರವಿಚಂದ್ರನ್‌ ಹೀರೋ ಆಗುತ್ತಿದ್ದಾರೆ. 

Kannada actor Ravichandran acts as a Ferdinand Kittel role
Author
Bengaluru, First Published Jun 10, 2020, 4:48 PM IST

ಕನ್ನಡದ ಮೊದಲ ನಿಘಂಟು ತಜ್ಞ ಎಂದು ಖ್ಯಾತರಾಗಿರುವ ಫರ್ಡಿನೆಂಡ್‌ ಕಿಟೆಲ್‌ ಅವರ ಜೀವನ ಪುಟಗಳ ಹಿನ್ನೆಲೆಯಲ್ಲಿ ಜಟ್ಟಗಿರಿರಾಜ್‌ ಸಿನಿಮಾ ಮಾಡುತ್ತಿದ್ದಾರೆ. ಚರಿತ್ರೆಯನ್ನು ಆಧರಿಸಿ ನೈಜ ಹೆಜ್ಜೆ ಗುರುತುಗಳ ಈ ಚಿತ್ರವನ್ನು ಕಮರ್ಷಿಯಲ್ಲಾಗಿಯೂ ರೂಪಿಸಬೇಕು ಎನ್ನುವುದು ಗಿರಿರಾಜ್‌ ಆಲೋಚನೆ. ಈ ಚಿತ್ರಕ್ಕೆ ರವಿಚಂದ್ರನ್‌ ಹೀರೋ ಆಗುತ್ತಿದ್ದಾರೆ.

ಸ್ವಾತಂತ್ರ್ಯ ಹೋರಾಟ, ಭಾಷಾ ತಜ್ಞನ ಜೀವನ ಪಯಣ, ಅವರ ಕುಟುಂಬವನ್ನು ಭೇಟಿ ಮಾಡುವ ವ್ಯಕ್ತಿ... ಹೀಗೆ ಹಲವಾರು ವಿಚಾರಗಳನ್ನು ಹೇಳುವ ಈ ಚಿತ್ರಕ್ಕೆ ಎನ್‌ಎಸ್‌ ರಾಜ್‌ಕುಮಾರ್‌ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.

ಬಾಹುಬಲಿ ನಿರ್ದೇಶಕನನ್ನು ಸ್ವಾರ್ಥಿ ಎಂದ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ

‘1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ನಡೆಯುವ ಕತೆ ಇದು. 1857ರ ನಂತರ ಐದಾರು ವರ್ಷಗಳಲ್ಲಿ ಚಾರಿತ್ರಿಕ ವಿದ್ಯಮಾನಗಳು ಸಂಭವಿಸುತ್ತವೆ. ಇದೇ ನನ್ನ ಕತೆಗೆ ಆಧಾರ. ಇದೊಂದು ಐತಿಹಾಸಿಕ ಹಿನ್ನೆಲೆಯ ಸಿನಿಮಾ. ಇದಕ್ಕೆ ಸಾಕಷ್ಟುಅಧ್ಯಯನ ಮಾಡಿಯೇ ಕತೆ ಮಾಡಿದ್ದು, ರವಿಚಂದ್ರನ್‌ ಅವರ ಜತೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇನೆ. ಕತೆ ಅವರಿಗೆ ಇಷ್ಟವಾಗಿದೆ. ಪೂರ್ತಿ ಚಿತ್ರಕಥೆ ರೀಡಿಂಗ್‌ ಕೊಡಬೇಕಿದೆ’ ಎನ್ನುತ್ತಾರೆ ನಿರ್ದೇಶಕ ಗಿರಿರಾಜ್‌.

ಆದರೆ, ಕತೆಯ ಒಂದು ಸಾಲು ಕೇಳಿದ ಕೂಡಲೇ ರವಿಚಂದ್ರನ್‌ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಅಲ್ಲಿಗೆ ಕ್ರೇಜಿಸ್ಟಾರ್‌ ಹಾಗೂ ನಿರ್ದೇಶಕ ಜಟ್ಟಗಿರಿರಾಜ್‌ ಜತೆಯಾಗುತ್ತಿದ್ದಾರೆ. ಸಂವೇದನೆ ಇರುವ ಸೂಕ್ಷ್ಮ ಕತೆಗಳ ಮೂಲಕ ಗಮನ ಸೆಳೆದಿರುವ ಜಟ್ಟಗಿರಿರಾಜ್‌ ಅವರು ರವಿಚಂದ್ರನ್‌ ನಟನೆಯ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬುದೇ ಸದ್ಯದ ಸುದ್ದಿ.

Follow Us:
Download App:
  • android
  • ios