- ಪ್ರಿಯಾ ಕೆರ್ವಾಶೆ

ನೀವೊಬ್ಬ ಯುವ ಗಾಯಕ, ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ಜೊತೆಗೆ ಹೇಗೆ ಕನೆಕ್ಟ್ ಆದ್ರಿ? ಪಿಟ್ಟ ಕಥಲು ಅವಕಾಶ ಹೇಗೆ ಸಿಕ್ಕಿತು?

ಆ್ಯಕ್ಟ್ ಮಾಡ್ತೀನಿ ಅಂತ ನಾನ್ಯಾವತ್ತೂ ಅಂದ್ಕೊಂಡೇ ಇರಲಿಲ್ಲ. 2019ನಲ್ಲಿ ನನಗೆ ಫಿಲ್ಮಫೇರ್ ಅವಾರ್ಡ್ ಬಂದಿತ್ತು. ಪ್ರಶಸ್ತಿ ಸ್ವೀಕರಿಸಲು ಹೋಗಿದ್ದಾಗ ಮಹಾನಟಿ ನಿರ್ದೇಶನಕ್ಕೆ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ನಾಗ ಅಶ್ವಿನ್ ಅವರೂ ಸಿಕ್ಕಿದ್ರು. ಅಲ್ಲಿ ನಮ್ಮಿಬ್ಬರಿಗೂ ಪರಿಚಯ ಆಯ್ತು. ಆಮೇಲಿಂದ ಸಂಪರ್ಕದಲ್ಲಿದ್ವಿ. ಕೆಲವು ವಾರಗಳ ಬಳಿಕ ಅವರು ಪೋನ್ ಮಾಡಿ ಒಂದು ಸ್ಕ್ರಿಪ್ಟ್ ಇದೆ, ನಿನಗೆ ಈ ರೋಲ್ ಸೂಟ್ ಆಗುತ್ತೆ ಅನಿಸುತ್ತೆ, ಆ್ಯಕ್ಟ್ ಮಾಡ್ತೀಯಾ ಅಂತ ಕೇಳಿದ್ರು. ನಂಗೆ ಮ್ಯೂಸಿಕ್ ಮಾಡೋದಷ್ಟೇ ಇಷ್ಟ ಅಂದೆ. ಆಗ ಅವರು ಸ್ಕ್ರಿಪ್ಟ್ ಓದಿ ನೋಡು, ಇಷ್ಟ ಆದ್ರೆ ಮಾಡು ಅಂದ್ರು. ಸ್ಕ್ರಿಪ್ಟ್ ಓದಿದ್ದೇ ಸಖತ್ ಇಷ್ಟ ಆಗಿಬಿಟ್ಟಿತು. ಯುಟೋಪಿಯನ್ ಜಗತ್ತಿನ ವರ್ಚ್ಯವಲ್ ರಿಯಾಲಿಟಿ ಬಗೆಗಿನ ಕತೆಯದು. ತುಂಬ ವಿಚಿತ್ರ ಕ್ಯಾರೆಕ್ಟರ್.

ಕದ್ದುಮುಚ್ಚಿ ಖ್ಯಾತ ನಟಿಗೆ ಮುತ್ತಿಟ್ಟ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ? 

ಮೊದಲ ಬಾರಿ ನಟಿಸೋದು ಕಷ್ಟ ಅಂತ ಅನಿಸಲಿಲ್ವಾ?

ಸ್ಕ್ರಿಪ್ಟ್ ಏನೋ ಇಷ್ಟ ಆಯ್ತು, ಒಪ್ಕೊಂಡೆ. ಆದರೆ ಅಷ್ಟು ದೊಡ್ಡ ಡೈರೆಕ್ಟರ್ ಜೊತೆ ಕೆಲಸ ಮಾಡೋಕೆ ನರ್ವಸ್ ಇದ್ದೇ ಇತ್ತು. ಅವರು ಮಾತ್ರ ನೀನು ಈಗ ಹೇಗಿದ್ದೀಯೋ ಹಾಗೇ ಇರು ಸಾಕು, ಆ್ಯಕ್ಟಿಂಗ್ ಅಂತ ಎಕ್ಸ್ಟ್ರಾ ಏನೂ ಮಾಡೋದು ಬೇಡ ಅಂದರು. ನನಗಾಗ ನಿರಾಳ ಆಯ್ತು.  

ಮೊದಲ ಸಿನಿಮಾದಲ್ಲೇ ಶ್ರುತಿ ಹಾಸನ್‌ರಂಥಾ ನಟಿ ಜೊತೆಗೆ ಅಭಿನಯಿಸಿದ ಅನುಭವ?

ಅದು ಮತ್ತೊಂದು ಸರ್ಪೈಸ್. ಶ್ರುತಿ ಹಾಸನ್ ಬಹಳ ಜನಪ್ರಿಯ, ಅಷ್ಟೇ ಅದ್ಭುತ ನಟಿ. ಆದರೆ ಆಕೆ ನನ್ನ ಜೊತೆಗೆ ಬೆಸ್ಟ್ ಫ್ರೆಂಡ್ ರೀತಿ ಇದ್ದರು. ನಾಗ್ ಮತ್ತು ಶ್ರುತಿ ಪ್ರತೀ ಹಂತದಲ್ಲೂ ನಂಗೆ ನಟನೆಯ ಪಾಠಗಳನ್ನು ಕಲಿಸಿಕೊಡುತ್ತಾ ಹೋದರು.

ಕ್ಯಾರೆಕ್ಟರ್ ಬಗ್ಗೆ?

ಇಡೀ ಸಿನಿಮಾದಲ್ಲಿರೋದು ಡಾರ್ಕ್ ಫ್ಯೂಚರಿಸ್ಟಿಕ್ ಜಗತ್ತು, ಒಂಥರಾ ರಿಯಾಲಿಟಿಯಲ್ಲಿಲ್ಲದ ಯುಟೋಪಿಯನ್ ಜಗತ್ತದು. ವರ್ಚ್ಯುವಲ್ ರಿಯಾಲಿಟಿ ಅನ್ನೋದು ಪಾರಮ್ಯ ಮರೆಯುವ ಕತೆ. ಆ ಜಗತ್ತಿನಲ್ಲಿ ನಂದೂ ಒಂದು ಪಾತ್ರ. ಅದೇನು ಅಂತ ಹೇಳಲ್ಲ, ನೀವು ಸಿನಿಮಾದಲ್ಲೇ ನೋಡಿ.

ಸುದೀಪ್ ಜೊತೆ ‘ಕಣ್ಣು ಮಣಿಯೇ..ಕಣ್ಣ ಹೊಡಿಯೇ’ ಎಂದು ಹಾಡಿದ ಸಂಜಿತ್ ಹೆಗ್ಡೆ 

ನಿಮ್ಮ ಶ್ರುತಿ ಹಾಸನ್ ನಡುವಿನ ಲಿಪ್ ಲಾಕ್ ದೃಶ್ಯ, ಹಸಿಬಿಸಿ ದೃಶ್ಯಗಳು ಚರ್ಚೆಗೆ ಗ್ರಾಸವಾಗಿದೆ, ಅದು ನಿಮ್ಮ ಗಮನಕ್ಕೆ ಬಂದಿದ್ಯಾ?

ಆ ಪಾತ್ರಕ್ಕೆ ನಾಗ ಅಶ್ವಿನ್ ಏನು ಹೇಳಿದ್ರೋ ಅದನ್ನು ಮಾಡಿದ್ದೇನೆ. ಸ್ಕ್ರಿಪ್ಟ್‌ಗೆ ಹಾಗೊಂದು ಅಭಿನಯ ಬೇಕಿತ್ತು, ಮಾಡಿದೆ ಅಷ್ಟೇ.

ಆದ್ರೂ ಮೊದಲ ಸಿನಿಮಾದಲ್ಲಿ ಈ ಥರದ ಬೋಲ್ಡ್ ಅಭಿವ್ಯಕ್ತಿ ನರ್ವಸ್, ಮುಜುಗರ ತರಿಸಿಲ್ವಾ?

ಅದು ಸಿನಿಮಾ, ಸ್ಕ್ರಿಪ್ಟ್ ಏನು ಡಿಮ್ಯಾಂಡ್ ಮಾಡುತ್ತೋ ಅದನ್ನು ನಾನು ಮಾಡಲೇ ಬೇಕು. ಲಿಪ್‌ಲಾಕ್, ಇತರ ಇಂಟಿಮೇಟ್ ಸೀನ್‌ಗಳೂ ಆ್ಯಕ್ಟಿಂಗ್‌ನ ಭಾಗವೇ. ಇಂಥಾ ಸಂದರ್ಭ ಶ್ರುತಿ ಬಹಳ ಸಪೋರ್ಟಿವ್ ಆಗಿದ್ರು. ನಾವಿಬ್ರೂ ಬೆಸ್ಟ್ ಫ್ರೆಂಡ್ಸ್. ಎಲ್ಲಿ ಎಂಥಾ ಸೀನ್ ಶೂಟ್ ಮಾಡಿದ್ರೂ ಎಂಡ್ ಆ್ ದಿ ಡೇ ನಾವೆಲ್ಲ ಪ್ರೆಂಡ್ಸ್ ಅಷ್ಟೇ. ಈ ಸೀನ್ ಅಂಥಲ್ಲಾ, ನಾನು ಬಹಳ ಸಿಟ್ಟಲ್ಲಿರುವ, ಎಮೋಶನಲ್ ಆಗಿರುವ ಇತರೇ ಸೀನ್‌ಗಳೂ ಇವೆ. ಅದೆಲ್ಲವೂ ಆ ಸಿನಿಮಾದ ಭಾಗ. ನನಗೆ ನಟನೆಯ ಒಂದಕ್ಷರವೂ ಗೊತ್ತಿಲ್ಲ. ಅವರು ಕಲಿಸಿಕೊಟ್ಟರು. ಇಲ್ಲಿ ಮುಜುಗರ, ನರ್ವಸ್ ಪ್ರಶ್ನೆಯೇ ಇಲ್ಲ.

ನೆಕ್ಸ್ಟ್ ನಾವು ಸಂಜಿತ್ ಅವರನ್ನು ಆ್ಯಕ್ಟಿಂಗ್‌ನಲ್ಲೂ ನೋಡಬಹುದಾ?

ಸದ್ಯ ನಾನು ಫುಲ್ ಲೆನ್ತ್ ಆಲ್ಬಂ ಮಾಡುತ್ತಿದ್ದೇನೆ. ಕನ್ನಡ, ಇಂಗ್ಲೀಷ್, ಹಿಂದಿಯಲ್ಲದು ಬರಲಿದೆ. ತಮಿಳು, ತೆಲುಗಿನಲ್ಲೂ ತರುವ ಯೋಚನೆ ಇದೆ. ಆ ಬಗ್ಗೆ ೆಕಸ್ ಮಾಡ್ತಿದ್ದೀನಿ. ಎರಡು ವೆಬ್ ಸ್ಕ್ಟಿಪ್ಟ್ ಸೀರೀಸ್ ಬಂದಿದೆ, ಆದರೂ ಈ ಫಿಲ್ಮಂ ಥರ ಮನಸ್ಸಿಗೆ ತೃಪ್ತಿ ಕೊಡುವ ಪಾತ್ರ ಸಿಕ್ಕರೆ ಮಾಡಿದರೂ ಮಾಡುವೆ, ಆ ಬಗ್ಗೆ ನಂಗೇ ಗ್ಯಾರೆಂಟಿ ಇಲ್ಲ. ಪಿಟ್ಟ ಕಥಲುಗೆ ನಾನು ಮ್ಯೂಸಿಕ್ ಸಹ ಮಾಡಿದ್ದೀನಿ.

ಆಲ್ಬಂ ಬಗ್ಗೆ ಹೇಳಿ?

ಇಡೀ ಜಗತ್ತಿನ ಆರ್ಟಿಸ್ಟ್‌ನ ಒಟ್ಟು ಸೇರಿಸಿ ಮಾಡುತ್ತಿರುವ ಆಲ್ಬಂ ಇದು. ಸ್ವಾತಂತ್ರ್ಯಾ ನಂತರ ಈ ಥರದ ಪ್ರಯೋಗಗಳಾಗಿಲ್ಲ. ನನಗೀಗ ಇಪ್ಪತ್ತೆರಡು ವರ್ಷ ವಯಸ್ಸು. ಹದಿನೆಂಟರಿಂದ ಇಪತ್ತೆರಡು ವರ್ಷಗಳ ನನ್ನ ಬದುಕನ್ನು ನಾನೇ ನೋಡಿಕೊಂಡು ಬರೆದಿರುವ ಹಾಡುಗಳಿವೆ. ಇಡೀ ಮ್ಯೂಸಿಕ್ ನಾನೇ ಪ್ರೊಡ್ಯೂಸ್ ಮಾಡಿದ್ದೇನೆ.